ಕೊಡಗನ್ನು ಬೆಚ್ಚಿ ಬೀಳಿಸಿದ ಕೊರೊನಾ

ಒಂದೇ ದಿನ 548 ಮಂದಿಗೆ ಸೋಂಕು ಕೆದಮುಳ್ಳೂರು ಸಂಪರ್ಕ ರಸ್ತೆ ಬಂದ್
ಮಡಿಕೇರಿ, ಏ.24- ಕೊಡಗು ಜಿಲ್ಲೆಯಲ್ಲಿ ಶನಿವಾರ ಏಕಾಏಕಿ 548 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಕೊಡಗು ಜಿಲ್ಲೆ ಬೆಚ್ಚಿ ಬಿದ್ದಿದೆ. ಕಳೆದ ಕೆಲ ದಿನಗಳಿ ಂದ ಕೊರೊನಾ ಸೋಂಕಿತರ ಪ್ರಮಾಣ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಆತಂಕ ಸೃಷಿಸಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 1506ಕ್ಕೇರಿದ್ದು, ಇದು ಮತ್ತಷ್ಟು ಏರಿಕೆ ಕಾಣಲಿದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ಕೋವಿಡ್ ಸೋಂಕಿನಿಂದ ಒಂದು ವಾರದಲ್ಲಿ 9 ಮಂದಿ ಮೃತಪಟ್ಟಿದ್ದು ಕೊರೊನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 91ಕ್ಕೆ ತಲುಪಿದೆ. ಬಹುತೇಕ ಪ್ರಕ ರಣಗಳು ಪ್ರಾಥಮಿಕ ಸಂಪರ್ಕದ ಮೂಲಕ ಹರಡುತ್ತಿರುವುದು ಕಂಡು ಬಂದಿದೆ.

ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕುಂಜಿಲ ಗ್ರಾಮದ 71 ವರ್ಷದ ವ್ಯಕ್ತಿ ಯೊಬ್ಬರು ಶನಿವಾರ ಬೆಳಗಿನ ಜಾವ 2 ಗಂಟೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಗಾಗಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪಿ.ಪಿ.ಇ ಕಿಟ್ ತೊಟ್ಟು ಗ್ರಾಮಕ್ಕೆ ತೆರಳಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮಡಿಕೇರಿ ನಗರದಲ್ಲಿ ಅಗ್ನಿ ಶಾಮಕ ಇಲಾಖೆ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡಲಾಯಿತು. ನಗರ ಸಭೆ ಕಟ್ಟಡ, ಬಸ್ ನಿಲ್ದಾಣ, ಮಾರು ಕಟ್ಟೆ ಆವರಣ, ಜನನಿಬಿಡ ಪ್ರದೇಶಗಳು ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲೂ ಕ್ರಿಮಿನಾಶಕವನ್ನು ಸಿಂಪಡಿಸಲಾಯಿತು. ಗುಡ್ಡೆಹೊಸೂರುವಿನ ಪ್ರತಿಷ್ಠಿತ ವಸತಿ ಗೃಹ ಒಂದರಲ್ಲಿ 9 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮಕ್ಕೆ ಪಂಚಾಯಿತಿ ವತಿಯಿಂದ ಕ್ರಿಮಿನಾಶಕವನ್ನು ಸಿಂಪಡಿಸಲಾಯಿತು. ಬಸ್ ತಂಗುದಾಣ, ಅಂಗಡಿ ಮಳಿಗೆಗಳ ಮುಂಗಟ್ಟುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಿಸಿ ಸೋಂಕು ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಯಿತು

ಕೋವಿಡ್ ಪ್ರಕರಣಗಳು ಏರಿಕೆಯಾ ಗುತ್ತಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ, ಸೋಮವಾರಪೇಟೆ ಸೇರಿದಂತೆ ಮುಂದಿನ ದಿನಗಳಲ್ಲಿ ನಡೆಯಬೇಕಿರುವ ಸಂತೆಗಳನ್ನು ಬಂದ್ ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ಶನಿವಾರ 30 ಹೊಸ ಕೋವಿಡ್ ಪ್ರಕರಣ ಗಳು ದೃಡಪಟ್ಟಿರುವ ಹಿನ್ನಲೆಯಲ್ಲಿ ಕೆದಮುಳ್ಳೂರು ಗ್ರಾಮದ ಸಂಪರ್ಕ ರಸ್ತೆಯನ್ನು ಬಂದ್ ಮಾಡ ಲಾಗಿದೆ. ಅಲ್ಲಿನ 34 ಮನೆಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸ ಲಾಗಿದೆ. ಈ ಗ್ರಾಮಕ್ಕೆ ಯಾರೂ ಕೂಡ ತೆರಳ ದಂತೆ ಸೂಚಿಸಲಾಗಿದ್ದು, ಸೋಂಕಿತರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಔಷಧೋಪಚಾರ ನೀಡುತ್ತಿದ್ದಾರೆ..

ಶನಿವಾರ ಬೆಳಗೆ 8 ಗಂಟೆಗೆ ಮಡಿಕೇರಿ ತಾಲೂಕಿನಲ್ಲಿ 127, ಸೋಮವಾರಪೇಟೆ 194 ಮತ್ತು ವಿರಾಜಪೇಟೆಯಲ್ಲಿ 227 ಹೊಸ ಪ್ರಕರಣಗಳು ಸೇರಿದಂತೆ ಒಟ್ಟು 548 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿದೆ. ಈ ಪೈಕಿ 526 ಕೇಸ್‍ಗಳನ್ನು ಆರ್.ಟಿ.ಪಿ.ಸಿ.ಆರ್ ಮತ್ತು 22 ಪ್ರಕ ರಣಗಳನ್ನು ಆರ್.ಎ.ಟಿ. ಪರೀಕ್ಷೆ ಮೂಲಕ ದೃಢಪಡಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 8200 ಆಗಿದ್ದರೆ, 6603 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 1506 ಸಕ್ರಿಯ ಪ್ರಕರಣಗಳಿರುವುದು ಆತಂಕ ಮೂಡಿಸಿದ್ದು, 317 ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ.