ಮಡಿಕೇರಿ, ಏ.7- ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ನಡೆಸಿದ್ದು, ಹರಿಹರ ಗ್ರಾಮದಲ್ಲಿ ರೈತರೋರ್ವರ ಜಾನು ವಾರು ಬಲಿಯಾಗಿದೆ.
ಗ್ರಾಮದ ತೀತಿರ ರಮೇಶ್ ಮುದ್ದಯ್ಯ ಅವರಿಗೆ ಸೇರಿದ ಜಾನುವಾರು ಮೇಲೆ ಸೋಮವಾರ ರಾತ್ರಿ 11.30ಕ್ಕೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಹುಲಿ ದಾಳಿ ನಡೆಸಿದ್ದ ಸದ್ದಿಗೆ ಮನೆಯವರ ಎಚ್ಚರ ಗೊಂಡು ಹೊರಬಂದು ನೋಡಿದಾಗ ಎತ್ತನ್ನು ಸಾಯಿಸಿ, ಹುಲಿ ಪರಾರಿಯಾಗಿದೆ.
ಮಂಗಳವಾರ ಮುಂಜಾನೆ ವೇಳೆ ಮತ್ತೆ ಬಂದ ಹುಲಿ ಎತ್ತನ್ನು ಎಳೆದೊಯ್ದು ಸ್ವಲ್ಪ ಭಾಗವನ್ನು ತಿಂದಿದೆ. ಮಾರ್ಚ್ 24ರ ರಾತ್ರಿ ಹರಿಹರ ಗ್ರಾಮದ ರೈತ ಅಜ್ಜಿಕುಟ್ಟಿರ ರಾಜು ದೇವಯ್ಯ ಅವರ 2 ಹಸುಗಳ ಮೇಲೆ ದಾಳಿ ಮಾಡಿ ಹುಲಿ ಕೊಂದು ತಿಂದಿತ್ತು. ಅರಣ್ಯ ಇಲಾಖೆಗೆ ಹುಲಿ ಸೆರೆಗೆ ಸರಕಾರ ಅಧಿಕೃತ ಆದೇಶ ನೀಡಿದ್ದರೂ, ಹುಲಿ ಸೆರೆಗೆ ಗಂಭೀರವಾಗಿ ಅರಣ್ಯಾಧಿಕಾರಿ ಗಳು ತೊಡಗಿಸಿಕೊಂಡಿಲ್ಲ ಎಂದು ಟಿ.ಶೆಟ್ಟಿಗೇರಿ ಗ್ರಾಪಂ ಸದಸ್ಯ ಮುಕ್ಕಾಟಿರ ಸಂದೀಪ್ ಆರೋಪಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗುವಂತೆ ಅವರು ಒತ್ತಾ ಯಿಸಿದ್ದಾರೆ. ಜಾನುವಾರು ಕಳೆದುಕೊಂಡ ಮಾಲೀಕ ರಮೇಶ್ ಮುದ್ದಯ್ಯ ಅವರಿಗೆ ಅರಣ್ಯ ಇಲಾಖೆ ರೂ.10 ಸಾವಿರದ ಪರಿಹಾರ ಚೆಕ್ ಅನ್ನು ನೀಡಲಾಯಿತು.
ಗೋಣಿಕೊಪ್ಪ ವರದಿ: ಪ್ರತ್ಯೇಕ ಹುಲಿ ದಾಳಿಗೆ ಮೂರು ಜಾನುವಾರುಗಳು ಬಲಿ ಯಾಗಿರುವ ಘಟನೆ ದಕ್ಷಿನ ಕೊಡಗಿನ ಚಿಕ್ಕಮುಂಡೂರು ಮತ್ತು ಹರಿಹರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮುಂಡೂರು ಗ್ರಾಮದ ಮಚ್ಚಮಾಡ ಭೀಮಯ್ಯ ಅವರ ಹಸು, ಹರಿಹರ ಗ್ರಾಮದ ತೀತಿರ ರಮೇಶ್ ಎಂಬುವರ ಹಸು ಸೇರಿದಂತೆ ಚಿಕ್ಕಮುಂಡೂರು ಗ್ರಾಮದ ಚಿಮ್ಮಣಮಾಡ ರಘು ಅವರ ಎಮ್ಮೆ ಕರು ಪ್ರತ್ಯೇಕ ಹುಲಿ ದಾಳಿಯಲ್ಲಿ ಬಲಿಯಾಗಿದೆ.
ಅರಣ್ಯ ಇಲಾಖೆ ಆದಷ್ಟು ಬೇಗ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾ ಯಿಸಿದ್ದಾರೆ. ಅರಣ್ಯ ಇಲಾಖೆ ವತಿ ಯಿಂದ ಹಸು ಕಳೆದುಕೊಂಡವರಿಗೆ ತಲಾ 10 ಸಾವಿರ ಚೆಕ್ ಹಸ್ತಾತರಿಸಿದರು.