ಮೇ 28 ರವರೆಗೆ 18 ರಿಂದ 44 ವರ್ಷ ವಯೋಮಾನದ ವಿಕಲಚೇತನರು, ಪೆÇೀಷಕರಿಗೆ ಲಸಿಕೆ

ಮೈಸೂರು, ಮೇ 26- ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಸರ್ಕಾರವು ಈಗಾಗಲೇ 18 ವರ್ಷ ವಯಸ್ಸಿಗೆ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದು, ಮೇ 25 ರಿಂದ 28ರವರೆಗೆ 18 ರಿಂದ 44 ವರ್ಷ ವಯೋಮಾನದ ವಿಕಲಚೇತನರಿಗೆ ಹಾಗೂ ಪೆÇೀಷಕರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನ ತಿಲಕ ನಗರದಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ18 ರಿಂದ 44 ವರ್ಷ ವಯೋಮಾನದ ವಿಕಲಚೇತನ ರಿಗೆ ಹಾಗೂ ಪೆÇೀಷಕರಿಗೆ ಮತ್ತು 44 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೈಸೂರಿನ ಕೆ.ಆರ್.ಎಸ್ ರಸ್ತೆ ಮೇಟಗಳ್ಳಿಯಲ್ಲಿರುವ ಚರಕ ಆಸ್ಪತ್ರೆ ಹಾಗೂ ಕೆ.ಆರ್.ಎಸ್. ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲಾಗು ವುದು. ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಉಚಿತವಾಗಿ ಲಸಿಕೆ ಪಡೆಯಬಹುದು ಎಂದು ತಿಳಿಸಿದರು.