ಇಂದು-ನಾಳೆ ನೀರು ವ್ಯತ್ಯಯ

ಮೈಸೂರು, ಜು.5- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಯಂತ್ರಾಗಾರದಲ್ಲಿ ದುರಸ್ತಿ ಇರುವುದರಿಂದ ಜು.6 ಮತ್ತು 7ರಂದು ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ, ಎಬಿಸಿ ಲೇಔಟ್, ವೀರನಗೆರೆ, ಸಿದ್ದಿಖಿ ನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ, ನಜರಬಾದ್, ವಿದ್ಯಾರಣ್ಯಪುರಂ, ವಿಶ್ವೇಶ್ವರ ನಗರ, ಚಾಮುಂಡಿಪುರಂ, ಲೂರ್ದ್ ನಗರ, ಮೀನಾ ಬಜಾರ್, ಮೇಟಗಳ್ಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, 18, 19, 23ರಿಂದ 27, 40, 41, 55, 60, 61 ಹಾಗೂ 62ನೇ ವಾರ್ಡ್ ಮೊದಲಾದ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.