ಮೈಸೂರು ಮೃಗಾಲಯದಲ್ಲಿ ಈ ಬಾರಿ ಆನ್‍ಲೈನ್ ಬೇಸಿಗೆ ಶಿಬಿರ

ಮೈಸೂರು, ಮೇ15 (ಎಂಟಿವೈ) – ಮೈಸೂರು ಮೃಗಾಲಯದಲ್ಲಿ ಪ್ರತಿವರ್ಷ ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಜೀವನ ಕ್ರಮ, ಆಹಾರ ಪದ್ಧತಿ, ಜೀವವೈವಿಧ್ಯ, ಪರಿಸರ ರಕ್ಷಣೆ ವಿಷಯಗಳನ್ನು ಆಧರಿಸಿ ನಡೆಯುತ್ತಿದ್ದ `ಬೇಸಿಗೆ ಶಿಬಿರ’ ಈ ಬಾರಿ ಲಾಕ್‍ಡೌನ್‍ನಿಂದಾಗಿ ಆನ್‍ಲೈನ್ ರೂಪ ತಾಳಿದ್ದು, ಮೇ 28ರಿಂದ ಜೂನ್ 6ರವರೆಗೆ ಶಿಬಿರ ನಡೆಯಲಿದೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ `ಮೈಸೂರು ಮಿತ್ರ’ನೊಂದಿಗೆ ಶುಕ್ರವಾರ ಮಾತನಾಡಿ, ಮೃಗಾಲಯದ ಬೇಸಿಗೆ ಶಿಬಿರಕ್ಕೆ ಅದೆಷ್ಟು ಬೇಡಿಕೆ ಇತ್ತೆಂದರೆ, ನೂರಾರು ಮಂದಿ ಅವಕಾಶ ಸಿಗದೆ ವಾಪಸಾಗು ತ್ತಿದ್ದರು. ಲಾಕ್‍ಡೌನ್‍ನಿಂದಾಗಿ ಸದ್ಯ ಮೃಗಾ ಲಯ ಬಂದ್ ಆಗಿದ್ದರೂ ಜನರ ಒತ್ತಾ ಯದ ಮೇರೆಗೆ ಆನ್‍ಲೈನ್ ಶಿಬಿರ ನಡೆ ಸಲು ಉದ್ದೇಶಿಸಲಾಗಿದೆ. 12ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ಈ ಶಿಬಿರಕ್ಕೆ ಸೇರಬಹುದು. ಮೇ 28ರಿಂದ ಜೂ.6ರವರೆಗೆ ನಿತ್ಯ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಆನ್‍ಲೈನ್ ತರಗತಿ ನಡೆಯಲಿದ್ದು, ತಜ್ಞರು ವನ್ಯ ಜೀವಿ, ಜಲ ಮತ್ತು ಪರಿಸರ ಸಂರಕ್ಷಣೆ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಶಿಬಿರಕ್ಕೆ 500 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿ ಸಲು ಮೇ 26 ಕೊನೆಯ ದಿನ. ವಿದ್ಯಾರ್ಥಿಗಳು zoo mysore@gmail.comನಲ್ಲಿ ಅರ್ಜಿ ಸಲ್ಲಿಸಬೇಕು. ಇತ್ತೀ ಚಿನ ಪಾಸ್‍ಪೋರ್ಟ್ ಅಳತೆಯ ಎರಡು ಭಾವ ಚಿತ್ರ, ವಯಸ್ಸು ದೃಢೀ ಕರಣ ದಾಖಲೆ, ಆನ್‍ಲೈನ್ ಮೂಲಕ ಶುಲ್ಕ ಪಾವತಿ ಸಿದ ರಶೀದಿ ಫೋಟೊಕಾಪಿ ಸಲ್ಲಿಸ ಬೇಕು. ಲಾಕ್‍ಡೌನ್ ಮುಗಿದು, ಮೃಗಾ ಲಯ ತೆರೆಯಲು ಅವಕಾಶ ನೀಡಿದರೆ ಶಿಬಿರದ ವಿದ್ಯಾರ್ಥಿಗಳನ್ನು ಮೃಗಾ ಲಯಕ್ಕೆ ಆಹ್ವಾನಿಸಿ ಕಾರ್ಯಕ್ರಮ ನಡೆಸ ಲಾಗುವುದು. ಹೆಚ್ಚಿನ ಮಾಹಿತಿಗೆ ಮೃಗಾ ಲಯದ ವೆಬ್‍ಸೈಟ್ ವೀಕ್ಷಿಸಿ. ದೂರ ವಾಣಿ ಸಂಖ್ಯೆ: 0821-2520302 / 2440 752 ಅಥವಾ ಮೊ: 96866 68099 ಸಂಪರ್ಕಿಸಬಹುದು ಎಂದರು.