ಹೆಲ್ಮೆಟ್ ರಕ್ಷಣೆ ನೀಡುವಂತೆ ಮಾಸ್ಕ್ ಜೀವ ಭದ್ರತೆ ಒದಗಿಸುತ್ತದೆ

ಮೈಸೂರು, ಜ.7(ಆರ್‍ಕೆಬಿ)- ಕೋವಿಡ್ ರೋಗಲಕ್ಷಣ ಇರುವವರು ಎಲ್ಲೆಂದರಲ್ಲಿ ಓಡಾಡಿದರೆ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ಹೆಚ್ಚು ಜನದಟ್ಟಣೆ ಸೇರುವ ಪ್ರದೇಶ ಕೊರೊನಾ ಹರಡುವ ಪ್ರಮುಖ ತಾಣ ಎಂಬುದನ್ನು ಮರೆಯಬಾರದು. ತಲೆಗೆ ಹೆಲ್ಮೆಟ್ ಹೇಗೆ ರಕ್ಷಣೆ ನೀಡುತ್ತದೆಯೋ ಅದೇ ರೀತಿ ಮಾಸ್ಕ್ ನಮಗೆ ಜೀವ ಭದ್ರತೆಯನ್ನು ಒದಗಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಸ್.ಬಸವರಾಜ್ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನದ ಇನ್ಸ್‍ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಡಿಟೋರಿಯಂನಲ್ಲಿ ಮೈಸೂರು ವಿವಿ ಜೆನೆಟಿಕ್ ಅಂಡ್ ಜೆನೋಮಿಕ್ಸ್ ಅಂಡ್ ಜುಯಾಲಜಿ ವಿಭಾಗ ಶುಕ್ರವಾರ ಆಯೋ ಜಿಸಿದ್ದ ‘ಆ್ಯಂಟಿಜೆನಿಕ್ ವೇರಿಯೇಶನ್ ಇನ್ ಸಾರ್ಸ್-ಕೋವ್-2 ಅಂಡ್ ವ್ಯಾಕ್ಸಿನ್’ ಎಸ್ಕೇಪ್’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೈವಾನ್ ಹಾಗೂ ನ್ಯೂಜಿಲ್ಯಾಂಡ್ ದೇಶಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದ ತಕ್ಷಣ ಸೋಂಕಿನ ಮ್ಯಾಪಿಂಗ್ ಮಾಡಿ ಸಂಪರ್ಕಿತರನ್ನು ತಪಾಸಣೆ ಮಾಡಿ, ಹೊರಗಡೆ ಬಿಡದೆ ಚಿಕಿತ್ಸೆ ನೀಡುತ್ತಾರೆ. ಫಿಲಿಪೈನ್ಸ್‍ನಲ್ಲಿ ಕೊರೊನಾ ನಿಯಮ ಪಾಲಿ ಸದಿದ್ದರೆ ಅಂಥವರನ್ನು ಬಂಧಿಸಲಾಗುತ್ತದೆ. ಆದರೆ ಭಾರತದಲ್ಲಿ ಅತಹ ಕಠಿಣ ಕ್ರಮ ಇಲ್ಲದಿರುವುದೇ ಕೊರೊನಾ ನಿಯಂತ್ರಣಕ್ಕೆ ತರಲಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಎರಡು ವರ್ಷಗಳಿಂದ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ -19 ಈಗ ಭಾರತಕ್ಕೆ 3ನೇ ಅಲೆ ಭೀತಿ ಸೃಷ್ಟಿ ಸಿದೆ. ಡಿ.28ರಂದು ದೇಶ ದಲ್ಲಿ 6 ಸಾವಿರ ಪ್ರಕರಣ ಇದ್ದ ಕೊರೊನಾ ಪ್ರಕರಣಗಳು ಜ.6ರಂದು 1.14 ಲಕ್ಷಕ್ಕೆ ಏರಿಕೆಯಾಗಿದೆ. ಇಡೀ ಜಗತ್ತಿನಲ್ಲಿ 300 ಮಿಲಿಯನ್ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 5.5 ಮಿಲಿಯನ್ ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು 8 ಲಕ್ಷ ಇದ್ದ ಕೊರೊನಾ ಕೇಸು ಈ ವರ್ಷ 25 ಲಕ್ಷ ಆಗಿದೆ. ಲಸಿಕೆ ನಮಗೆ ಪ್ರತಿರೋಧ ಶಕ್ತಿ ನೀಡುತ್ತದೆಯೇ ಹೊರತು ಅದು ಪ್ರತಿಜೀವಕ (ಆ್ಯಂಟಿ ಬಯೋಟಿಕ್) ಅಲ್ಲ ಎಂದು ತಿಳಿಸಿದರು.

ವಿಜ್ಞಾನಿಗಳು ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದರೆ ಸಾರ್ವಜನಿಕರಿಗೆ ಅದು ಮೂರ್ಖತನ ಎನಿಸುತ್ತದೆ. ಅಮೆರಿಕಾ ಕೊರೊನಾ 5ನೇ ಅಲೆಯನ್ನು ಎದುರಿ ಸುತ್ತಿದೆ. ಪ್ರತಿದಿನ 9 ಸಾವಿರಕ್ಕೆ ಇಳಿದಿದ್ದ ಪ್ರಕರಣ ಇದೀಗ 7 ಲಕ್ಷಕ್ಕೆ ಏರಿಕೆಯಾಗಿದೆ. 33 ಕೋಟಿ ಜನಸಂಖ್ಯೆ ಇರುವ ಯು ಎಸ್‍ಎಗೆ 7 ಲಕ್ಷ ಪ್ರಕರಣ ಕಂಡು ಬರುತ್ತಿ ರುವಾಗ ಭಾರತದ ಜನಸಂಖ್ಯೆ 130 ಕೋಟಿ. ನಮ್ಮಲ್ಲಿ ಎಷ್ಟು ಪ್ರಕರಣ ಕಾಣಿಸಿಕೊಳ್ಳಬಹುದು ಅಂದಾಜಿಸಿ ಎಂದ ಅವರು, ಇದರೊಂದಿಗೆ ಕೊರೊನಾ, ಒಮಿಕ್ರಾನ್ ಬಗ್ಗೆ ಖಂಡಿತವಾಗಿ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆ ಸರ್ಕಾರ ಅಥವಾ ತಜ್ಞರ ಸಮಿತಿ ಕೊರೊನಾ ನಿಯಂತ್ರಣಕ್ಕೆ ಏನೇ ಕ್ರಮಗಳನ್ನು ಕೈಗೊಂಡರೂ ಅದು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ತುಂಬಾ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್‍ಎಸ್.ಮಾಲಿನಿ, ಡಾ.ಕೆ.ಪಿ.ಪ್ರತಿಭಾ, ಡಾ.ಕೆ.ಟಿ.ಚೈತ್ರಾ, ಡಾ.ಎ.ಎನ್.ಸೋಮಣ್ಣ, ಕೌಶಿಕ್ ಪೊನ್ನಣ್ಣ, ಜೆನೆಟಿಕ್ಸ್ ಅಂಡ್ ಜೀನೋ ಮಿಕ್ಸ್ ವಿಭಾಗದ ಮುಖ್ಯಸ್ಥೆ ಪೆÇ್ರ.ಎಸ್. ಎಸ್.ಮಾಲಿನಿ, ಡಾ.ಪ್ರತಿಭಾ ಕೆ.ಪಿ., ಡಾ.ಚೈತ್ರಾ ಪಿ.ಟಿ., ಡಾ.ಸೋಮಣ್ಣ ಎ.ಎನ್., ಸಿ.ಎಸ್.ಕೌಶಿಕ್ ಪೆÇನ್ನಣ್ಣ, ಕೆ.ಲಕ್ಷ್ಮೀ ಹಾಗೂ ಸಂಶೋಧನಾರ್ಥಿಗಳು, ವಿದ್ಯಾರ್ಥಿ ಗಳು ಇನ್ನಿತರರು ಭಾಗವಹಿಸಿದ್ದರು.