ತಿ.ನರಸೀಪುರ: ಕೊರೊನಾ ಕಫ್ರ್ಯೂಗೆ ಸಂಪೂರ್ಣ ಬೆಂಬಲ

ತಿ.ನರಸೀಪುರ, ಏ.28(ಎಸ್‍ಕೆ)- ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಗೊಳಿಸಿರುವ ಕೊರೊನಾ ಕಫ್ರ್ಯೂಗೆ ಪಟ್ಟಣ ದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯು ಹಿಡಿತಕ್ಕೆ ಸಿಗದೆ ಸಾರ್ವಜನಿ ಕರಿಗೆ ಸಂಕಷ್ಟ ತಂದೊಡ್ಡಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ಇದರ ನಿಯಂತ್ರಣ ಕ್ಕಾಗಿ ಎರಡು ವಾರಗಳ ಕಾಲ ಕಫ್ರ್ಯೂ ಘೋಷಿಸಿದ್ದು, ಮೊದಲ ದಿನವಾದ ಇಂದು ತಾಲೂಕಿನಾದ್ಯಂತ ನಿರೀಕ್ಷೆಗೂ ಮೀರಿದ ಬೆಂಬಲ ಕಂಡು ಬಂತು.

ಸದಾ ಜನಜಂಗುಳಿಯಿಂದ ತುಂಬಿ ರುತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಮೆಡಿಕಲ್ ಸ್ಟೋರ್‍ಗಳು, ಬ್ಯಾಂಕ್‍ಗಳು, ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವ್ಯಾಪಾರ-ವಹಿವಾಟನ್ನು ಬಂದ್ ಮಾಡುವ ಮೂಲಕ ಸರ್ಕಾರದ ಉದ್ದೇಶಕ್ಕೆ ಪಟ್ಟಣದ ದಿನಸಿ ಅಂಗಡಿ ಮಾಲೀಕರು, ತರಕಾರಿ ವ್ಯಾಪಾರಿಗಳು ಸಾಥ್ ನೀಡಿದರು.

ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ಕಫ್ರ್ಯೂ ಹಿನ್ನೆಲೆಯಲ್ಲಿ ರಸ್ತೆಗಿಳಿಯದೇ ಬಸ್ ನಿಲ್ದಾಣದಲ್ಲೇ ಉಳಿದುಕೊಂಡವು. ಪ್ರಯಾಣಿಕರಿಗೆ ಮೊದಲೇ ಕಫ್ರ್ಯೂ ಬಗ್ಗೆ ಮಾಹಿತಿ ಇದ್ದ ಕಾರಣ ಯಾವೊಬ್ಬ ಪ್ರಯಾ ಣಿಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ಅಗತ್ಯ ವಸ್ತು ಖರೀದಿಸಲು ಬೆಳಗ್ಗೆ 6ರಿಂದ 10 ರವರೆಗೆ ನೀಡಿದ್ದ ಸಮಯಾವ ಕಾಶದಲ್ಲಿ ಜನತೆ ಅಗತ್ಯ ವಸ್ತುಗಳನ್ನು ಖರೀದಿಸಿ, ಮನೆಗೆ ತೆರಳಿದರು. 10 ಗಂಟೆಯ ನಂತರ ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು.

ಕಫ್ರ್ಯೂ ಹಿನ್ನೆಲೆಯಲ್ಲಿ ಸದಾ ಜನರಿಂದ ಗಿಜಿಗುಡುತಿದ್ದ ಲಿಂಕ್ ರಸ್ತೆ, ಕಾಲೇಜು ರಸ್ತೆ, ಮಾರುಕಟ್ಟೆ ರಸ್ತೆ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬ್ಯಾಂಕ್‍ಗಳು ಮಧ್ಯಾಹ್ನ 2 ಗಂಟೆ ತನಕ ಕಾರ್ಯ ನಿರ್ವಹಿಸಿದರೂ ಗ್ರಾಹಕರ ಕೊರತೆ ಎದುರಾಯಿತು. ಸರ್ಕಾರಿ ಕಚೇರಿಗಳಲ್ಲಿ ಶೇ.50 ಮಂದಿ ನೌಕರರು ಕೆಲಸಕ್ಕೆ ಹಾಜರಾದರೂ ಸಾರ್ವಜನಿಕರು ಕಚೇರಿಯೆಡೆಗೆ ಸುಳಿ ಯಲಿಲ್ಲ. ಕಫ್ರ್ಯೂ ನಡುವೆಯೂ ಕೆಲವು ಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದನ್ನು ಕಂಡು ಪೆÇಲೀಸರು ಎಚ್ಚರಿಕೆ ನೀಡಿ ಬಾಗಿಲು ಮುಚ್ಚಿಸಿ ದರು. ಪಟ್ಟಣ ಠಾಣೆ ಸಬ್‍ಇನ್ಸ್‍ಪೆಕ್ಟರ್ ಹೆಚ್. ಡಿ.ಮಂಜು ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಂದೋಬಸ್ತ್ ಏರ್ಪಡಿಸಲಾಗಿತ್ತು.