ಚಾ.ನಗರ ಆಕ್ಸಿಜನ್ ದುರಂತ: ಸರ್ಕಾರವೇ ಮಾಡಿದ ಕೊಲೆ

ಚಾಮರಾಜನಗರ,ಜೂ.27(ಎಸ್‍ಎಸ್) – ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 36 ಮಂದಿ ಅಮಾಯಕರು ಸಾವನ್ನಪ್ಪಿದ್ದು, ಆಕ್ಸಿಜನ್ ಕೊರತೆಯಿಂದಲ್ಲ, ಇದು ಸರ್ಕಾರವೇ ಮಾಡಿದ ಕೊಲೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಮೇಲೆ ಐಪಿಸಿ 302ರಡಿ ಪ್ರಕರಣ ದಾಖ ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದು 57ದಿನ ಕಳೆ ದರೂ ಯಾವ ಅಧಿಕಾರಿಗಳ ಮೇಲೂ ಇನ್ನೂ ಕ್ರಮಕೈಗೊಂಡಿಲ್ಲ. ಈ ಸರ್ಕಾರ ಅಧಿಕಾರಿಗಳ ಪರ ನಿಂತಿದೆಯೇ ವಿನಾ ಜನರ ಪರ ನಿಂತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಇದು ಸರ್ಕಾ ರವೇ ಮಾಡಿದ ಕೊಲೆ. ಸಚಿವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದರು.

ಬೆಂಗಳೂರಿನಲ್ಲಿ ಕುಳಿತ ಸಚಿವರಿಗೆ ಎಲ್ಲ ದರಲ್ಲೂ ಪಾಲುಬೇಕು. ಆದರೆ, ನೊಂದ ಜನರ ಕಷ್ಟ ಕೇಳಲು ಇವರಿಗೆ ಜವಾಬ್ದಾರಿ ಬೇಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಆರೋಗ್ಯ ಸಚಿವರಾಗಲೀ, ಆಕ್ಸಿಜನ್ ಕೊರತೆ ಯಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಲಿಲ್ಲ. ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಲಿಲ್ಲ. ಕೊನೆ ಪಕ್ಷ ನೊಂದ ಕುಟುಂಬಗಳನ್ನು ಒಂದೆಡೆ ಸೇರಿಸಿ, ಅವ ರೊಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ಸಾಂತ್ವನ ಹೇಳÀಲಿಲ್ಲ. ಹಾಗಾಗಿ ವಿರೋಧ ಪಕ್ಷದಲ್ಲಿದ್ದರೂ ನಾವು ದುರಂತ ದಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿ ದ್ದೇವೆ. ಸಹಾಯ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಕೋವಿಡ್‍ನಿಂದ ಉದ್ಯೋಗ, ಪ್ರಾಣ ಕಳೆದುಕೊಂಡವರನ್ನು ಕಾಂಗ್ರೆಸ್ ಪಕ್ಷ ಭೇಟಿ ಮಾಡುತ್ತಿದೆ. ನಮ್ಮ ಮುಖಂ ಡರು, ಕಾರ್ಯಕರ್ತರು ಕೋವಿಡ್ ಸಂತ್ರಸ್ತ ರನ್ನು ಭೇಟಿ ಮಾಡಿ ‘ಸಹಾಯ ಹಸ್ತ’ ಎಂಬ ಹೆಸರಿನಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು. ದುರಂತ ದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೇನೆ. ಅವರ ನೋವವನ್ನು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಮುಡಿಗುಂಡದ ಒಬ್ಬ ಹೆಣ್ಣು ಮಗಳಿಗೆ, ಇನ್ನೂ ಪತಿಯ ಡೆತ್ ಸರ್ಟಿಫಿಕೇಟ್ ನೀಡಿಲ್ಲ. ಪರಿಹಾರ ನೀಡಿಲ್ಲ. ಇಬ್ಬರು ಚಿಕ್ಕ ಮಕ್ಕಳು, ದಿನಾ ಅಲೆಯುತ್ತಿದ್ದಾರೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರ ನೀಡಲು, ಪರಿಹಾರ ನೀಡಲು ನಿಮಗೆ ಏನು ಬಂದಿದೆ? ಯಾಕ್ರಿ ಇರಬೇಕು ಈ ಸರ್ಕಾರ? ಈ ಕುರಿತು 3-4 ವಿಡಿಯೋಗಳನ್ನು ಸಿಎಂ ಅವರಿಗೆ ಟ್ಯಾಗ್ ಮಾಡುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಇಂದು 36 ಜನರ ಕುಟುಂಬವನ್ನೂ ಭೇಟಿ ಮಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸಂಗ್ರಹಿಸಿದ ಹಣದಿಂದ, ತಲಾ 1 ಲಕ್ಷ ರೂ. ಪರಿಹಾರ ನೀಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಧರ್ಮಸೇನ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮರಿಸ್ವಾಮಿ, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.