ಆಮ್ಲಜನಕ ಕೊರತೆಯಿಂದ ಸಾವಿರಾರು ಮಂದಿ ಸಾವು

ಸೆ.22 (ಕೆಎಂಶಿ)- ಕೊರೊನಾ ಸೋಂಕಿತರಿಗೆ ಆಮ್ಲಜನಕ (ಆಕ್ಸಿಜನ್) ಕೊರತೆಯಿಂದ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ವಿಧಾನ ಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡರು. ನಿಯಮ 69ರಡಿಯಲ್ಲಿ ಕೋವಿಡ್-19ರ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲೇ ಆಕ್ಸಿಜನ್ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಯಾಗುತ್ತಿದೆ. ಇಲ್ಲಿ ಉತ್ಪಾದನೆಯಾದದ್ದು ನೆರೆಯ ರಾಜ್ಯಗಳಿಗೆ ರವಾನೆಯಾಗುತ್ತದೆ. ನಮ್ಮವರಿಗೆ ದೊರೆಯುತ್ತಿಲ್ಲ. ಇಂಥ ಸಂದಿಗ್ಧ ಸಂದರ್ಭದಲ್ಲಿ ಆಕ್ಸಿಜನ್ ಬೇರೆ ಉದ್ದೇಶಕ್ಕೆ ಬಳಕೆ ನಿಲ್ಲಿಸಿ ಅನಾರೋಗ್ಯಕ್ಕೆ ಒಳಗಾದವರ ಬಳಕೆಗೆ ನೀಡಬೇಕು. ಈ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ಶಾಶಕ ಹೆಚ್.ಕೆ.ಪಾಟೀಲ್ ಅವರು ಆರೋಪಿಸಿದರು.