ಡಕಾಯಿತಿ ಪ್ರಕರಣದಲ್ಲಿ ಅಟ್ಟಿಕಾ ಗೋಲ್ಡ್  ಕಂಪನಿ ಮಾಲೀಕ ಪೊಲೀಸರ ವಶಕ್ಕೆ

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಆಲಿಯಾಸ್ ಬೊಮ್ಮನಹಳ್ಳಿ ಬಾಬು ಎಂಬಾತನನ್ನು ಕುದೂರು ಹಾಗೂ ತಾವರಕೆರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ಬಾಬುನನ್ನು ಕುದೂರು ಠಾಣಾ ಇನ್ಸ್‍ಪೆಕ್ಟರ್ ದಾಳೆಗೌಡ ಅವರು ವಶಕ್ಕೆ ಪಡೆದು ಕೊಂಡಿದ್ದಾರೆ. ತಾವರೆಕೆರೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಕೇಸ್ ಒಂದು ದಾಖಲಾಗಿತ್ತು. ಮಾಲನ್ನು ಬಾಬುವಿಗೆ ನೀಡಿರುವ ಹೇಳಿಕೆ ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಬಾಬುಗೆ ನೊಟೀಸ್ ಜಾರಿ ಮಾಡಿದ್ದರೂ ಪೆÇಲೀಸರ ಮುಂದೆ ಹಾಜರಾಗಿರಲಿಲ್ಲ. ಈ ಕುರಿತು ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಬಾಬು ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೊಮ್ಮನಹಳ್ಳಿ ಬಾಬು ಸೇರಿದಂತೆ ನಾನಾ ಹೆಸರು ಗಳಿಂದ ಗುರುತಿಸಿಕೊಂಡಿದ್ದ ಈತ ಪ್ರತಿಸ್ಪರ್ಧಿಯಾಗಿದ್ದ ಮುತ್ತೂಟ್, ಮಣಪ್ಪುರಂ ಕಂಪನಿಯಲ್ಲಿ ಚಿನ್ನ ಅಡವಿಟ್ಟ ವರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದ್ದನಂತೆ.