ಬ್ರಿಟೀಷರ ವಿರುದ್ಧ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು

ಹಾಸನ:  ರಾಷ್ಟ್ರವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಹಜóರತ್ ಟಿಪ್ಪು ಸುಲ್ತಾನ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಟಿಪ್ಪು ಸುಲ್ತಾನ್ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ಪ್ರಬಲ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್ ಎಂದರು.

ಟಿಪ್ಪು ಮೂರು ಬಾರಿ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದರು. ಈ ಯುದ್ದಗಳು ಆಂಗ್ಲೋ-ಮೈಸೂರು ಯುದ್ದಗಳೆಂದೇ ಇತಿಹಾಸದಲ್ಲಿ ದಾಖಲಾಗಿವೆ ಎಂದ ಸಚಿ ವರು, ಟಿಪ್ಪು ಕೇವಲ ಒಂದು ಧರ್ಮಕ್ಕೆ ಸೀಮಿ ತವಾದ ನಾಯಕರಾಗಿ ನೋಡಬಾರದು. ಅವರು ಶೃಂಗೇರಿ, ನಂಜನಗೂಡು, ಮೇಲು ಕೋಟೆಯ ಹಿಂದು ದೇವಾಲಯಗಳಿಗೂ ಸಾಕಷ್ಟು ನೆರವು ನೀಡಿದ್ದಾರೆ ಎಂದರು.
ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ದ ಹೋರಾಡಿ ನಾಡಿನ ರಕ್ಷಣಿಗಾಗಿ ತನ್ನರೆಡು ಮಕ್ಕಳನ್ನು ಒತ್ತೆ ಇಟ್ಟಿದ್ದರು. ತನ್ನ ಸಾಮ್ರಾಜ್ಯದ ಜನರ ನೆಮ್ಮದಿ ಹಾಗೂ ಸುಖ ಕ್ಕಾಗಿ ಹೊರಾಡುತ್ತಲೇ ಯುದ್ದ ಭೂಮಿ ಯಲ್ಲಿ ವೀರಮರಣ ಹೊಂದಿದ್ದ ಅವರ ವೀರ ಪರಂಪರೆಯನ್ನು ಗೌರವಿಸಬೇಕಿದೆ. ಟಿಪ್ಪು ಸುಲ್ತಾನ್ ರಾಕೆಟ್ ತಂತ್ರಜ್ಞಾನದ ಜನಕರು ಹಾಗೂ ಎರಡನೇ ಆಂಗ್ಲೋ ಇಂಡಿ ಯನ್ ಯುದ್ದದಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿದ ಟಿಪ್ಪು ಬ್ರಿಟೀಷರ ನಿದ್ದೆಗೆಡಿಸಿ ದ್ದರು. ಟಿಪ್ಪು ದಕ್ಷ ಆಡಳಿತಗಾರ, ಅತ ಬಹು ಮುಖಿ ಸಂಸ್ಕøತಿಯ ಆರಾಧಕ ಕೂಡ ಅಗಿದ್ದರು ಎಂದರು.

ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಕೃಷಿಗೆ ಆದ್ಯತೆ ಇತ್ತು. ಕಾವೇರಿ ನದಿಗೆ ಮೊದಲ ಅಣೆಕಟ್ಟು ಕಟ್ಟಿದ್ದು ಟಿಪ್ಪು, ಅದೇ ಜಾಗ ದಲ್ಲಿ ನಂತರ ಕೆ.ಆರ್.ಎಸ್. ನಿರ್ಮಾಣ ವಾಯಿತು. ಕರ್ನಾಟಕ್ಕೆ ರೇಷ್ಮೆ ಪರಿಚಯಿ ಸಿದ ಕೀರ್ತಿ ಟಿಪ್ಪು ಸುಲ್ತಾನರದ್ದು. ಬೆಂಗ ಳೂರಿನಲ್ಲಿ ಪ್ರಪ್ರಥಮ ಜೈವಿಕ ಉದ್ಯಾನ ಲಾಲಾಭಾಗ್ ಅಭಿವೃದ್ದಿ ಪಡಿಸಿದ್ದು ಟಿಪ್ಪು ಸುಲ್ತಾನ್.ಸ್ಥಳೀಯವಾಗಿ ಮದ್ಯಮಾರಾಟ ನಿಷೇಧಿಸಿದ್ದರು.

ನೂರಾರು ವರ್ಷ ಇಲಿಯಂತೆ ಬದು ಕುವ ಬದಲು 3 ದಿನ ಹುಲಿಯಂತೆ ಬದು ಕುತ್ತೇನೆ ಎಂದು ಸದಾ ಹೇಳುತ್ತಿದ್ದ ಟಿಪ್ಪು ಸುಲ್ತಾನ್ ಅವರು ಹಾಗೇ ಬದುಕಿ ವೀರ ನಾಗಿ ಹುತಾತ್ಮರಾದರು. ಮೈಸೂರು ಸಂಸ್ಥಾ ನದ 156 ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡಿದ ಸಂಗತಿಗಳು ದಾಖಲಾ ಗಿವೆ ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೋಸ್ಕರ ಹೋರಾಟ ಮಾಡಿದವರ ಜನ್ಮ ಜಯಂತಿ ಯನ್ನು ಆಚರಿಸುವುದು ಹೆಮ್ಮೆ ವಿಷಯ ವಾಗಿದೆ ಎಂದರು. ಟಿಪ್ಪು ಸುಲ್ತಾನ್ ಅವರು ಸಕಲ ಧರ್ಮಗಳನ್ನು ಸಮಾನತೆ ಯಿಂದ ಕಾಣುತ್ತಿದ್ದರು. ಅವರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.
ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹೆಚ್.ಎಲ್. ಮಲ್ಲೇಶ್ ಗೌಡ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್ ಗೌಡ, ಅಪರ ಜಿಲ್ಲಾ ಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿ ಷ್ಠಾಧಿಕಾರಿ ನಂದಿನಿ, ಡಿ.ವೈ.ಎಸ್.ಪಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಹಾಗೂ ಮುಸಲ್ಮಾನ ಧರ್ಮದ ವಿವಿಧ ಮುಖಂಡ ರುಗಳು ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂ ಭದಲ್ಲಿ ನಿನ್ನೆ ನಿಧನರಾದ ಸಾಹಿತಿ ಪ್ರಗತಿ ಪರ ಚಿಂತಕ ರಾದ ಜ.ಹೊ.ನಾರಾಯಣ ಸ್ವಾಮಿ ಅವರ ಆತ್ಮಕ್ಕೆ ಮೌನ ಆಚರಿಸುವ ಮೂಲಕ ಶಾಂತಿ ಕೋರಲಾಯಿತು.