3 ವರ್ಷದಿಂದ ತಲೆ ಮರೆಸಿಕೊಂಡಿದ್ದ ಮನೆಗಳವು ಆರೋಪಿ ಸೇರಿ ಮೂವರ ಬಂಧನ

ಮಡಿಕೇರಿ,ಮಾ.16-ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ 3 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮತ್ತು ಕಳವು ಕೃತ್ಯಕ್ಕೆ ಸಹಕರಿಸು ತ್ತಿದ್ದ ಇಬ್ಬರು ಸಹಚರರು ಸೇರಿದಂತೆ ಒಟ್ಟು 3 ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಶನಿವಾರಸಂತೆ ಪೊಲೀ ಸರು ಯಶಸ್ವಿಯಾಗಿದ್ದಾರೆ.

ಕೊಡ್ಲಿಪೇಟೆ ಹೋಬಳಿಯ ಕಣಗಾಲ್ ನಾಕಲಗೋಡು ಗ್ರಾಮದ ನಿವಾಸಿ ಸಣ್ಣಪ್ಪ ಅಲಿಯಾಸ್ ಡೀಲಾಕ್ಷ ಅಲಿಯಾಸ್ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆ ದಾಳು ಗ್ರಾಮದ ನಿವಾಸಿ ಕುಶಾಲ್(47) ಮತ್ತು ಸೋಮವಾರಪೇಟೆ ಕಾರ್ಪೋ ರೇಷನ್ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ರೇಂಜರ್ ಬ್ಲಾಕ್ ನಿವಾಸಿ ಗಣೇಶ್ ಪ್ರಸಾದ್(28) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ 1.80 ಲಕ್ಷ ರೂ. ಮೌಲ್ಯದ 61.29 ಗ್ರಾಂ ಚಿನ್ನಾಭರಣ, 27 ಸಾವಿರ ರೂ. ನಗದು, 3 ಸಾವಿರ ಬೆಲೆಯ 135.78 ಗ್ರಾಂ. ಬೆಳ್ಳಿಯ ಆಭ ರಣ, ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ಫೋನ್ ಮತ್ತು ಸ್ಕ್ರೂ ಡ್ರೈವರ್ ಅನ್ನು ವಶಕ್ಕೆ ಪಡೆಯಲಾಗಿದೆ. 3 ಮಂದಿ ಆರೋಪಿ ಗಳ ಚಲನವಲನವನ್ನು ವೈಜ್ಞಾನಿಕ ತಂತ್ರಜ್ಞಾನದಿಂದ ಕಲೆಹಾಕಿ ಶನಿವಾರಸಂತೆ ಪೊಲೀಸರು ಸೊಮವಾರಪೇಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಕರಣಗಳ ವಿವರ: ಈ ಮೂರು ಮಂದಿ ಕಳವು ಕೃತ್ಯಗಳ ಆರೋಪಿಗಳನ್ನು ಬಂಧಿಸುವ ಮೂಲಕ ಶನಿವಾರಸಂತೆ ಮತ್ತು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 8 ಕಳವು ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಳವು ಪ್ರಕರಣದ ಪ್ರಮುಖ ಆರೋಪಿ ಸಣ್ಣಪ್ಪ ಅಲಿಯಾಸ್ ಡೀಲಾ ಕ್ಷನ ವಿರುದ್ದ ಬೆಂಗಳೂರು, ಹಾಸನದ ಯಸಳೂರು, ಸಕಲೇಶಪುರ, ಶನಿವಾರ ಸಂತೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 34 ಮನೆ ಕಳವು ಪ್ರಕರಣಗಳು ದಾಖಲಾ ಗಿದ್ದವು. ಈ ಪೈಕಿ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 9 ಕಳವು ಪ್ರಕರಣಗಳಲ್ಲಿ ಆರೋಪಿಗೆ ಸೋಮವಾರಪೇಟೆ ನ್ಯಾಯಾಲಯದಿಂದ ಶಿಕ್ಷೆಯಾಗಿದ್ದು, ಇನ್ನು ಕೆಲವು ಪ್ರಕರಣಗಳು ವಿಚಾರಣೆಯಲ್ಲಿದೆ. ಆದರೆ ಆರೋಪಿ ಸಣ್ಣಪ್ಪ ನ್ಯಾಯಾಲಯದ ವಿಚಾರಣೆಗೆ 3 ವರ್ಷದಿಂದ ಹಾಜರಾಗದ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಒಟ್ಟು 13 ದಸ್ತಗಿರಿ ವಾರೆಂಟ್ ಕೂಡ ಜಾರಿಯಾಗಿದೆ. ಪ್ರಮುಖ ಆರೋಪಿ ಸಣ್ಣಪ್ಪ ತಾನು ಕಳವು ಮಾಡಿದ ವಸ್ತುಗಳನ್ನು 3ನೇ ಆರೋಪಿಯಾದ ಸೋಮವಾರಪೇಟೆ ಕಾರ್ಪೋರೇಷನ್ ಬ್ಯಾಂಕಿನ ಅಟೆಂಡರ್ ಗಣೇಶ್ ಪ್ರಸಾದ್ ಎಂಬಾತನಿಗೆ ಮಾರಾಟ ಮಾಡಿದ್ದು, ಗಣೇಶ್ ಪ್ರಸಾದ್‍ನಿಂದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಮೊದಲ ಆರೋಪಿ ಸಣ್ಣಪ್ಪ, ಸಾರ್ವಜ ನಿಕರ ನಡುವೆಯೇ ಹೆಚ್ಚು ಬೆರೆಯುತ್ತಿದ್ದು, ಮನೆಮಂದಿ ಮನೆಯಿಂದ ಹೊರ ತೆರಳಿದ ಸಂದರ್ಭ ಅವರು ಮನೆಯ ಕೀ ಇಡುವ ಸ್ಥಳಗಳನ್ನು ನೋಡಿಕೊಂಡಿ ಕೀ ಬಳಸಿಯೇ ಹೆಚ್ಚು ಮನೆಗಳ ಕಳ್ಳತನ ಮಾಡುತ್ತಿದ್ದ ಎಂದು ಡಾ.ಸುಮನ ತಿಳಿಸಿದರು. 2ನೇ ಮತ್ತು 3ನೇ ಆರೋಪಿ ಗಳು, ಸಣ್ಣಪ್ಪನಿಂದ ಆಭರಣಗಳನ್ನು ಖರೀದಿ ಮಾಡುತ್ತಿದ್ದುದರಿಂದ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಹೇಳಿದರು.
ನಗದು, ಚಿನ್ನಾಭರಣಗಳನ್ನು ಕದ್ದು ಬಳಿಕ ಪರಾರಿಯಾಗುತ್ತಿದ್ದ ಸಣ್ಣಪ್ಪ ಬಳಿಕ ಕೆಲ ದಿನಗಳ ಕಾಲ ತಲೆ ಮರೆಸಿಕೊಳ್ಳುತ್ತಿದ್ದ. ಈ 3 ಮಂದಿ ಆರೋಪಿಗಳು ಕಳವು ಮಾಡಿದ 10 ಲಕ್ಷ ರೂ. ಹೆಚ್ಚು ಚಿನ್ನಾಭ ರಣಗಳನ್ನು ಮಾರಾಟ ಮಾಡಿದ್ದು, ಅದರಲ್ಲಿ ಬಂದ ಹಣವನ್ನು ಜೂಜಾಟ ದಲ್ಲಿ ಕಳೆಯುತ್ತಿದ್ದರೆಂದು ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಶನಿವಾರ ಸಂತೆ ವ್ಯಾಪ್ತಿಯ ಗೋಪಾಲಪುರ, ಕಾಜೂರು ಗ್ರಾಮ, ಕೊಡ್ಲಿಪೇಟೆ, ಅಂಕನಹಳ್ಳಿ,ಕಣ್ಣಾರಳ್ಳಿ, ಅವರೆದಾಳು, ಬೆಟ್ಟದಳ್ಳಿ, ಊರುಗುತ್ತಿ ಗ್ರಾಮಗಳಲ್ಲಿ ನಡೆದ 8 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸೋಮವಾರ ಪೇಟೆ ಡಿವೈಎಸ್‍ಪಿ ಶೈಲೇಂದ್ರ, ಸೋಮ ವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇ ಗೌಡ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಶನಿವಾರಸಂತೆ ಪಿಎಸ್‍ಐ ಕೃಷ್ಣ ನಾಯಕ, ಸಿಬ್ಬಂದಿಗಳಾದ ಬೋಪಣ್ಣ, ಲೋಕೇಶ್, ಮುರಳಿ, ವಿನಯ್ ಕುಮಾರ್, ಕುಶಾಲನಗರ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಗೋಪಾಲ್, ದಯಾನಂದ, ಸಜಿ, ಸಿಪಿಐ ಕಚೇರಿ ಸಿಬ್ಬಂದಿಗಳಾದ ಅನಂತ್ ಕುಮಾರ್, ಮಂಜುನಾಥ್, ಕುಮಾರಸ್ವಾಮಿ, ಬೆರಳಚ್ಚು ವಿಭಾಗದ ಸಂತೋಷ್, ಸಿಡಿಆರ್ ಸೆಲ್‍ನ ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.