ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಜ್ಞಾನದ ಅವಶ್ಯಕತೆ ಇದೆ

ಮೈಸೂರು, ಆ.30- ಮೈಸೂರಿನ ಜಯಲಕ್ಷ್ಮೀಪುರಂ ನಲ್ಲಿರುವ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ದೈಹಿಕ ಸಾಮಥ್ರ್ಯ ಮತ್ತು ಕ್ರೀಡಾ ನಿರ್ವಹಣೆಗೆ ವೈಜ್ಞಾನಿಕ ಅನುಸಂಧಾನ ಕುರಿತು ರಾಷ್ಟ್ರಮಟ್ಟದ ವೆಬಿನಾರ್ ಆಯೋಜಿಸಲಾಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಪಿಇ ಮತ್ತು ಎಸ್‍ಎಸ್ ವಿಭಾಗದ ಅಧ್ಯಕ್ಷ ಡಾ.ಸಿ.ವೆಂಕ ಟೇಶ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಜ್ಞಾನದ ಅವಶ್ಯಕತೆ ಇದೆ. ದೈಹಿಕ ಸಾಮಥ್ರ್ಯದ ಬಗ್ಗೆ ಪುಸ್ತಕಗಳು, ಸಂಶೋ ಧನಾ ಲೇಖನಗಳು ಹಾಗೂ ಪ್ರಬಂಧಗಳು ಗ್ರಂಥಾಲಯ ಗಳಲ್ಲಿ ಲಭ್ಯವಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಓದಿ ಆರೋಗ್ಯ ಕಾಪಾಡಿಕೊಳ್ಳುವ ಮನೋಭಾವದ ಅವ ಶ್ಯಕತೆ ಇಂದಿನ ಕೋವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆರೋಗ್ಯಕರ ಮತ್ತು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಮುಖ್ಯ ವಾಗುತ್ತದೆ. ಇದಕ್ಕೆ ಪೂರಕವಾಗಿ ತರಬೇತಿ ಕಾರ್ಯಕ್ರಮ ಗಳು ಅತ್ಯಗತ್ಯ. ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಗಳು ತಮ್ಮ ಪಠ್ಯವನ್ನು ವಿನ್ಯಾಸ ಹಾಗೂ ಪಠ್ಯಕ್ರಮವನ್ನು ರೂಪಿಸುವಲ್ಲಿ ಕ್ರೀಡಾ ತತ್ವಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಪಿಇ ಮತ್ತು ಎಸ್‍ಎಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮದಿಅಲಗನ್ ಮಾತನಾಡಿ, ಕೋವಿಡ್-19 ಪರಿಸ್ಥಿತಿ ಯಿಂದ ಶಾಲಾ, ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆ ಗಳು ಕ್ರೀಡಾ ಚಟುವಟಿಕೆಗಳಿಂದ ವಂಚಿತವಾಗಿವೆ. ಪ್ರಸ್ತುತ ಘಟ್ಟದಲ್ಲಿ ಕ್ರೀಡಾ ನಿರ್ವಹಣೆ ಹಾಗೂ ಕ್ರೀಡಾ ಚಟು ವಟಿಕೆಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಸಂಘಟನೆ, ಯೋಜನೆ ಹಾಗೂ ತರಬೇತಿ ಕಾರ್ಯಾಗಾರಗಳ ಅವಶ್ಯ ಕತೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿದ್ಯಾ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳು ಕಾರ್ಯೋ ನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಪುಷ್ಪ ರಾಣಿ ಪಿ.ಜಿ. ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ವೆಬಿನಾರ್ ಸಂಚಾಲಕರಾದ ಡಾ. ಹೆಚ್.ಎನ್.ಭಾಸ್ಕರ್ ಸ್ವಾಗತಿಸಿದರು. ಕಾರ್ತಿಕ್ ಎಂ.ಯು. ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮಧುಸೂಧನ್ ವಂದಿಸಿ ದರು. ಅಧ್ಯಾಪಕರು, ಕ್ರೀಡಾಸಕ್ತರು, ಕ್ರೀಡಾ ವಿದ್ಯಾರ್ಥಿ ಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.