ವಾರಾಂತ್ಯ ಕಫ್ರ್ಯೂ ಅನಿವಾರ್ಯ: ಸಭಾಪತಿ ಬಸವರಾಜ ಹೊರಟ್ಟಿ

ಮೈಸೂರು, ಏ.24(ವೈಡಿಎಸ್)- ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಾ ಬಂದಿದೆ. ಆದರೆ ಪರಿಸ್ಥಿತಿ ಕೈಮೀರಿ ದಾಗ ಅನ್ಯಮಾರ್ಗವಿಲ್ಲದೆ ವಾರಾಂತ್ಯದ ಕಫ್ರ್ಯೂ ಜಾರಿ ಗೊಳಿಸಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಫ್ರ್ಯೂ ಮಾಡದಿದ್ದರೆ ಜನರು ಸಾಯು ತ್ತಾರೆ. ಮಧ್ಯಮ ವರ್ಗದ ಜನರು ಅರ್ಧ ಊಟ ಮಾಡಿ ಯಾದರೂ ಬದುಕಬಹುದು. ಕೆಲಸ ಇಲ್ಲದಿದ್ದರೂ ಹೇಗಾದರೂ ಮಾಡಿ ಜೀವನ ಸಾಗಿಸಬಹುದು. ಆದರೆ ಸತ್ತರೆ ಏನೂ ಮಾಡಲು ಆಗುವುದಿಲ್ಲ. ಜೀವ ಮುಖ್ಯ ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

‘ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶನಿವಾರ ಮತ್ತು ಭಾನುವಾರ ಕಫ್ರ್ಯೂ ಜಾರಿಗೊಳಿಸಿ. ಉಳಿದ ದಿನಗಳಲ್ಲಿ ಬೇಡ ಎಂಬ ನಾನು ಸಲಹೆ ನೀಡಿದ್ದೆ. ಅದಕ್ಕೆ ಹಲವರು ಬೆಂಬಲ ಸೂಚಿಸಿದ್ದರು. ಈಗ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದೆ. ಕೋವಿಡ್ ನಿಯಂ ತ್ರಿಸಲು ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇದಕ್ಕೆ ಜನರ ಸಹಕಾರವೂ ಮುಖ್ಯ ಎಂದರು. ‘ನಿಸರ್ಗ ಮುನಿಸಿಕೊಂಡಿರುವ ಕಾರಣ ಇಂತಹ ಸಾಂಕ್ರಾಮಿಕ ರೋಗಗಳು ಬರುತ್ತವೆ. ಇದು ನಮ್ಮ ಕೈಯಲ್ಲಿಲ್ಲ. ಮನುಷ್ಯ ಎಷ್ಟು ಬುದ್ಧಿವಂತಿಕೆ ತೋರುತ್ತಾನೋ ಅದಕ್ಕಿಂತ 1 ಹೆಜ್ಜೆ ನಿಸರ್ಗ ಮುಂದೆ ಹೋಗಿದೆ. ಮನುಷ್ಯ ನಿಸರ್ಗದ ಮೇಲೆ ಸವಾರಿ ಮಾಡಬಾರದು ಎಂಬ ಪಾಠವನ್ನು ಕೊರೊನಾ ಕಲಿಸಿಕೊಟ್ಟಿದೆ ಎಂದು ಹೇಳಿದರು.