`ಅಂಚೆ ಅದಾಲತ್’ನಲ್ಲಿ ದೂರುಗಳೇ ಇಲ್ಲ!

ಮೈಸೂರು:  ಮೈಸೂರಿನ ಯಾದವಗಿರಿ ಮೈಸೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಗುರುವಾರ ಕರೆದಿದ್ದ `ಅಂಚೆ ಅದಾ ಲತ್’ನಲ್ಲಿ ಸಾರ್ವಜನಿಕರಿಂದ ಯಾವೊಂದು ದೂರುಗಳು ದಾಖ ಲಾಗಲಿಲ್ಲ. ಪ್ರತಿ ಮೂರು ತಿಂಗಳಿ ಗೊಮ್ಮೆ ಕರೆಯಲಾಗುವ ಅಂಚೆ ಅದಾಲತ್‍ನಲ್ಲಿ ಕಳೆದ ಮಾ.12ರಂದು ಕೇವಲ ಮೂರು ದೂರುಗಳು ದಾಖಲಾಗಿದ್ದವು. ಅವೆಲ್ಲವೂ ಕೇವಲ ಗ್ರಾಹಕರಿಂದ ಸಲಹೆಗಳು ಮಾತ್ರ. ಆದರೆ ಇಂದು ಕರೆದಿದ್ದ ಅಂಚೆ ಅದಾಲತ್‍ನಲ್ಲಿ ಯಾವುದೇ ದೂರು ದಾಖಲಾಗಲಿಲ್ಲ.
ಅಂಚೆ ಇಲಾಖೆಯ ಸೇವೆ, ಪತ್ರ ಮತ್ತು ಪಾರ್ಸಲ್‍ಗಳು ಹಾಗೂ ಇನ್ನಿತರ ತೊಂದರೆಗಳಿಗೆ ಸಂಬಂಧಿಸಿದಂತೆ ಗ್ರಾಹಕರು ದೂರುಗಳನ್ನು ಸಲ್ಲಿಸಲು ವಾರದ ಹಿಂದೆಯೇ ಪ್ರಕಟಣೆ ನೀಡಿ ಅವಕಾಶ ನೀಡಿದ್ದರೂ ಇಂದು ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ಸಹಾಯಕ ಅಧೀಕ್ಷಕ ಎನ್.ವಾಸುದೇವನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಸಾರ್ವಜನಿಕರಿಗಾಗಿ ಆಯಾ ಅಂಚೆ ಕಚೇರಿಗಳಲ್ಲಿಯೂ ದಿನನಿತ್ಯ ದೂರು ನೀಡಲು ಅವಕಾಶವಿದೆ. ದೂರು ಪೆಟ್ಟಿಗೆಯನ್ನೂ ಇಟ್ಟಿದ್ದೇವೆ. ಅಲ್ಲದೆ ಇಲಾಖೆಯ ವೆಬ್‍ಸೈಟ್‍ನಲ್ಲೂ ದೂರು ಸಲ್ಲಿಸಲು ಅವಕಾಶವಿದೆ. https://www.indiapost. gov.in ನಲ್ಲಿ ಲಾಗಿನ್ ಆಗಿ ಅದರಲ್ಲಿ help & support ಕಾಲಂನಲ್ಲಿ register your complaint ಕಾಲಂ ಕ್ಲಿಕ್ ಮಾಡಿ ನಿಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ. ಅಲ್ಲದೆ ಟೋಲ್ ಫ್ರೀ ಸಂಖ್ಯೆ 1924 ಅಥವಾ 18002666868 ಇಲ್ಲಿಗೆ ಕರೆ ಮಾಡಿಯೂ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.