`ಕ್ರೀಡೆಯಲ್ಲಿನ ಸಾಧನೆಯ ಮಾನಸಿಕ ಆಯಾಮಗಳು’ ವಿಚಾರ ಸಂಕಿರಣಕ್ಕೆ ಚಾಲನೆ ಕ್ರೀಡಾಪಟುಗಳ ದೈಹಿಕ, ಮಾನಸಿಕ ಆರೋಗ್ಯ

ಸಮತೋಲನಕ್ಕೆ ಕ್ರೀಡಾ ಮನೋವಿಜ್ಞಾನ ಸಹಕಾರಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್
ಮೈಸೂರು, ಡಿ.9(ಆರ್‍ಕೆಬಿ)- ಕ್ರೀಡಾ ಮನೋವಿಜ್ಞಾನವು ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ಪೋಷಿಸಲು ಸಹಕಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಮತ್ತು ವೀ ದಿ ಸೊಸೈಟಿ ಆಶ್ರಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ಯೋಗ ಹಾಲ್‍ನಲ್ಲಿ ಬುಧವಾರ ಆಯೋಜಿಸಲಾಗಿದ್ದ `ಕ್ರೀಡೆ ಗಳಲ್ಲಿನ ಸಾಧನೆಯ ಮಾನಸಿಕ ಆಯಾಮ ಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಪಟುಗಳ ಅಭಿವೃದ್ಧಿ ಮತ್ತು ಸಾಮಾಜಿಕ, ಕ್ರೀಡಾ ಸಂಸ್ಥೆಗಳೊಂದಿಗೆ ಸಂಬಂಧಿಸಿದ ವ್ಯವಸ್ಥಿತ ಸಮಸ್ಯೆಗಳನ್ನು ಪರಿ ಹರಿಸಲು ಮಾನಸಿಕ ಜ್ಞಾನ ಮತ್ತು ಕೌಶಲ್ಯ ಗಳ ಅಭಿವೃದ್ಧಿಗೆ ಮನೋವಿಜ್ಞಾನವು ಪೂರಕ ವಾಗಿದೆ. ಕ್ರೀಡಾಪಟುಗಳು ಮತ್ತು ತರಬೇತು ದಾರರು, ನಿರ್ವಾಹಕರು, ಪೆÇೀಷಕರು ಹೀಗೆ ಪ್ರತಿಯೊಬ್ಬರಿಗೂ ಕ್ರೀಡಾ ಮನೋ ವಿಜ್ಞಾನ ಜ್ಞಾನ ಅಗತ್ಯ. ಕ್ರೀಡಾಪಟುಗಳ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಅರಿಯಲು ಮನೋವಿಜ್ಞಾನ ಕಲಿಕೆಯು ಸಹಕಾರಿಯಾ ಗಿದೆ. ಕ್ರೀಡೆಯ ನಿಯಮಗಳ ಅರಿತು ಅದನ್ನು ಅನುಸರಿಸುವ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹಿಡಿತ ಸಾಧಿಸ ಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ಷಮತೆ ವರ್ಧನೆ, ವ್ಯಕ್ತಿತ್ವ ಹಾಗೂ ಕೌಶಲ್ಯ ತರಬೇತಿ, ಗುರಿ ನಿಗದಿ, ಯೋಜನೆ ಸಿದ್ಧಪಡಿಸುವಿಕೆ, ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣ ಸಾಧಿಸುವುದು, ಆತ್ಮವಿಶ್ವಾಸದ ಬೆಳವಣಿಗೆ, ಸ್ವಾಭಿಮಾನ, ಭಾವನೆಗಳ ನಿರ್ವಹಣೆ, ನಾಯಕತ್ವ ಕೌಶಲ್ಯ ಗಳನ್ನು ಇದರಿಂದ ಹೆಚ್ಚಿಸಿಕೊಳ್ಳಬಹುದಾ ಗಿದೆ. ಆಹಾರ ಪದ್ಧತಿ, ಮಾದಕ ವಸ್ತು ಸೇವನೆ, ಖಿನ್ನತೆ, ಆತ್ಮಹತ್ಯೆ, ಅತಿಯಾದ ತರಬೇತಿ, ಲೈಂಗಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು. ತಂಡ ಕಟ್ಟುವಿಕೆ, ಕುಟುಂಬ ನಿರ್ವಹಣೆ, ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಮನೋವಿಜ್ಞಾನ ಪರಿಣಾಮಕಾರಿ ಯಾಗಿದೆ ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟ್ರೀಯ ಮಟ್ಟದ ಈಜು ಗಾರ್ತಿ ಶುಭಾ ಚಿತ್ತರಂಜನ್, ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಿರುಮಲೈ ಗೋಪಾಲನ್, ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ವೆಂಕಟೇಶ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಇದ್ದರು.