ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‍ಘಡ, ರಾಜಾಸ್ಥಾನ, ಮಿಜೋರಾಂ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ: ಕೇಂದ್ರ ಚುನಾ ವಣಾ ಆಯೋಗ ಮಧ್ಯ ಪ್ರದೇಶ, ಮಿಜೋ ರಾಂ, ರಾಜಾಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‍ಗಢ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಿದ್ದು, ಛತ್ತೀಸ್‍ಗಢ್‍ದಲ್ಲಿ ಎರಡು ಹಂತದಲ್ಲಿ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು, ಮಧ್ಯ ಪ್ರದೇಶ ಹಾಗೂ ಮಿಜೋ ರಾಂನಲ್ಲಿ ನವೆಂಬರ್ 28ಕ್ಕೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್ ಗಢದಲ್ಲಿ ನವೆಂಬರ್ 12 ಮತ್ತು 20ಕ್ಕೆ ಎರಡು ಹಂತದ ಚುನಾವಣೆ ನಡೆಯಲಿದೆ ಎಂದರು. ತೆಲಂಗಾಣ ಮತ್ತು ರಾಜಸ್ಥಾನ ದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯುಲಿದ್ದು, ಡಿಸೆಂಬರ್ 11ಕ್ಕೆ ಎಲ್ಲಾ ಐದು ರಾಜ್ಯಗಳ ಚುನಾವಣೆಯ ಫಲಿ ತಾಂಶ ಪ್ರಕಟವಾಗಲಿದೆ ಎಂದು ರಾವತ್ ತಿಳಿಸಿದ್ದಾರೆ. ಚುನಾವಣೆ ನಡೆಯಲಿರುವ ಈ ಐದು ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾವತ್ ತಿಳಿಸಿದ್ದಾರೆ.