ಇದೇ ಮೊದಲ ಬಾರಿಗೆ ಕನ್ನಡಕ್ಕೆ 11 ರಾಷ್ಟ್ರ ಪ್ರಶಸ್ತಿ: ನಾತಿಚರಾಮಿಗೆ 5, ಕೆಜಿಎಫ್‍ಗೆ 2

ಬೆಂಗಳೂರು, ಆ.9- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿ ಹರನ್ ಅಭಿನಯದ ನಾತಿಚರಾಮಿ ಚಿತ್ರ ಗಳು ಸೇರಿದಂತೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು, ಕನ್ನಡ ಚಿತ್ರರಂಗದ ಇತಿ ಹಾಸದಲ್ಲೇ ಒಂದೇ ವರ್ಷದಲ್ಲಿ ಇಷ್ಟು ಪ್ರಶಸ್ತಿ ಗಳು ಬಂದಿರುವುದು ಇದೇ ಮೊದಲು.

ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ ಡೇಕರ್ ಪ್ರಕಟಿಸಿದರು.

ಪ್ರಶಸ್ತಿ ಪಟ್ಟಿ: ಅತ್ಯುತ್ತಮ ಪ್ರಾದೇಶಿಕ ಚಿತ್ರ- ನಾತಿಚರಾಮಿ, ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು) (ಬಿಂದು ಮಾಲಿನಿ ಗಾಯಕಿ)-ನಾತಿ ಚರಾಮಿ, ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ – ನಾತಿಚರಾಮಿ, ಅತ್ಯುತ್ತಮ ಸಂಕಲನ – ನಾತಿಚರಾಮಿ, ಅತ್ಯುತ್ತಮ ಸಾಹಸ ಚಿತ್ರ -ಕೆಜಿಎಫ್, ಅತ್ಯುತ್ತಮ ವಿಎಫ್ ಎಕ್ಸ್ ಚಿತ್ರ -ಕೆಜಿಎಫ್, ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ – ಒಂದಲ್ಲ, ಎರಡಲ್ಲ, ಅತ್ಯುತ್ತಮ ಬಾಲ ಕಲಾವಿದ-ಒಂದಲ್ಲ, ಎರಡಲ್ಲ, ಅತ್ಯುತ್ತಮ ಮಕ್ಕಳ ಚಿತ್ರ-ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಕಾಸರಗೋಡು, ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ- ಮೂಕಜ್ಜಿಯ ಕನಸುಗಳು, ನಾತಿಚರಾಮಿ ಚಿತ್ರದ ಅಭಿ ನಯಕ್ಕಾಗಿ ಶೃತಿ ಹರಿಹರನ್‍ಗೆ ವಿಶೇಷ ಪ್ರಶಸ್ತಿ.