ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಶಾಸಕರ ತಾಕೀತು

ಗುಂಡ್ಲುಪೇಟೆ:  ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಕಡ್ಡಾಯ ವಾಗಿ ದೊರಕುವಂತಾಗಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋ ಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಕುಂದುಕೊರತೆಗಳ ಬಗ್ಗೆ ವಿವರ ಪಡೆದು ಅವರು ಮಾತನಾಡಿದರು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಏನು ಸಮಸ್ಯೆ ಗಳಿವೆ ಎಂಬುದು ನನಗೆ ಗೊತ್ತಿದೆ. ಯಾವುದೇ ವೈದ್ಯರೂ ಸಕಾಲಕ್ಕೆ ಬಾರದೆ ರೋಗಿಗಳು ಕಾಯುವಂತಾಗಿದೆ. ಇದು ತಪ್ಪಬೇಕು ಎಂದರು.
ಇದಕ್ಕೆ ಉತ್ತರಿಸಿದ ತಾಲೂಕು ಆರೋ ಗ್ಯಾಧಿಕಾರಿ ಡಾ.ರವಿಕುಮಾರ್, ಇಲಾಖೆಯ ವರದಿ ನೀಡಿ, ಗ್ರಾಮೀಣ ಪ್ರದೇಶಗಳ ಆಸ್ಪ ತ್ರೆಗಳಲ್ಲಿ ಮಹಿಳಾ ಸಹಾಯಕಿಯರ ಕೊರ ತೆಯಿಂದ ಹಲವಾರು ಉಪಕೇಂದ್ರಗಳನ್ನು ನಡೆಸಲಾಗುತ್ತಿಲ್ಲ. ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಸಮಸ್ಯೆಗಳಾಗುತ್ತಿವೆ. ಅಲ್ಲದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಅಗತ್ಯವಾದ ಹತ್ತಿ, ಬ್ಯಾಂಡೇಜ್ ಸೇರಿದಂತೆ ಮೂಲ ಸೌಕರ್ಯ ಮತ್ತು ಔಷಧಿಗಳ ಕೊರತೆ ತೀವ್ರವಾಗಿದ್ದು, ಸಮರ್ಪಕ ಚಿಕಿತ್ಸೆ ನೀಡಲೂ ಕಷ್ಟವಾಗಿದೆ. ಜನರಿಕ್ ಮಳಿಗೆ ನಡೆಸಲು ಅಗತ್ಯ ಅನುದಾನವಿಲ್ಲದೆ ಔಷಧ ಸಂಗ್ರಹ ಮಾಡಲಾಗಿಲ್ಲ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರೇಟರ್ ಖರೀದಿಸಿದ್ದರೂ ಬಳಕೆಗೆ ತಾರದೆ ಡಯಾಲಿಸಿಸ್ ಹಾಗೂ ಲ್ಯಾಬ್ ಪರೀಕ್ಷೆಗಳನ್ನು ಮಾಡುತ್ತಿಲ್ಲ. ಕೋಟ್ಯಾಂ ತರ ರೂಪಾಯಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದರೂ ಉಪಯೋಗ ವಾಗುತ್ತಿಲ್ಲ ಎಂಬ ಆರೋಪಗಳಿವೆ ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಜಿಪಂ ಸದಸ್ಯ ಮಹೇಶ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಸ್ಪತ್ರೆಯ ಆಡ ಳಿತಾಧಿಕಾರಿ ಡಾ. ನಾಗಾಚಾರ್, ಹೊಸ ದಾಗಿ ವೈರಿಂಗ್ ಮಾಡಿಸಲಾಗುತ್ತಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಇನ್ನೂ ಯಾವುದೇ ಸಿಬ್ಬಂದಿ ನೇಮಕ ಮಾಡದ ಕಾರಣ ಲಭ್ಯ ಸಿಬ್ಬಂದಿಯನ್ನು ಬಳಸಿಕೊಂಡು ಕೇವಲ ಹೊರರೋಗ ವಿಭಾಗ ನಡೆಸಲಾಗುತ್ತಿದೆ ಎಂದರು. ಶಿಕ್ಷಣ ಇಲಾಖೆ ಬಗ್ಗೆ ಬಿಇಒ ಡಾ.ಹಾಲತಿ ಸೋಮಶೇಖರ್ ವಿವರ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಕೊನೆಯ ಸ್ಥಾನ ದಲ್ಲಿದ್ದ ತಾಲೂಕಿನ ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಹಳೆಯ ಶಾಲಾ ಕಟ್ಟಡ ಗಳನ್ನು ಕೆಡವಲು ಅನುಮತಿ ದೊರಕಿ ದ್ದರೂ ಆರ್ಥಿಕ ಸಂಪನ್ಮೂಲದ ಕೊರತೆ ಯಿಂದ ಸಾಧ್ಯವಾಗಿಲ್ಲ ಎಂದರು.

ಜಿಪಂ ಸದಸ್ಯರಾದ ಕೆರೆಹಳ್ಳಿ ನವೀನ್ ಹಾಗೂ ಕೆ.ಎಸ್.ಮಹೇಶ್ ಮಾತನಾಡಿ, ಹಳೆಯ ಶಾಲಾ ಕಟ್ಟಡಗಳು ಅಕ್ರಮ ಅನೈ ತಿಕ ಚಟುವಟಿಕೆಗಳ ತಾಣಗಳಾಗಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ನೆರವಿನಿಂದ ಶಿಥಿಲ ಕಟ್ಟಡಗಳ ನೆಲಸಮ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. ಹಳೆಯ ಕಟ್ಟಡದಲ್ಲಿ ದೊರಕುವ ಮರಮುಟ್ಟುಗಳನ್ನು ಹರಾಜು ಮಾಡುವ ಮೂಲಕ ಸರಿದೂಗಿಸುವಂತೆ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಏಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವ ಹಾಗೂ ವರದಿ ನೀಡುವುದಾಗಿ ಬಿಇಒ ಹೇಳಿದರು.

ಕಾಡಂಚಿನ ಜಕ್ಕಹಳ್ಳಿ ಗ್ರಾಮದ ಶಾಲೆಯಲ್ಲಿನ ಕೊಠಡಿಗಳು ಶಿಥಿಲವಾಗಿದ್ದು ಮಕ್ಕಳು ಬೀದಿ ಯಲ್ಲಿ ಕುಳಿತು ವಿದ್ಯೆಕಲಿಯುವಂತಾಗಿದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡದೆ ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದು ಕೊಂಡರು. ಇದಕ್ಕೆ ಉತ್ತರಿಸಿದ ಬಿ.ಇ.ಒ. ಸದ್ಯಕ್ಕೆ ಗ್ರಾಮದ ಡೈರಿಯಲ್ಲಿ ತರಗತಿ ನಡೆ ಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯ ಎಇ ಮರಿಸ್ವಾಮಿ ಇಲಾಖೆಯ ಕಾಮಗಾರಿಗಳು ಹಾಗೂ ಪ್ರತಿ ಬಗ್ಗೆ ವಿವರ ನೀಡುವಾಗ ಸ್ಥಳೀಯ ಜನ ಪ್ರತಿನಿಧಿಗಳ ಗಮನಕ್ಕೂ ತಾರದೆ ಗುಟ್ಟಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಜಿಪಂ ಸದಸ್ಯರಾದ ಪಿ.ಚನ್ನಪ್ಪ, ಬಿ.ಕೆ.ಬೊಮ್ಮಯ್ಯ, ಮಹೇಶ್ ಹಾಗೂ ನವೀನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಯೋಜನೆಯಲ್ಲಿ ಹುತ್ತೂರು ಗ್ರಾಮಕ್ಕೆ ಸಂಪರ್ಕ ಸೇತುವೆ ನಿರ್ಮಿಸಿ ದ್ದರೂ ಬಳಕೆಗೆ ತಂದಿಲ್ಲ. ಅಲ್ಲದೆ ಕೆರೆಯ ಮಣ್ಣನ್ನೇ ರಸ್ತೆಗೆ ಹಾಕಲಾಗಿದೆ. ಇದರಿಂದ ಮಳೆಗಾಲದಲ್ಲಿ ಕೆಸರಿನಿಂದ ಸಂಚಾರ ಮಾಡ ಲಾಗುವುದಿಲ್ಲ. ಇವರಿಂದ ನಾವು ಜನರ ಆಕ್ರೋಶ ಎದುರಿಸುವಂತಾಗಿದೆ ಎಂದರು.

ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಬಗ್ಗೆ ಮೆಚ್ಚುಗೆಯಿದೆ. ಆದರೂ ನಾನೇ ಖುದ್ದಾಗಿ ಸ್ಥಳಕ್ಕೆ ಬಂದು ಪರಿ ಶೀಲಿಸುತ್ತೇನೆ. ಎಲ್ಲಾ ಕೆರೆಗಳ ಒತ್ತುವರಿ ಗಳನ್ನು ತೆರವು ಮಾಡಿ ಗಡಿಯನ್ನು ಭದ್ರ ಗೊಳಿಸಬೇಕು. ಮಳೆಗಾಲದಲ್ಲಿ ಎಲ್ಲಾ ಕೆರೆ ಗಳಿಗೂ ಸರಾಗವಾಗಿ ನೀರು ಹರಿದು ಬರು ವಂತೆ ಪೆÇೀಷಕ ನಾಲೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಮುಂದಿನ ವಾರ ದೊಳಗೆ ಸೇತುವೆ ಸುತ್ತ ಹಾಕಿರುವ ಕೆರೆ ಮಣ್ಣು ತೆರವು ಮಾಡಿ ಜರುಬು ಮಣ್ಣು ಹಾಕಿಸಿ ಎಂದು ಶಾಸಕರು ಸೂಚನೆ ನೀಡಿದರು.
ನಂತರ ಅಕ್ಷರ ದಾಸೋಹ, ಕೃಷಿ, ಲೋಕೋಪಯೋಗಿ, ಸಮಾಜಕಲ್ಯಾಣ ಇಲಾಖೆ, ರೇಷ್ಮೆ, ಶಿಶು ಅಭಿವೃದ್ದಿ, ಅರಣ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ನಂತರ ಮಾತ ನಾಡಿದ ಶಾಸಕರು, ಯಾವುದೇ ಇಲಾ ಖೆಯ ಅಧಿಕಾರಿಗಳೂ ತಮ್ಮ ಇಲಾಖೆ ಗಳಿಗೆ ಬೇಕಾದ ನೆರವಿನ ಬಗ್ಗೆ ಮುಚ್ಚು ಮರೆಯಿಲ್ಲದೆ ಮುಕ್ತವಾಗಿ ಮಾತನಾಡಿ. ನನಗೆ ಕ್ಷೇತ್ರದ ಸರ್ವಾಂಗೀಣ ಅಭಿ ವೃದ್ಧಿಯಾಗಲು ನಿಮ್ಮ ನೆರವಿನ ಅಗತ್ಯ ವಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಜಿಪಂ ಸದಸ್ಯರಾದ ಮಹೇಶ್ ನವೀನ್, ಚನ್ನಪ್ಪ, ಬೊಮ್ಮಯ್ಯ, ರತ್ನಮ್ಮ ಶ್ರೀಕಂಠಪ್ಪ, ತಹಶೀಲ್ದಾರ್ ಚಂದ್ರ ಕುಮಾರ್ ತಾಪಂ ಇಒ ಡಾ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ರೂಪಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.