ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಕರ ನಿಜವಾದ ಉದ್ದೇಶವಾಗಬೇಕು

ಮೈಸೂರು,ಡಿ.22(ಪಿಎಂ)-ವಿದ್ಯಾರ್ಥಿ ಗಳ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಕ ಅಥವಾ ಉಪನ್ಯಾಸಕರ ಬೋಧನೆಯ ನಿಜವಾದ ಉದ್ದೇಶವಾಗಬೇಕು. ಜೊತೆಗೆ ಪ್ರಸ್ತುತ ಸಮಾಜಕ್ಕೆ ಸಂಪರ್ಕ ಹೊಂದುವಂತಹ ಜ್ಞಾನಾರ್ಜನೆಯನ್ನು ವಿದ್ಯಾರ್ಥಿ ಸಮು ದಾಯದಲ್ಲಿ ತರುವ ಜವಾಬ್ದಾರಿ ನಿಭಾಯಿ ಸಬೇಕು ಎಂದು ಐಎಎಸ್ ಅಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.

ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ನಡೆದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆ ಗಳ ನೇಮಕಾತಿ ಪರೀಕ್ಷೆಯ ಉಚಿತ ತರ ಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ `ಮುಕ್ತಭಂಡಾರ’ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಿಕ್ಷಕ ಅಥವಾ ಉಪನ್ಯಾಸಕರು ಓದುವ ಹವ್ಯಾಸದೊಂದಿಗೆ ಆಲಿಸುವ ಗುಣ ಹೊಂದಿ ರಬೇಕು. ಮಾತನಾಡುವುದು ಒಂದು ಕಲೆ ನಿಜ. ಅದೂ ಶಿಕ್ಷಕನಿಗೆ ಅಗತ್ಯ. ಆದರೆ ಅದ ಕ್ಕಿಂತಲೂ ಆಲಿಸುವ ವಿಶೇಷ ಕಲೆ ಹೊಂದಿ ರಬೇಕು. ಉದ್ಯೋಗಕ್ಕಾಗಿ ಉಪನ್ಯಾಸಕ ವೃತ್ತಿ ಸೇರುವುದಾದರೆ ಪ್ರಯೋಜನವಿಲ್ಲ. ಉದ್ಯೋಗಕ್ಕಾಗಿ ಅಷ್ಟೇ ಎನ್ನುವ ಮನೋ ಭಾವ ಹೊಂದಿರುವವರಿಗೆ ಉಪನ್ಯಾಸಕ ವೃತ್ತಿ ಸೂಕ್ತವಲ್ಲ ಎಂದು ತಿಳಿಸಿದರು.
ಉಪನ್ಯಾಸಕ ಅಥವಾ ಶಿಕ್ಷಕ ಪಾಠ ಮಾಡುವುದಕ್ಕೆ ಮಾತ್ರ ಸೀಮಿತವಾಗದೇ ಪ್ರಸ್ತುತ ಸಮಾಜದ ಆಗುಹೋಗು ತಿಳಿ ಯುವ ಮನೋಭಾವ ಹೊಂದಿರಬೇಕು. ನೀವು ಪರೀಕ್ಷೆ ಚೆನ್ನಾಗಿ ಬರೆದು ನಂತರ ಉಪನ್ಯಾಸಕರಾದ ಬಳಿಕ ನೀವು ವಿದ್ಯಾರ್ಥಿ ಗಳ ಮುಂದೆ ನಿಲ್ಲಬೇಕಾಗುತ್ತದೆ. ಹೀಗೆ ನಿಂತು ಗಂಟೆ ಕಾಲ ಪಾಠ ಮಾಡಬೇಕಾ ದರೆ ವಿಶಿಷ್ಟವಾದ ಕೌಶಲ್ಯ ಕರಗತ ಮಾಡಿ ಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಪನ್ಯಾಸಕರು ಉತ್ತಮ ಸಂವಹನ ಕಲೆ ಹೊಂದಿರಬೇಕು. ಆದರೆ ಈ ಪರೀಕ್ಷೆ ಯಲ್ಲಿ ಸಂವಹನ ವಿಷಯ ಸೇರ್ಪಡೆ ಏಕೆ ಮಾಡಿಲ್ಲ ಎಂಬುದು ನನಗೆ ಅರ್ಥವಾಗು ತ್ತಿಲ್ಲ. ನಾವು ಉದ್ಯೋಗ ಮತ್ತು ವೃತ್ತಿ ಎರಡರ ವ್ಯತ್ಯಾಸ ಅರ್ಥ ಮಾಡಿ ಕೊಳ್ಳಬೇಕು. ಉಪನ್ಯಾಸಕ ಹುದ್ದೆಯನ್ನು ಉದ್ಯೋಗ ಎಂದು ಪರಿಗಣಿಸಬಾರದು. ಬದಲಿಗೆ ಇದೊಂದು ವೃತ್ತಿ ಎಂದು ಅರಿತು ಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತದ ಸನ್ನಿವೇಶದಲ್ಲಿ ತಂತ್ರಜ್ಞಾನದ ಕಾರಣಕ್ಕಾಗಿ ಬೋಧನಾ ವಿಧಾನ ದೊಡ್ಡ ಪ್ರಮಾಣ ಬದಲಾವಣೆ ಕಂಡಿದೆ. ವಚ್ರ್ಯು ಯಲ್ ಬೋಧನೆ ಮುನ್ನೆಲೆಗೆ ಬಂದಿದೆ. ಆದರೆ ಇದರಲ್ಲಿ ಕಲಿಕೆ ಪರಿಣಾಮಕಾರಿ ಎಂದು ನನಗಂತೂ ಅನ್ನಿಸುತ್ತಿಲ್ಲ. ವಿಶ್ವ ಮಾನ್ಯ ವಿಜ್ಞಾನಿ ಆಲ್ಬರ್ಟ್ ಐಸ್‍ಸ್ಟೀನ್ `ತಂತ್ರಜ್ಞಾನವು ಮುನುಷ್ಯರ ಪರಸ್ಪರತೆ ಯನ್ನು ಹಿಂದಿಕ್ಕಿ, ಜಗತ್ತು ಎಲ್ಲಿ ಮೂರ್ಖರ ಪೀಳಿಗೆ ಹೊಂದಿತೋ ಎನ್ನುವ ಆತಂಕ ನನಗೆ’ ಎಂದಿದ್ದರು. ಇದು ಎಷ್ಟು ನಿಜ ಅಲ್ಲವೇ? ಎಂದು ಹೇಳಿದರು.

ಉಪನ್ಯಾಸಕರು ಯುವ ಮನಸ್ಸುಗಳೊಂ ದಿಗೆ ಸಂವಹನ ನಡೆಸುವ ವಿಶೇಷ ಅವ ಕಾಶ ಹೊಂದಿರುತ್ತಾರೆ. ಆ ಮೂಲಕ ಅವರ ಹಣೆಬರಹ ಬರೆಯುವಂತಹ ಪ್ರಮುಖ ಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ. ಆದರೆ ಅಷ್ಟರ ಮಟ್ಟಿಗೆ ಉಪನ್ಯಾಸಕರು ತಯಾರು ಇರುವುದು ಮುಖ್ಯ ಎಂದು ಹೇಳಿದರು. ಮೈಸೂರು ವಿಭಾಗದ ಪ್ರಾದೇ ಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಹಣ ಕಾಸು ಅಧಿಕಾರಿ ಡಾ.ಎ.ಖಾದರ್‍ಪಾಷ, ತರಬೇತಿ ಕೇಂದ್ರದ ಸಂಯೋಜ ನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಇನ್ನಿತರರು ಹಾಜರಿದ್ದರು.