ಅಕ್ರಮವಾಗಿ ಸಂಗ್ರಹಿಸಿದ್ದ 3.5 ಟನ್ ಅಕ್ಕಿ ವಶಕ್ಕೆ, ಆರೋಪಿ ಪರಾರಿ

ನಂಜನಗೂಡು, ಮೇ 17(ರವಿ)-ನಗರದ ಶಂಕರಪುರ ಬಡಾವಣೆಯಲ್ಲಿರುವ ಅಕ್ಕಿ ಗಿರಣಿಯೊಂದರ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3.5 ಟನ್ ಪ್ರಮಾಣದ ಪಡಿತರ ಅಕ್ಕಿಯನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ನಗರದ ಬಿಸ್ಮಿಲ್ಲಾ ಸಾಮಿಲ್ ಮಾಲೀಕ ಸೋಹಿಲ್ ಆರೋಪಿಯಾಗಿದ್ದು, ಈತ ತನ್ನ ಗೋದಾಮಿನಲ್ಲಿ 75 ಚೀಲಗಳಷ್ಟು ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದ. ಖಚಿತ ಮಾಹಿತಿ ಮೇರೆಗೆÀ ನಂಜನಗೂಡು ನಗರ ಠಾಣೆಯ ಎಸ್‍ಐ ರವಿಕುಮಾರ್ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದಾಗ 3.5 ಟನ್ ಅಕ್ಕಿ ಸಿಕ್ಕಿದೆ. ಈ ಸಂಬಂಧ ಆರೋಪಿ ಸೋಹಿಲ್ ವಿರುದ್ಧ ದೂರು ದಾಖಲಿಸಿಕೊಂಡು, ಪತ್ತೆಗೆ ಬಲೆ ಬೀಸಲಾಗಿದೆ.

ಶನಿವಾರವಷ್ಟೇ ನಗರದ ಸಿನಿಮಾ ರಸ್ತೆಯಲ್ಲಿರುವ ಅಕ್ಕಿ ಅಂಗಡಿಯೊಂದರಲ್ಲಿ ಸಂಗ್ರಹಿಸಿದ್ದ 5 ಟನ್ ಪಡಿತರ ಅಕ್ಕಿ ವಶಕ್ಕೆ ಪಡೆದು ದೂರು ದಾಖಲಿಸಿಕೊಳ್ಳಲಾಗಿತ್ತು. ಇದರ ಬೆನ್ನಲ್ಲೆ ಇಂದು 3.5 ಟನ್ ಅಕ್ಕಿ ದೊರೆತಿದೆ. ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿಸಿ ಹೊರರಾಜ್ಯಕ್ಕೆ ಮಾರುವ ದಂಧೆ ನಗರದಲ್ಲಿ ವ್ಯಾಪಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಆಹಾರ ಶಿರಸ್ತೇದಾರ್ ಅರವಿಂದ್, ಪೆÇ್ರಬೇಷನರಿ ಎಸ್‍ಐ ಮಹೇಂದ್ರ, ಪೊಲೀಸ್ ಸಿಬ್ಬಂದಿ ರಾಘವೇಂದ್ರ, ರಾಚಪ್ಪ, ರವಿ ಸಿದ್ದರಾಜು, ಪ್ರಕಾಶ್ ಮತ್ತಿತರಿದ್ದರು.