`ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಯುವಜನತೆಗೆ ಮನದಟ್ಟು ಮಾಡಿಸಬೇಕಿದೆ’

ಮೈಸೂರು,ಜ.12(ವೈಡಿಎಸ್)- ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಯುವ ಜನತೆಗೆ ಮನದಟ್ಟು ಮಾಡಿಸಬೇಕಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ ಹೇಳಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ ದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಕಡಲಿ ನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿ ಚಯಿಸಿದ ಸ್ವಾಮಿ ವಿವೇಕಾನಂದರ ಜೀವನದ ಮಹತ್ವವನ್ನು ಯುವಜನತೆಗೆ ತಿಳಿಸಬೇಕಿದೆ ಎಂದರು.

ಮೈಮುಲ್ ನಿರ್ದೇಶಕ ಅಶೋಕ್ ಮಾತನಾಡಿ, ಸ್ವಾಮಿ ವಿವೇಕಾನಂದರು ಅಧ್ಯಾತ್ಮ, ಸಾಮರಸ್ಯ, ಸಮೃದ್ಧ ಸಂಸ್ಕೃತಿಯ ತವರು ಭಾರತ ಎಂದು ವಿಶ್ವಕ್ಕೆ ತಿಳಿಸಿ ಕೊಟ್ಟರು ಎಂದರು. ಕರ್ನಾಟಕ ಮೃಗಾ ಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್, ಮುಡಾ ಸದಸ್ಯೆ ಲಕ್ಷ್ಮಿದೇವಿ, ಜಿಪಂ ಸದಸ್ಯ ಗುರು ಸ್ವಾಮಿ, ಮುಖಂಡರಾದ ವಿಕ್ರಂ ಅಯ್ಯಂ ಗಾರ್, ಪಂಚಾಕ್ಷರಿ, ಉಮೇಶ್ ಕುಮಾರ್, ಮಹದೇವು, ಕುಮಾರ್, ಶ್ರೀನಿವಾಸ, ರವೀಂದ್ರ, ಲೋಹಿತ್ ಉಪಸ್ಥಿತರಿದ್ದರು.