ಗಜಪಡೆಗೆ ಇಂದಿನಿಂದ ಭಾರ ಹೊರುವ ತಾಲೀಮು ಆರಂಭ

ಮೈಸೂರು, ಆ.17(ಎಂಟಿವೈ)-ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಆಗಮಿಸಿ ಆರಮನೆ ಆವರಣ ದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯುವಿಗೆ ನಾಳೆ (ಆ.18) ಭಾರ ಹೊರಿಸುವ ತಾಲೀಮನ್ನು ಆರಂಭಿ ಸಲು ನಿರ್ಧರಿಸಲಾಗಿದೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವ ದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ 14 ಆನೆಗಳಲ್ಲಿ ಮೊದಲ ತಂಡದಲ್ಲಿ 9 ಆನೆಗಳು ಆ.7ರಂದು ಗಜ ಪಯಣದ ಮೂಲಕ ಮೈಸೂರಿಗೆ ಆಗಮಿಸಿ ಆ.10 ರಂದು ಅರಮನೆಗೆ ಪ್ರವೇಶಿಸಿದವು. ಆ.14ರಿಂದ ಜಂಬೂ ಸವಾರಿ ಮಾರ್ಗ ದಲ್ಲಿ ತಾಲೀಮು ಆರಂಭಿಸಿದ್ದವು. ನಾಳೆಯಿಂದ (ಆ.18)ಯಿಂದ ಭಾರ ಹೊರಿಸುವ ತಾಲೀಮನ್ನು ಆರಂಭಿಸ ಲಾಗುತ್ತಿದೆ. ಬೆಳಗ್ಗೆ 7.45ಕ್ಕೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇ ಶ್ವರ ದೇವಾಲಯದ ಮುಂಭಾಗ ಅಭಿ ಮನ್ಯು ನೇತೃತ್ವದ ಆನೆಗಳಿಗೆ, ಗಾದಿ ಮತ್ತು ನಮ್ದಾ ಪೂಜೆ ಸಲ್ಲಿಸಿ ಅಭಿಮನ್ಯು ಮೇಲೆ 300 ಕೆ.ಜಿ.
ತೂಕದ ಮರಳು ಮೂಟೆಯನ್ನು ಇಟ್ಟು ತಾಲೀಮಿಗೆ ಕೊಂಡೊಯ್ಯಲಾಗುತ್ತದೆ. ನಾಳೆಯಿಂದ ಆರಂಭವಾಗುವ ಭಾರ ಹೊರುವ ತಾಲೀಮು ಹಂತ ಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750 ಕೆ.ಜಿ. ತೂಕವನ್ನು ಭಾರ ಹೊರಲು ಗಜಪಡೆಯನ್ನು ಸನ್ನದ್ದುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ಸ್ಪೆಷಲ್ ಡಯಟ್ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು, ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.