ಶ್ರೀರಾಂಪುರದಲ್ಲಿ ಹಬ್ಬದ ವಾತಾವರಣ: ಕೊರೊನಾ ವಾರಿಯರ್ಸ್‍ಗೆ ಹೂ ಮಳೆಗರೆದು ಅಭಿನಂದನೆ

ಮೈಸೂರು, ಮೇ 8(ಎಸ್‍ಬಿಡಿ)- ಮೈಸೂರಿನ ಶ್ರೀರಾಂಪುರ ನಿವಾಸಿಗಳು, ಹೂ ಮಳೆಗರೆಯುವ ಮೂಲಕ ಕೊರೊನಾ ವಾರಿಯರ್ಸ್‍ಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀರಾಂಪುರ 2ನೇ ಹಂತ, ನಾಯ್ಡು ಸ್ಟೋರ್ ವೃತ್ತದ ಪ್ರದೇಶ, ಕಂಟೇನ್ಮೆಂಟ್ ವಲಯದಿಂದ ಮುಕ್ತಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಹಬ್ಬದ ಸಂಭ್ರಮ ಸೃಷ್ಟಿಯಾಗಿತ್ತು. ಕೆಲ ದಿನಗಳಿಂದ ಮೌನವಾಗಿದ್ದ ರಸ್ತೆಗಳೆಲ್ಲಾ ರಂಗೋಲಿಯಿಂದ ಸಿಂಗಾರ ಗೊಂಡಿದ್ದವು. ಜೀವದ ಹಂಗು ತೊರೆದು ಕರ್ತವ್ಯ ನಿರ್ವ ಹಿಸಿದ ಆರೋಗ್ಯ ಇಲಾಖೆ, ಪೊಲೀಸ್, ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೌರ ಕಾರ್ಮಿಕರನ್ನು ಮೆರವಣಿಗೆಯಲ್ಲಿ ಕರೆತರಲಾ ಯಿತು. ರಸ್ತೆಯ ಇಕ್ಕೆಲಗಳಲ್ಲಿ, ಮನೆಯ ತಾರಸಿಯಲ್ಲಿ ನಿಂತಿದ್ದ ನಿವಾಸಿಗಳು, ಕೊರೊನಾ ವಾರಿಯರ್ಸ್ ಮೇಲೆ ಹೂ ಮಳೆ ಸುರಿಸಿ, ಫಲ ತಾಂಬೂಲ ನೀಡುವ ಮೂಲಕ ಧನ್ಯ ವಾದ ಸಮರ್ಪಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.

ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 90ಕ್ಕೆ ತಲುಪಿದಾಗ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಬೆಂಗಳೂರನ್ನು ಮೀರಿಸಿ, ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಪ್ರಥಮ ಎಂಬ ಅಪವಾದಕ್ಕೆ ಗುರಿಯಾಗುವ ದುಗುಡ ಮನೆ ಮಾಡಿತ್ತು. ಆದರೆ ಕೊರೊನಾ ವಾರಿಯರ್ಸ್‍ಗಳ ನಿರಂತರ ಪರಿಶ್ರಮ ದಿಂದಾಗಿ ಸೋಂಕು ಹರಡಲಿಲ್ಲ. ಜೊತೆಗೆ ಸೋಂಕಿತರು ಬಹುಬೇಗ ಗುಣಮುಖರಾ ದರು. ಆಸ್ಪತ್ರೆಯಲ್ಲಿರುವ 5 ಮಂದಿ ಡಿಸ್ಚಾರ್ಜ್ ಆದರೆ ಶೂನ್ಯ ಸಾಧನೆಯಾಗುತ್ತದೆ. ಈ ಸಂದರ್ಭದಲ್ಲಿ ಶ್ರೀರಾಂಪುರ ನಿವಾಸಿಗಳು, ಹಬ್ಬದ ವಾತಾವರಣ ಸೃಷ್ಟಿಸಿ, ಕೊರೊನಾ ವಾರಿಯರ್ಸ್‍ಗಳಿಗೆ ಆತ್ಮೀಯವಾಗಿ ವಂದಿಸಿದ್ದು, ವಿಶೇಷವಾಗಿತ್ತು.