ಮೈಸೂರು ಕೋವಿಡ್-ಮಿತ್ರ ಕೇಂದ್ರಕ್ಕೆ 180 ಮಂದಿ ಸ್ವಯಂ ಸೇವಕರು

ಮೈಸೂರು, ಮೇ 2(ಎಂಟಿವೈ)-ಕೊರೊನಾ ಸೋಂಕಿತರ ನೆರವಿಗಾಗಿ ಮೈಸೂರಿನ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ತೆರೆಯುತ್ತಿರುವ `ಕೋವಿಡ್-ಮಿತ್ರ’ ಚಿಕಿತ್ಸಾ ಮತ್ತು ಸಲಹಾ ಕೇಂದ್ರದಲ್ಲಿ ಕಾರ್ಯ ನಿರ್ವ ಹಿಸಲು 30 ಮಂದಿ ವೈದ್ಯಕೀಯ ಹಾಗೂ 150 ಮಂದಿ ವೈದ್ಯಕೀಯೇತರ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣ ಮಿಸಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಕೀಯ ಮತ್ತು ವೈದ್ಯಕೀ ಯೇತರ ಸಿಬ್ಬಂದಿಗಳ ಕೊರತೆ ಇರುವು ದರಿಂದ ಮೈಸೂರು ಮಹಾನಗರ ಪಾಲಿಕೆ ವೈದ್ಯಕೀಯ ಮತ್ತು ವೈದ್ಯಕೀಯೇತರ ವಿಭಾಗದಲ್ಲಿ ಸೇವೆ ಸಲ್ಲಿಸಲು ಸ್ವಯಂ ಸೇವಕರನ್ನು ಆಹ್ವಾನಿಸಿತ್ತು. ಪಾಲಿಕೆಯ ಈ ಆಹ್ವಾನಕ್ಕೆ ಯುವ ಜನತೆ ಸ್ಪಂದಿಸಿದ್ದು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಪ್ಯಾರಾ ಮೆಡಿ ಕಲ್ ಸಿಬ್ಬಂದಿಗಳನ್ನು ಹಾಗೂ ಸ್ವಯಂ ಸೇವಕರು ಕೋವಿಡ್ ಸೋಂಕಿತರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ.

ವೈದ್ಯಕೀಯ ಸಿಬ್ಬಂದಿಗಳಿಗೆ ತರಬೇತಿ: `ಕೋವಿಡ್-ಮಿತ್ರ’ ಚಿಕಿತ್ಸಾ, ನಿರ್ಧಾರ, ಸಲಹಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು 30 ಮಂದಿ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡಲು ಸ್ವಯಂಸೇವಕರು ಹೆಸರು ನೋಂದಾಯಿಸಿದ್ದಾರೆ. ಅವರಲ್ಲಿ ಯುವ ವೈದ್ಯರು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದ್ದಾರೆ. ವೈದ್ಯಕೀಯ ವಿಭಾಗದ ಈ ಸ್ವಯಂ ಸೇವಕರಿಗೆ ಶನಿವಾರ ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಘುನಾಥ್, ಕೋವಿಡ್-ಮಿತ್ರ ಕೇಂದ್ರವನ್ನು ಸಂಪರ್ಕಿಸುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಮನವರಿಕೆ ಮಾಡಿಕೊಟ್ಟರು. ಪಾಸಿಟಿವ್ ಬಂದಾಕ್ಷಣ ಆಸ್ಪತ್ರೆಗೆ ಸೇರಬೇಕು, ಆಕ್ಸಿಜನ್ ಬೆಡ್ ಅಥವಾ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ತಪ್ಪು ಕಲ್ಪನೆ ಜನರ ಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಗುಣ ಲಕ್ಷಣಗಳನ್ನು ಅವಲೋಕಿಸಿ ಚಿಕಿತ್ಸೆ ನೀಡುವಂತೆ ಡಾ.ರಘುನಾಥ್, ವೈದ್ಯ ಕೀಯ ಸ್ವಯಂ ಸೇವಕರಿಗೆ ವಿವರಿಸಿದರು.

ವೈದ್ಯಕೀಯೇತರ ಸ್ವಯಂ ಸೇವಕರು: ಕೋವಿಡ್-ಮಿತ್ರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು 150 ಮಂದಿ ಯುವಕ, ಯುವತಿ ಯರು ಹಾಗೂ ಪುರುಷರು ಹೆಸರು ನೋಂದಾಯಿಸಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಸೇಟ್ ಮೋಹನ್ ದಾಸ್ ತುಳಸಿದಾಸ್ ಆಸ್ಪತ್ರೆ, ಎನ್.ಆರ್. ಮೊಹಲ್ಲಾದ ಬೀಡಿ ಕಾರ್ಮಿಕರ ಆಸ್ಪತ್ರೆ, ಕೆಆರ್‍ಎಸ್ ರಸ್ತೆಯಲ್ಲಿರುವ ಪಂಚಕರ್ಮ ಆಸ್ಪತ್ರೆಯಲ್ಲಿ ಕೋವಿಡ್ ಮಿತ್ರ ಕೇಂದ್ರವನ್ನು ಆರಂಭಿಸಲಾಗಿದ್ದು, ಸ್ವಯಂ ಸೇವಕರ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ. ಇದ ಕ್ಕಾಗಿ ಪುರಭವನದ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ವೈದ್ಯಕೀಯೇತರ ಸ್ವಯಂಸೇವಕರಿಗೆ ತರಬೇತಿ ಕಾರ್ಯಾ ಗಾರ ಆರಂಭಿಸಲಾಗಿತ್ತು. ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಪಾಲಿಕೆಯ ಆರೋಗ್ಯಾಧಿ ಕಾರಿ ಡಿ.ಜಿ.ನಾಗರಾಜು, ಪಾಲಿಕೆಯ ಸಹಾ ಯಕ ಆಯುಕ್ತರಾದ ಮಂಜುನಾಥ್, ಶಿವ ಕುಮಾರ್ ಹಾಗೂ ಇನ್ನಿತರರು ವೈದ್ಯಕೀ ಯೇತರ ಸ್ವಯಂ ಸೇವಕರಿಗೆ ತಮ್ಮ ಕರ್ತ ವ್ಯದ ಬಗ್ಗೆ ಮಾಹಿತಿ ನೀಡಿ ವಿವರಿಸಿದರು.

ಫ್ರಂಟ್‍ಲೈನ್ ವಾರಿಯರ್ಸ್: ಪಾಲಿಕೆ ಆಯುಕ್ತೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಆಗಮಿಸಿರುವ ವೈದ್ಯ ಕೀಯ ಮತ್ತು ವೈದ್ಯಕೀಯೇತರ ಸ್ವಯಂ ಸೇವಕರನ್ನು ಕೊರೊನಾ ಫ್ರಂಟ್‍ಲೈನ್ ವಾರಿಯರ್ಸ್‍ಗಳೆಂದು ಪರಿಗಣಿಸಲಾಗು ತ್ತದೆ. ಎಲ್ಲರಿಗೂ ಕೊರೊನಾ ಲಸಿಕೆ ಹಾಕಿ ಸಿದ ಬಳಿಕವಷ್ಟೇ ಕೋವಿಡ್-ಮಿತ್ರ ಕೇಂದ್ರ ಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಡಲಾಗುತ್ತದೆ. ಈ ಸ್ವಯಂ ಸೇವಕರು ಕೊರೊನಾ ಸೋಂಕಿತರ ಗುಣಲಕ್ಷಣಗಳನ್ನು ಗಮನಿಸುತ್ತಾರೆ. ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಉಚಿತವಾಗಿ ಮೆಡಿ ಸಿನ್ ಕಿಟ್ ನೀಡಿ ಕೋವಿಡ್ ಪ್ರೋಟೋ ಕಾಲ್‍ನಲ್ಲಿ ಪಾಲಿಸಬೇಕಾದ ನಿಯಮ ಗಳುಳ್ಳ ಭಿತ್ತಿಪತ್ರವನ್ನು ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ಯಾರಿಗಾ ದರೂ ಆರೋಗ್ಯ ಸ್ಥಿತಿ ಉಲ್ಬಣಿಸಿದರೆ ಅಂತಹವರನ್ನು ಪಟ್ಟಿ ಮಾಡಿ ಟೆಲಿ ಮೆಡಿ ಸಿನ್ ಟೀಂ ಮತ್ತು ಶಿಫ್ಟೆಡ್ ಟೀಂನೊಂ ದಿಗೆ ಸಂಪರ್ಕಿಸಿ ಸೂಕ್ತ ಆಸ್ಪತ್ರೆಗೆ ದಾಖ ಲಿಸುವ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ಈ ಮೂರು ಕೋವಿಡ್-ಮಿತ್ರ ಆರೋಗ್ಯ ಕೇಂದ್ರವು ಮಿಡ್ ವೇ ಕ್ಲಿನಿಕ್ ಆಗಿ ಕೆಲಸ ನಿರ್ವಹಿಸಲಿದೆ. ಕೋವಿಡ್ ಪಾಸಿಟಿವ್ ಬಂದಾ ಕ್ಷಣ ಜನರಲ್ಲಿ ಆತಂಕ ಮನೆ ಮಾಡಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸೋಂಕಿ ತರಲ್ಲಿ ಆತ್ಮಸ್ಥೈರ್ಯ ತುಂಬಲು ಕೋವಿಡ್ -ಮಿತ್ರ ಆರೋಗ್ಯ ಕೇಂದ್ರ ಸಹಕಾರಿ ಯಾಗಲಿದೆ. ಈ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಸ್ವಯಂ ಸೇವಕರು ಬಂದಿ ರುವುದು ಸ್ವಾಗತಾರ್ಹ ಎಂದರು.