ದೇಶದ ನ್ಯಾಯಾಂಗ ಪ್ರಕ್ರಿಯೆ ಬಡವರಿಗೆ ನಿಲುಕದಂತಾಗಿದೆ

ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಗಳು ದೇಶದ ಸಾಮಾನ್ಯ ಜನರಿಗೆ ಕೈಗೆಟುಕುತ್ತಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳ ವ್ಯಕ್ತ ಪಡಿಸಿದ್ದಾರೆ. ರಾಜಸ್ಥಾನದ ಹೈಕೋರ್ಟ್‍ನ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಜ್ಯುಡಿಷಿಯಲ್ ಪೆÇ್ರಸೆಸ್‍ಗಳು ತುಂಬಾ ದುಬಾರಿಯಾಗಿದೆ. ನ್ಯಾಯಾದಾನ ವ್ಯವಸ್ಥೆ ಬಡಜನರಿಗೆ ನಿಲುಕದಂತಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ಸುಪ್ರೀಂಕೋರ್ಟ್, ಹೈಕೋರ್ಟ್‍ನಲ್ಲಿ ಬಡವರಿಗೆ ಹೋರಾಟ ಮಾಡಲು ಸಾಧ್ಯ ವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವಂತಹ ಸ್ಥಿತಿಯಲ್ಲಿ ಬಡವರಿಲ್ಲ. ಆರ್ಥಿಕವಾಗಿ ಹಿಂದುಳಿದ ಯಾವುದೇ ವ್ಯಕ್ತಿಯೂ ಸಹ ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಾವು ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕೆಂ ದಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ ಅಂತಾ ನೋವಿನಿಂದ ಹೇಳಿದರು.