ಮೈಸೂರಲ್ಲಿ ಗುರುವಾರ 2240 ಜನರಿಗೆ ಸೋಂಕು

ಮೈಸೂರು, ಮೇ 27(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಗುರುವಾರ 2,240 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,36,688ಕ್ಕೆ ಏರಿಕೆಯಾಗಿದೆ. ಇಂದು 2,088 ಸೋಂಕಿ ತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವ ರೆಗೆ ಒಟ್ಟು 1,18,387 ಮಂದಿ ಕೊರೊನಾ ಮುಕ್ತರಾಗಿದ್ದಾರೆ. ಮೇ 25ರಂದು ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಮೃತಪಟ್ಟ 3 ತಿಂಗಳ ಹೆಣ್ಣುಮಗು ಸೇರಿದಂತೆ 9 ಮಂದಿ ಮಹಿಳೆಯರು ಹಾಗೂ 9 ಮಂದಿ ಪುರುಷರು ಸೇರಿ ಒಟ್ಟು 18 ಜನ ಸೋಂಕಿನಿಂದ ಮೃತಪಟ್ಟಿರುವುದಾಗಿ ಗುರುವಾರದ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1,556 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕೆಲ ದಿನಗಳಿಂದ ಪಾಸಿಟಿವ್ ಪ್ರಕರಣಕ್ಕಿಂತ ಗುಣಮುಖ ರಾಗಿ ಡಿಸ್ಚಾರ್ಜ್ ಆಗುವವರು ಕಡಿಮೆಯಾಗಿರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,745ಕ್ಕೆ ಏರಿಕೆಯಾಗಿದೆ. ಇವರಲ್ಲಿ 10,396 ಮಂದಿ ಹೋಂ ಐಸೊಲೇಷನ್‍ನಲ್ಲಿ, 1,560 ಸೋಂಕಿತರು ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದು, ಉಳಿದವರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 214, ಬಳ್ಳಾರಿ 725, ಬೆಳಗಾವಿ 1,147, ಬೆಂಗಳೂರು ಗ್ರಾಮಾಂತರ 623, ಬೆಂಗ ಳೂರು ನಗರ 5,949, ಬೀದರ್ 60, ಚಾಮರಾಜನಗರ 380, ಚಿಕ್ಕಬಳ್ಳಾಪುರ 238, ಚಿಕ್ಕಮಗಳೂರು 715, ಚಿತ್ರದುರ್ಗ 710, ದಕ್ಷಿಣಕನ್ನಡ 555, ದಾವಣಗೆರೆ 806, ಧಾರವಾಡ 678, ಗದಗ 370, ಹಾಸನ 1,505, ಹಾವೇರಿ 159, ಕಲಬುರಗಿ 153, ಕೊಡಗು 337, ಕೋಲಾರ 591, ಕೊಪ್ಪಳ 495, ಮಂಡ್ಯ 755, ಮೈಸೂರು 2,240, ರಾಯಚೂರು 445, ರಾಮನಗರ 263, ಶಿವಮೊಗ್ಗ 822, ತುಮಕೂರು 1,219, ಉಡುಪಿ 905, ಉತ್ತರಕನ್ನಡ 659, ವಿಜಯಪುರ 306, ಯಾದಗಿರಿ ಜಿಲ್ಲೆಯಲ್ಲಿ 190 ಸೇರಿದಂತೆ ರಾಜ್ಯದಲ್ಲಿ ಗುರುವಾರ 24,214 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 25,23,998ಕ್ಕೆ ಏರಿಕೆಯಾಗಿದ್ದು, ಇಂದು ಡಿಸ್ಚಾರ್ಜ್ ಆದ 31,459 ಮಂದಿ ಸೇರಿ ಇಲ್ಲಿವರೆಗೆ 20,94,369 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿನಿಂದ ಮತ್ತೆ 476 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 27,405ಕ್ಕೆ ಹೆಚ್ಚಿದೆ. ರಾಜ್ಯದಲ್ಲಿನ್ನು 4,02,203 ಸಕ್ರಿಯ ಪ್ರಕರಣಗಳಿವೆ.