ನನಗೆ ಸ್ವಂತ ಮನೆಯಿಲ್ಲ, ಮನೆ ಖರೀದಿಗೆ ಇಟ್ಟ ಹಣ ‘ಶಕ್ತಿಧಾಮ’ದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸ್ತೇನೆ…

`ಪುನೀತ ನಮನ’ದಲ್ಲಿ ತೆಲುಗು ನಟ ವಿಶಾಲ್ ಪುನರುಚ್ಛಾರ

ಬೆಂಗಳೂರು, ನ.೧೬-ಪುನೀತ್ ರಾಜ್ ಕುಮಾರ್ ಅವರು ಹೊತ್ತಿದ್ದ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ಈ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ತೆಲುಗು ನಟ ವಿಶಾಲ್ ಇಂದಿಲ್ಲಿ ಪುನರುಚ್ಚರಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಮಂಗಳವಾರ ನಡೆದ `ಪುನೀತ ನಮನ’ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ನನ್ನ ಸಹೋ ದರ ಪುನೀತ್‌ಗೆ ನೀಡಿರುವ ಮಾತನ್ನು ಉಳಿಸಿಕೊಳ್ಳುವೆ, ಮಕ್ಕಳು ಎಂದರೆ ದೇವರು. ದೇವರಂಥ ಮಕ್ಕಳಿಗೆ ನನ್ನ ನಮಸ್ಕಾರ ಗಳು. ನೀವೆಲ್ಲಾ ಪುನೀತ್ ಅವರಿಗೆ ನಮನ ಸಲ್ಲಿಸಲು ಬಂದಿದ್ದೀರಿ. ನಿಮ್ಮ ಜೊತೆ ನಾವೆಲ್ಲಾ ಇದ್ದೀವಿ ಎಂದರು. ನಾನೊಬ್ಬ ಕನ್ನಡಿಗ. ನನ್ನ ಅಪ್ಪ ಕನ್ನಡಿಗ, ಕನ್ನಡ ಸ್ವಲ್ಪ, ಸ್ವಲ್ಪ ಬರುತ್ತದೆ ಎಂದು ಮಾತು ಆರಂಭಿಸಿದ ವಿಶಾಲ್, ಪುನೀತ್ ನನ್ನ ಅಣ್ಣ… ಅವರ ಮುಖ ಸದಾ ನನಗೆ ಕಾಣ ಸುತ್ತದೆ ಎಂದು ಹೇಳುವ ಮೂಲಕ ಗದ್ಗದಿತರಾದರಲ್ಲದೆ, ಅಪ್ಪು ಇಲ್ಲದ ನೋವು
ಎಲ್ಲರಲ್ಲಿಯೂ ಕಾಣ ಸುತ್ತಿದೆ. ಅಪ್ಪು ನಿಧನ ಅರಗಿಸಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಒಳ್ಳೆಯದು ಮಾಡಬೇಕೆಂದು ಎಲ್ಲರಿಗೂ ಅನಿಸುವುದಿಲ್ಲ. ನನ್ನ ಹುಟ್ಟುಹಬ್ಬದ ದಿನದಂದೇ ಪುನೀತ್ ನಿಧನರಾದರು. ಅವರ ಜನಪರ ಕಾರ್ಯಗಳನ್ನು ಮುಂದುವರೆಸಬೇಕಿದೆ ಎಂದರು. ನಂತರ ತೆಲುಗು ಮತ್ತು ಮಧ್ಯೆ-ಮಧ್ಯೆ ಇಂಗ್ಲೀಷ್‌ನಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಪ್ರಚಾರ ಅಥವಾ ಹಣಕ್ಕೋಸ್ಕರ ನಾನು ಈ ಕೆಲಸ ಮಾಡ್ತಿಲ್ಲ. ಇಲ್ಲಿಯವರೆಗೆ ಇರಲು ನನಗೆ ಸ್ವಂತಃ ಮನೆ ಇಲ್ಲ. ೧೬ ವರ್ಷದಿಂದ ನಾನು ಅಪ್ಪ-ಅಮ್ಮನ ಮನೆಯಲ್ಲಿ ಇದ್ದೀನಿ. ಅದಕ್ಕಾಗಿ ತೆಗೆದಿಟ್ಟಿದ್ದ ಹಣವನ್ನು ‘ಶಕ್ತಿಧಾಮ’ದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವೆ. ಪರವಾಗಿಲ್ಲ ಮುಂದಿನ ವರ್ಷ ನಾನು ಅದನ್ನು ಖರೀದಿ ಮಾಡ್ತೀನಿ. ಇಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಣ್ಣ ಇದ್ದಾರೆ, ನೀವು ಇದ್ದೀರಿ. ನಿಮ್ಮ ಹತ್ತಿರ ನಾನು ಪ್ರಾಮಾಣ ಕವಾಗಿ ಕೇಳ್ತಾ ಇದ್ದೀನಿ. ನನಗೊಂದು ಅವಕಾಶ ಕೊಡಿ. ನಾನು ಆ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳೀನಿ ಎಂದರು. ಆದರೆ ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಸೇವೆಗಳನ್ನು ಮುಂದುವರೆಸುತ್ತೇನೆ ಎಂದರಲ್ಲದೆ, ಪುನೀತ್ ರಾಜ್‌ಕುಮಾರ್ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಈಗಾಗಲೇ ಹೇಳಿರುವೆ. ಈ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರಲ್ಲದೆ, ಶಕ್ತಿಧಾಮದ ಜವಾಬ್ದಾರಿಯನ್ನು ನನಗೆ ಕೊಡಿ ಎಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾತನಾಡಿದ ವಿಶಾಲ್, ಪುನೀತ್ ರಾಜ್‌ಕುಮಾರ್ ನನ್ನ ಒಳ್ಳೆಯ ಸ್ನೇಹಿತ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್‌ಗೆ ಪ್ರಾಮಿಸ್ ಮಾಡುತ್ತಿದ್ದೇನೆ. ಅವರಿಗೆ ಈಗಾಗಲೇ ಹೇಳಿರುವ ಮಾತು ನಡೆಸಿಕೊಡುತ್ತೇನೆ. ಬದುಕಿದ್ದ ವೇಳೆ ಪುನೀತ್ ಅವರು ಮಾಡಿರುವ ಸಮಾಜಮುಖಿ ಸೇವೆಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಅವುಗಳ ಬಗ್ಗೆ ಇದೀಗ ಇಡೀ ದೇಶಕ್ಕೆ ಗೊತ್ತಾಗಿವೆ. ನೀವು ಮಾಡುತ್ತಿದ್ದ ಕಾರ್ಯವನ್ನು ನಾನು ಮುಂದುವರೆಸುತ್ತೇನೆ ಎಂದರು. ಅಪುö್ಪ ಒಳ್ಳೆಯವರು. ಅವರ ಪಾರ್ಥಿವ ಶರೀರವನ್ನು ನೋಡಲು ನನಗೆ ಧೈರ್ಯವೇ ಬರಲಿಲ್ಲ. ಈಗಲೂ ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಭಾವುಕರಾದರು. ಪುನೀತ ನಮನ ಕಾರ್ಯಕ್ರಮದಲ್ಲಿ ಮೈಸೂರಿನ ಶಕ್ತಿಧಾಮ ಮಕ್ಕಳೂ ಪಾಲ್ಗೊಂಡಿದ್ದರು. ವಿಶಾಲ್‌ರ ಈ ಮಾತನ್ನು ಕೇಳಿ ಆ ಮಕ್ಕಳು ಮತ್ತಷ್ಟು ಭಾವುಕರಾದರು.