ಹನುಮಂತನ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆಗೆ  ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮೂಲಕ ಟೀಕೆ

ಮೈಸೂರು, ಡಿ.28(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದ ರಾಮಯ್ಯ ಅವರು ಸಿದ್ದ ರಾಮನಹುಂಡಿಯಲ್ಲಿ ಮತ ಚಲಾಯಿಸಿದ ಬಳಿಕ ಸ್ನೇಹಿ ತನ ಮನೆಯಲ್ಲಿ ಬಾಡೂಟ ಸೇವಿಸುವ ವೇಳೆ  ಬೆಂಬಲಿಗ ನೊಬ್ಬನೊಂದಿಗೆ ಭಗ ವಾನ್ ಹನುಮನ ಬಗ್ಗೆ ಆಡಿದ ಮಾತಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಟ್ವೀಟ್ ಮೂಲಕ ಟೀಕಿಸಿದ್ದಾರೆ

ಸಿದ್ದರಾಮಯ್ಯನವರೇ, ಹನುಮ ಜಯಂತಿ ಯನ್ನು ತಾರೀಖು ನೋಡಿ ಮಾಡುವು ದಲ್ಲ. ತಿಥಿ ನಕ್ಷತ್ರದ ಪ್ರಕಾರ ಮಾಡಲಾಗು ತ್ತದೆ. ನಮ್ಮ ಧರ್ಮದಲ್ಲಿ ಹನುಮಂತ ಶೂರ ಹಾಗೂ ಬಲಾಢ್ಯ. ಅವನನ್ನು ಶಕ್ತಿ ಸಂಕೇತ ವಾಗಿ ಪೂಜಿಸುತ್ತೇವೆ. ಹನುಮಂತ ಸಸ್ಯಾ ಹಾರಿ, ಆದರೂ ಬಲಾಢ್ಯ ಎಂದು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಹನುಮಂತನ ಜನ್ಮ ಸ್ಥಾನವಾದ ಕಿಷ್ಕಿಂದಾ (ಈಗಿನ ಹಂಪಿ) ದಲ್ಲೇ ಅವರ ಬಗ್ಗೆ ಅವಹೇಳನ ಸರಿಯೇ..? ಹನುಮಂತನಿಗೆ ಈ ರೀತಿಯಲ್ಲಿ ಅಗೌರವ ಸೂಚಿಸುವುದು ಸರಿ ಅಲ್ಲ, ಈ ನಿಮ್ಮ ನಡೆ ಸರಿಯೇ ಎಂದು ನಿಮ್ಮಲ್ಲೇ ಕೇಳಿಕೊಳ್ಳಿ! ಎಂದು ಮಾತಿನ ಛಾಟಿ ಬೀಸಿದ್ದಾರೆ.