ಸೆ.19ರಂದು ವೀರಶೈವ ಮಹಾಸಭಾ ರಾಷ್ಟ್ರೀಯ ನಾಯಕರ ಆಗಮನ

ಮೈಸೂರು, ಸೆ.12(ಆರ್‍ಕೆಬಿ)- ನಿರಂಜನ ಮಠದ ಅಸ್ಮಿತೆಯನ್ನು ಉಳಿಸುವ ಸಲುವಾಗಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾನುವಾರ 44 ದಿನಗಳನ್ನು ಪೂರೈಸಿತು. ಪ್ರತಿಭಟನೆ ಸೆ.19ರಂದು ಭಾನುವಾರ 50ನೇ ದಿನಕ್ಕೆ ಕಾಲಿಡುತ್ತಿರುವ ಸಂದರ್ಭ ದಲ್ಲಿ ಅಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸೇರಿದಂತೆ ರಾಜ್ಯ ಮಟ್ಟದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಇಂದು ನಿರಂಜನ ಮಠ ಅಹೋ ರಾತ್ರಿ ಹೋರಾಟ ಸಭೆಯಲ್ಲಿಂದು ತಿಳಿಸಲಾಯಿತು.

ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯ ಕಾರಿ ಸದಸ್ಯ ಟಿ.ಎಸ್.ಲೋಕೇಶ್ ಸಭೆಯಲ್ಲಿ ಮಾತ ನಾಡಿ, ಅಂದು ಅವರೊಂದಿಗೆ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಮಹದೇವ ಬಿದರಿ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಲ್.ಅರುಣಾದೇವಿ ಇನ್ನಿತರ ನಾಯಕರು ಆಗ ಮಿಸಲಿದ್ದಾರೆ. ಸೆ.15ರಂದು ಮಹಾರಾಣಿ ಎನ್‍ಟಿಎಂ ಶಾಲೆ ಹೋರಾಟ ಒಕ್ಕೂಟ ಹಾಗೂ ನಿರಂಜನ ಮಠದ ಸಂರಕ್ಷಣಾ ಸಮಿತಿ ವತಿಯಿಂದ ನಿಗದಿ ಯಂತೆ ಪ್ರತಿಭಟನಾ ಜಾಥಾ ನಡೆಯಲಿದೆ ಎಂದರು.

ನಿರಂಜನ ಮಠ ಪುಣ್ಯ ಕ್ಷೇತ್ರ. ಸಮುದಾಯ ಶಕ್ತಿ ಕೇಂದ್ರ. ಇಲ್ಲಿ ವಿವೇಕಾನಂದರು ಧ್ಯಾನ ಮಾಡಿದರೆಂದು ಚರಿತ್ರೆಯ ಪುಟಗಳಲ್ಲಿ ಓದಿದ್ದೇವೆಯೇ ಹೊರತು ನೋಡಿದವರಿಲ್ಲ. ಈ ಪುಣ್ಯ ಕ್ಷೇತ್ರವನ್ನು ಸರ್ಕಾರ ಅವೈಜ್ಞಾ ನಿಕ ರೀತಿಯಲ್ಲಿ ಧಾರ್ಮಿಕ ಕೇಂದ್ರವೊಂದಕ್ಕೆ ಮಾಡಿ ರುವ ಪರಭಾರೆ ರದ್ದಾಗಬೇಕು. ನಿರಂಜನ ಮಠ ನಮ್ಮದು, ನಮ್ಮ ಸಮುದಾಯಕ್ಕೆ ಸೇರಿದ್ದು. ಅದನ್ನು ಸಂರಕ್ಷಿಸುವ ಕೆಲಸವೂ ನಮ್ಮದೇ ಆಗಿದೆ. ಹಾಗಾಗಿ ಚಳವಳಿಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವೀರಶೈವ ಮಹಾಸಭಾ ರಾಜ್ಯ ಘಟಕದ ಕೋಶಾ ಧ್ಯಕ್ಷ ವರುಣಾ ಮಹೇಶ್ ಮಾತನಾಡಿ, ನಿರಂಜನ ಮಠ ನಮ್ಮದು, ಇಲ್ಲಿ ಪೂರ್ವಜರ ಮಠ, ಗದ್ದಿಗೆ ಇರು ವುದೇ ಇದಕ್ಕೆ ಪುರಾವೆ. ಈ ಆಸ್ತಿಯನ್ನು ಸಂರಕ್ಷಿ ಲಿಕ್ಕಾಗಿ ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇವೆ. ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ದರೂ ಈ ಭಾಗದ ಸಂಸದರು, ಶಾಸಕರು ಒಮ್ಮೆಯೂ ಸೌಜನ್ಯದ ಭೇಟಿ ನೀಡಿಲ್ಲ. ನಮ್ಮ ಮಠ ಉಳಿಸಲು ಸಹಕರಿಸದ ಅವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗಿದೆ ಎಂದರು.

ವೀರಶೈವ ಮಹಾಸಭಾದ ಚಾಮರಾಜನಗರ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಸರ್ಕಾರದ ಕಣ್ಣು ತೆರೆಸುವವರೆಗೂ ಹೋರಾಟ ಇನ್ನಷ್ಟು ಚುರುಕು ಗೊಳಿಸಬೇಕಾಗಿದೆ ಎಂದರು. ಇದಕ್ಕೂ ಮುನ್ನ ಬದನ ವಾಳು ಶಿವಕುಮಾರ ಶಾಸ್ತ್ರಿ ಮತ್ತು ತಂಡದಿಂದ ವಚನ ಗಾಯನ ನಡೆಯಿತು. ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಮಾಜಿ ಅಧ್ಯಕ್ಷ ಹಿನ ಕಲ್ ಬಸವರಾಜು, ಮಂಡ್ಯ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಕೊಡಗು ಜಿಲ್ಲಾಧ್ಯಕ್ಷ ಶಿವಪ್ಪ, ಮೈಸೂರು ತಾಲೂಕು ಅಧ್ಯಕ್ಷ ಬಿ.ಕೆ.ನಾಗರಾಜು, ಸರಗೂರು ತಾಲೂಕು ಅಧ್ಯಕ್ಷ ಶಿವರಾಜ್, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಮಹ ದೇವಸ್ವಾಮಿ, ಮುಖಂಡರಾದ ಓಂಕಾರ್‍ಪ್ರಸಾದ್, ಪುಟ್ಟಣ್ಣ, ಬಸವರಾಜು ಇನ್ನಿತರರು ಭಾಗವಹಿಸಿದ್ದರು.