ರಥಕ್ಕೆ ಸಿಲುಕಿ ಇಬ್ಬರು ಸಾವು

ಓರ್ವನಿಗೆ ಗಾಯ; ಗುಂಡ್ಲುಪೇಟೆಯ ಕಂದೇಗಾಲದ ಪಾರ್ವತಾಂಬ ರಥೋತ್ಸವದಲ್ಲಿ ದುರ್ಘಟನೆ
ಗುಂಡ್ಲುಪೇಟೆ, ಮೇ ೧೫(ಸೋಮ್ ಜಿ.)- ಎರಡು ವರ್ಷಗಳ ಬಳಿಕ ನಡೆದ ಪಾರ್ವ ತಾಂಬ ರಥೋತ್ಸವದಲ್ಲಿ ರಥದ ಚಕ್ರ ಹರಿದು ಇಬ್ಬರು ಸಾವನ್ನಪ್ಪಿ, ಓರ್ವ ಗಾಯಗೊಂಡ ದುರಂತ ನಡೆದಿದೆ. ಕಂದೇಗಾಲ ಗ್ರಾಮದ ಬಸವಣ್ಣ ಅವರ ಪುತ್ರ ಸರ್ಪ ಭೂಷಣ್ (೨೫), ಕಬ್ಬಹಳ್ಳಿ ಗ್ರಾಮದ ಸ್ವಾಮಿ (೩೫) ಮೃತಪಟ್ಟ ವರು. ಕೊಡಸೋಗೆ ಗ್ರಾಮದ ಕರಿನಾಯಕ (೪೫) ಗಂಭೀರವಾಗಿ ಗಾಯಗೊಂಡಿದ್ದು, ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಥೋತ್ಸವ ಆರಂಭವಾದ ಬಳಿಕ ಜನಸಂದಣ ಹೆಚ್ಚಾಗಿ ನೂಕುನುಗ್ಗಲು ಉಂಟಾದ ಪರಿಣಾಮ ರಥದ ಮುಂಭಾಗವಿದ್ದ ಸರ್ಪಭೂಷಣ್, ಕರಿನಾಯಕ ಹಾಗೂ ಸ್ವಾಮಿ ರಥದ ಚಕ್ರಕ್ಕೆ ಸಿಲುಕಿದ್ದಾರೆ. ಪರಿ ಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಗುಂಡ್ಲುಪೇಟೆ ಪಟ್ಟ ಣದ ಸಾರ್ವಜನಿಕ ಆಸ್ಪತ್ರೆಗೆ ದಾಖ ಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸರ್ಪ ಭೂಷಣ್ ಸಾವನ್ನಪ್ಪಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸ್ವಾಮಿ ಅವರು ಕೂಡ ಭಾನುವಾರ ಸಂಜೆ ಸಾವ ನ್ನಪ್ಪಿದ್ದಾರೆ. ಉಳಿದ ಕರಿನಾಯಕ ಅವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಶಾಸಕರು, ಮುಖಂಡರ ಭೇಟಿ: ವಿಷಯ ತಿಳಿದು ಆಸ್ಪತ್ರೆಗೆ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.