ಮೈಸೂರು, ಏ.22(ಪಿಎಂ)- ಲಾಕ್ ಡೌನ್‍ನ ನಿರ್ಬಂಧಗಳ ಇತಿಮಿತಿಯಲ್ಲೇ `ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ’ಯ (ಇಪಿಎಫ್) ಮೈಸೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಪರಿಶ್ರಮ ವಹಿಸಿ ಇದೇ ಏಪ್ರಿಲ್‍ನಲ್ಲಿ 1,693 ಕಾರ್ಮಿಕರಿಗೆ ಪಿಎಂಜಿಕೆವೈ ಮೂಲಕ 4.8 ಕೋಟಿ ರೂ. ಮುಂಗಡ ಹಣ ಬಿಡುಗಡೆ ಮಾಡಿದೆ. ಅಲ್ಲದೇ, ಏಪ್ರಿಲ್‍ನಲ್ಲಿ 3081 ಮಂದಿ ಭವಿಷ್ಯನಿಧಿ ಚಂದಾದಾರರ ಕೋರಿಕೆ ಮನ್ನಿಸಿ 11.50 ಕೋಟಿ ರೂ.ಗಳನ್ನೂ ಪಾವತಿಸಿದೆ.
ಈ ಸಂಬಂಧ ಮೈಸೂರು ಪ್ರಾದೇಶಿಕ ಪಿಎಫ್ ಆಯುಕ್ತ ಜಿ.ಶಿವಕುಮಾರ್ ಪ್ರತಿಕಾ ಪ್ರಕಟಣೆ ಹೊರಡಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ಪಿಎಫ್ ಚಂದಾ ದಾರರಿಗೆ ಸಹಾಯವಾಗು ವಂತೆ ಇಪಿಎಫ್ ಯೋಜ ನೆಗೆ ತಿದ್ದುಪಡಿ ತರಲಾ ಗಿದೆ. ಲಾಕ್‍ಡೌನ್ ಇದ್ದರೂ ಇಪಿಎಫ್ ಯೋಜನೆ ಯಿಂದ ಹಣ ಹಿಂತೆಗೆದು ಕೊಳ್ಳುವುದಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (ಪಿಎಂಜಿಕೆವೈ) ಭಾಗವಾಗಿ ವಿಶೇಷ ಅವ ಕಾಶ ಕಲ್ಪಿಸಲಾಗಿದೆ. ಅದರಂತೆ 3 ತಿಂಗಳ ಬೇಸಿಕ್ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಬರುವ ನಾನ್ ರಿಫಂಡಬಲ್ ವಿತ್ ಡ್ರಾಯಲ್ ಅಥವಾ ಇಪಿ ಎಫ್ ಖಾತೆಯಲ್ಲಿ ಸದಸ್ಯರ ಕ್ರೆಡಿಟ್‍ನಲ್ಲಿ ಲಭ್ಯವಿರುವ ಶೇ.75ರಷ್ಟು ಮೊತ್ತ ಅಥವಾ ಈ ಎರಡರಲ್ಲಿ ಯಾವುದು ಕಡಿಮೆ ಮೊತ್ತವಿದೆಯೋ ಅದನ್ನು ನೀಡ ಲಾಗುವುದು. ಅದಕ್ಕಿಂತಲೂ ಕಡಿಮೆ ಮೊತ್ತ ವನ್ನೂ ಸದಸ್ಯರು ಹಿಂಪಡೆಯಬಹುದು. ಇದು ಮುಂಗಡ ಹಣವಾದ್ದರಿಂದ ಇದಕ್ಕೆ ಆದಾಯ ತೆರಿಗೆ ಕಡಿತಗಳು ಇರುವುದಿಲ್ಲ ಎಂದು ವಿವರಿಸಿದ್ದಾರೆ. 100 ಕಾರ್ಮಿಕರಿ ಗಿಂತ ಕಡಿಮೆ ಮಂದಿ ಇರುವ, ಶೇ.90 ಮಂದಿಯ ವೇತನ 15 ಸಾವಿರ ರೂ.ಗಿಂತ ಕಡಿಮೆ ಇರುವ ಸಂಸ್ಥೆಗಳ ಕಾರ್ಮಿಕರ ಇಪಿಎಫ್ ಖಾತೆಗೆ ಮಾರ್ಚ್, ಏಪ್ರಿಲ್ ಮತ್ತು ಮೇ ವೇತನದ ಶೇ.24ರಷ್ಟು ಹಣವನ್ನು ಸಂದಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಕಾರ್ಮಿಕರ ಮಾರ್ಚ್ ವೇತನದ ಆಡಳಿತ ಶುಲ್ಕ, ಪರಿ ಶೀಲನಾ ಶುಲ್ಕ ಪಾವತಿಸಲು ಏ.15ರಿಂದ ಮೇ 15ರವರೆಗೆ ಕಾಲಾವಕಾಶ ನೀಡಲಾ ಗಿದೆ. ವಿವರಗಳಿಗೆ ಡಿo.mಥಿsoಡಿe@ eಠಿಜಿ iಟಿಜiಚಿ.gov.iಟಿ ಅನ್ನು ಸಂಪರ್ಕಿಸುವುದು.