ಚೆಕ್‌ಪೋಸ್ಟ್ ಗೆ ಟೆಂಪೋ ಡಿಕ್ಕಿ: ಎಎಸ್‍ಐ  ಸೇರಿ ಐವರು ಪೊಲೀಸರು ಪಾರು

ಮಂಡ್ಯ, ಏ.24(ನಾಗಯ್ಯ)- ಅತಿ ವೇಗವಾಗಿ ಬಂದ ಗೂಡ್ಸ್ ಟೆಂಪೋ ವೊಂದು ಕೊರೊನಾ ತಪಾಸಣಾ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಐವರು ಪೊಲೀಸರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಶುಕ್ರವಾರ ನಡೆದಿದೆ.

ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬಂದ ಟೆಂಪೋ , ಚೆಕ್‍ಪೋಸ್ಟ್‍ನ ಬ್ಯಾರಿಕೇಡ್ ಗುದ್ದಿ ಪಲ್ಟಿಯಾಗಿದೆ. ಘಟನೆ ವೇಳೆ ತಪಾಸಣೆ ನಡೆಸುತ್ತಿದ್ದ ಓರ್ವ ಎಎಸ್‍ಐ, ನಾಲ್ವರು ಪೊಲೀಸರು ಜಂಪ್ ಮಾಡಿದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗದ ಚಾಲ ನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು, ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.