ಯೇಸು ಪ್ರತಿಮೆ ವಿಚಾರ ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ

ಬೆಂಗಳೂರು,ಜ.2(ಕೆಎಂಶಿ)-ಯೇಸು ಪ್ರತಿಮೆ ವಿಚಾರದಲ್ಲಿ ಬಿಜೆಪಿ ಏನು ಬೇಕಾ ದರೂ ಮಾಡಲಿ. ಅದು ಭಕ್ತನಿಗೂ, ಭಗವಂತ ನಿಗೂ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಪ್ರತಿಮೆಯನ್ನು ಎರಡು ವರ್ಷದ ಹಿಂದೆ ಕಟ್ಟಲು ಹೋದಾಗ ನಾನೇ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಮಾರ್ಗದರ್ಶನ ನೀಡಿದೆ. ನಂತರ ನನ್ನ ಕೈಲಾದ ಸಹಾಯ ನಾನು ಮಾಡಿದೆ. ಉಳಿ ದದ್ದು ಭಕ್ತನಿಗೂ ಹಾಗೂ ಭಗವಂತನಿಗೆ ಬಿಟ್ಟ ವಿಚಾರ ಎಂದು ಇಂದಿಲ್ಲಿ ಸುದ್ದಿಗಾರ ರಿಗೆ ತಿಳಿಸಿದರು. `ರಾಜ್ಯದಲ್ಲಿ ಏನೇನಾಗು ತ್ತಿದೆ ಅಂತಾ ಕೇವಲ ರಾಜ್ಯದ ಜನರು ಮಾತ್ರ ನೋಡುತ್ತಿಲ್ಲ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನರು ಗಮನಹರಿಸುತ್ತಿದ್ದಾರೆ.

ವಿಶ್ವಕ್ಕೆ ಬಸವ ತತ್ವವನ್ನು ಸಾರಬೇಕು ಎಂದು ನಾವೇ ಹೇಳುತ್ತೇವೆ. ಅದನ್ನು ನಾವೇ ಪಾಲಿಸದಿದ್ದರೆ ಹೇಗೆ. ಅಧಿಕಾರ ಇದ್ದಾಗ ಉತ್ತಮ ಕಾರ್ಯ ಮಾಡುವ ಬದಲು, ಯೇಸು ಪ್ರತಿಮೆ ವಿಚಾರದಲ್ಲಿ ನಮ್ಮ ಅಶೋಕ ಚಕ್ರವರ್ತಿ ಸಾಹೇಬ್ರು, ಅಶ್ವಥ್ ನಾರಾಯಣ್, ಈಶ್ವರಪ್ಪ, ರೇಣುಕಾ ಚಾರ್ಯ ಅವರು ತಮಗೆ ಬೇಕಾದಂತೆ ಹೇಳುತ್ತಿದ್ದಾರೆ. ಅವರಿಗೆ ಏನು ಬೇಕೋ ಹೇಳಿಕೊಳ್ಳಲಿ. ಮಾತನಾಡುವವರನ್ನು ನಾನು ಬೇಡಾ ಎಂದು ಹೇಳುವುದಕ್ಕೆ ಆಗುತ್ತದಾ. ಅವರಿಗೆ ಅಧಿಕಾರ ಇದೆ. ಅದನ್ನು ಅವರು ಒಳ್ಳೆಯದಕ್ಕಾದರೂ ಬಳಸ ಬಹುದು, ಕೆಟ್ಟದಕ್ಕಾದರೂ ಬಳಸಬ ಹುದು. ಅದರ ಬಗ್ಗೆ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ. ಎರಡು ವರ್ಷಗಳ ಹಿಂದೆಯೇ ಯೇಸು ಪ್ರತಿಮೆ ಮಾಡಲು ಮುಂದಾಗಿ ದ್ದರು. ನಾನೇ ಅಲ್ಲಿಗೆ ಹೋದಾಗ ಕೇಳಿದೆ. ಹಾಗೆಲ್ಲಾ ಜಾಗ ಕಾನೂನುಬದ್ಧವಾಗಿ ಲ್ಲದಿದ್ದರೆ ಪ್ರತಿಮೆ ಮಾಡಲು ಹೋಗ ಬೇಡಿ. ಭವಿಷ್ಯದಲ್ಲಿ ತೊಂದರೆ ಆಗುತ್ತದೆ ಅಂತಾ ತಡೆದು ಜಾಗ ಕಾನೂನುಬದ್ಧ ವಾಗಿ ಇದೆಯೇ ಇಲ್ಲವೇ ಎಂದು ಪರಿಶೀಲಿಸಿ, ಅದಕ್ಕೆ ಬೇಕಾದ ನೆರವನ್ನು ನಾನು ಮಾಡಿದ್ದೇನೆ.

ಆ ಜಾಗಕ್ಕೆ ಅನೇಕ ವರ್ಷಗಳ ಚರಿತ್ರೆ ಇದೆ. ಅಲ್ಲಿ ಯೇಸುವಿನ ವಿಗ್ರಹ, ಶಿಲುಬೆ ಎಲ್ಲ ಮುಂಚೆಯಿಂದಲೂ ಇದೆ. ಅಲ್ಲಿ ಜನ ಪೂಜೆ ಮಾಡಿಕೊಂಡು ಬರುತ್ತಿ ದ್ದಾರೆ. ಪ್ರತಿಮೆ ನಿರ್ಮಾಣ ವಿಚಾರ ಒಳ್ಳೆಯ ಕೆಲಸ. ಹೀಗಾಗಿ ಅವರಿಗೆ ಮಾರ್ಗ ದರ್ಶನ ನೀಡಿದೆ. ನಾನು ಏನು ಮಾಡಬೇಕೋ ಮಾಡಿದ್ದೇನೆ. ಯಾವುದೇ ಧರ್ಮ ಇರಲಿ. ಅವರಿಗೆ ಏನು ಬೇಕೋ ಅದನ್ನು ಮಾಡಲಿ.

ರೆವಿನ್ಯೂ ಮಿನಿಸ್ಟರ್ ಸಾಹೇಬ್ರು ಅಶೋಕಣ್ಣಾ ಅವರು ಈ ವಿಚಾರದಲ್ಲಿ ತನಿಖೆ ಮಾಡುತ್ತೇವೆ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಅಲ್ಲಿ ತಹಶೀಲ್ದಾರರನ್ನು ವರ್ಗಾವಣೆ ಮಾಡಿದ್ದಾರೆ. ಅವರು ಯಾರನ್ನು ಬೇಕಾ ದರೂ ಅಲ್ಲಿಗೆ ತಂದು ಕೂರಿಸಲು ಅದರ ಬಗ್ಗೆ ಚಿಂತಿಸಲು ನನಗೆ ಸಮಯವಿಲ್ಲ. ನಾನುಂಟು ಹಾಗೂ ನಮ್ಮ ಜನ ಉಂಟು. ಆ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ. ನಿನ್ನೆಯೂ ಸಭೆ ನಡೆಸಿದ್ದಾರಂತೆ. 13ನೇ ತಾರೀಕು ಪ್ರತಿಭಟನೆ ಮಾಡುತ್ತಾರಂತೆ, ಮಾಡಲಿ.

ಬಿಜೆಪಿ, ಆರೆಸ್ಸೆಸ್ ಎಂಬುದು ಬೇಡ. ರಾಜ್ಯದಲ್ಲಿ ಒಂದು ಸರ್ಕಾರ ಇದೆ. ಈ ರಾಜ್ಯ ದಲ್ಲಿ ಎಷ್ಟು ಮಠಗಳು, ಮಸೀದಿಗಳು, ಚರ್ಚ್‍ಗಳು, ಗುರುದ್ವಾರ, ಬೌದ್ಧ ಹಾಗೂ ಜೈನ ಧರ್ಮದ ಸಂಘಗಳಿಗೆ ಯಾರು, ಯಾವ ಬೆಟ್ಟದಲ್ಲಿ ಯಾರಿಗೆ ಎಷ್ಟು ಜಾಗ ನೀಡಿದ್ದಾರೆ ಅಂತಾ ಪಟ್ಟಿ ತರಿಸಿಕೊಳ್ಳಲಿ. ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ. ಈ ಶಿವಕುಮಾರ್ ತಪ್ಪು ಮಾಡಿ ದ್ದರೆ ಶಿಕ್ಷೆ ನೀಡಲಿ, ಬೇರೆ ಯಾರಾದರೂ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆ ನೀಡಲಿ. ಅವರಿಗಿರುವ ಪರಮಾಧಿಕಾರವನ್ನು ಯಾರಾ ದರೂ ಕಿತ್ತುಕೊಳ್ಳಲು ಆಗುತ್ತಾ. ನಾನು ಕಿತ್ತುಕೊಳ್ಳುವ ಪ್ರಯತ್ನವನ್ನೂ ಮಾಡಲ್ಲ, ಆ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದಿಲ್ಲ.

ನನ್ನ ಕ್ಷೇತ್ರದ ಜನರಲ್ಲಿ ಒಬ್ಬ ದೇವಸ್ಥಾನ ಕಟ್ಟಬೇಕು ಅಂತಾ ಬಂದ್ರೆ ಮತ್ತೊಬ್ಬ ಚರ್ಚ್ ಕಟ್ಟಬೇಕು ಅಂತಾ ಬರ್ತಾರೆ. ನಾನು ನನ್ನ ಕೈಲಾದ ಮಟ್ಟಿಗೆ ಇಟ್ಟಿಗೆಯನ್ನೋ, ಕಿಟಕಿಯನ್ನೋ, ಬಾಗಿಲನ್ನೋ ನೀಡುತ್ತೇನೆ. ಶಾಲೆ ಕಟ್ಟುತ್ತೇನೆ ಅಂತಾ ಬಂದರೆ ಅವರಿಗೆ ಕುರ್ಚಿ ಕೊಡಿಸೋದೋ, ಹೀಗೆ ನಮ್ಮ ಕೆಲಸ ನಾವು ಮಾಡಿಕೊಂಡು ಬರುತ್ತೀವಿ.

ಈ ವಿಚಾರದಲ್ಲಿ ನಮ್ಮ ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಬರುವುದಿಲ್ಲ. ಅವರು ಮಾತನಾಡುವ ಅಗತ್ಯ ಏನಿದೆ. ನನಗೆ ಧ್ವನಿ ಇಲ್ಲ ಅಥವಾ ನನಗೆ ಯಾವುದಾದರೂ ನಾಯ ಕರ ಬೆಂಬಲವಾಗಿ ನಿಂತು ಮಾತನಾಡಲಿ ಎಂದು ನಾನು ಕೇಳಿಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ.’

ಇನ್ನು ಪಕ್ಷದ ಪ್ರಮುಖ ಹುದ್ದೆ ವಿಚಾರ ವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಗಿಫ್ಟ್ ಬೇಡ. ನನಗೆ ಯಾವುದೇ ಆತುರ ಇಲ್ಲ. ನೀವು ಕೂಡ ನನ್ನ ಬಗ್ಗೆ ತಲೆ ಕೆಡಿಸಬೇಡಿ. ಅದರ ಬಗ್ಗೆ ಮಾತನಾ ಡಬೇಡಿ. ನಾನು ಹೈಕಮಾಂಡ್ ಬಳಿ ಏನೂ ಕೇಳುವುದಕ್ಕೆ ಹೋಗಿಲ್ಲ. ಪಕ್ಷದ ಕಾರ್ಯ ಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬರೋ ನೋಟೀಸ್ ಗಳಿಗೆ ಉತ್ತರ ಕೊಡುವುದೇ ಸಾಕಾಗಿದೆ. ಜಾರ್ಖಂಡ್ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸು ವಂತೆ ಆಹ್ವಾನ ಬಂದಿತ್ತು. ಕಾರ್ಯಕ್ರಮಕ್ಕೆ ಹೋದೆ, ಅವರಿಗೆ ಶುಭ ಕೋರಿದೆ. ಮತ್ತೆ ವಾಪಸ್ ಬಂದಿದ್ದೇನೆ ಎಂದರು.