ಜಿಲ್ಲೆಯ ವಿವಿಧೆಡೆ ಶ್ರದ್ಧಾ, ಭಕ್ತಿಯಿಂದ ವಾಲ್ಮೀಕಿ ಜಯಂತಿ ಆಚರಣೆ

ಮಂಡ್ಯ: ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಭಾರತೀನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಶ್ರದ್ಧಾ-ಭಕ್ತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಯನ್ನು ಆಚರಿಸಲಾಯಿತು.

ಮಂಡ್ಯ ವರದಿ: ಮಂಡ್ಯ ಲೋಕಸಭಾ ಉಪ ಚುನಾವಣೆ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮವನ್ನು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.

ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಿಸಲಾದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ, ಜಿಲ್ಲಾಧಿಕಾರಿ ಎನ್. ಮಂಜುಶ್ರೀ, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಪುಷ್ಪಾ ರ್ಚನೆ ಮಾಡುವ ಮೂಲಕ ಗೌರವ ಸಮ ರ್ಪಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ವಿವಿಧ ಸಂಘ ಸಂಸ್ಥೆಗಳ ಮುಖಂಡ ರುಗಳು, ಅಧಿಕಾರಿಗಳು ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.

ಮದ್ದೂರು ವರದಿ: ಪಟ್ಟಣದ ಪುರಸಭೆ ಕಚೇರಿ ಹಾಗೂ ತಾಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸ ಲಾಯಿತು. ಪುರಸಭಾ ಮುಖ್ಯಾ ಧಿಕಾರಿ ಮಹೇಶ್ ಅವರು ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಧಿಕಾರಿ ಗಳಾದ ಚಂದ್ರಶೇಖರ್, ವೆಂಕಟೇಶ್, ಮಖಂಡ ಮರಿದೇವರು ಹಾಜರಿದ್ದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬಿಇಓ ರೇಣುಕಮ್ಮ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜೆ. ಮಹೇಶ್ ವಹಿಸಿದ್ದರು. ಮುಖ್ಯಾಧಿಕಾರಿ ಮಹೇಶ್, ಸಮಾಜ ಕಲ್ಯಾಣಾಧಿüಕಾರಿ ಮಂಜುಳಮ್ಮ, ಸಿಪಿಐ ಮಹೇಶ್ ಹಾಜರಿದ್ದರು.

ಕೆ.ಆರ್.ಪೇಟೆ ವರದಿ: ಪಟ್ಟಣದ ಅಗ್ರಹಾರ ಬಡಾವಣೆಯ ಶ್ರೀರಾಮ ಮಂದಿರದ ಆವರಣದಲ್ಲಿ ಶ್ರೀ ಗಂಗಾಪರಮೇಶ್ವರಿ ಯುವಕರ ಸಂಘ ಹಾಗೂ ವಾಲ್ಮೀಕಿ ನಾಯಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅನ್ನದಾನ, ವಿಶೇಷ ಪೂಜೆ ಮತ್ತಿತರರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಾಯಕ ಸಮಾಜದ ಯಜಮಾನ್ ನರಸಿಂಹಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜವರಯ್ಯ, ಕೆ.ಕೆ.ಕೃಷ್ಣ, ಹಣ್ಣಿನ ಅಂಗಡಿ ರಾಮಣ್ಣ, ಕೃಷ್ಣ, ಅರ್ಚಕ ತಿರುಪತಿ, ರವಿಕುಮಾರ್, ಚೆಲುವಣ್ಣ, ಅಶ್ವತ್ ನಾರಾ ಯಣ್, ಅಂಗಡಿ ತಮ್ಮಯ್ಯ, ರಮೇಶ್, ಶ್ರೀನಿವಾಸ್, ಗ್ಯಾಸ್ ತಮ್ಮಯ್ಯ, ಪುರಸಭೆ ಯ ಮಾಜಿ ಸದಸ್ಯ ರಾಜಾನಾಯಕ್, ಮುತ್ತು ರಾಜ್, ಬಿಜೆಪಿ ಜಗದೀಶ್, ಕೆ.ಎನ್. ಕುಮಾರ್, ಕೆಎಸ್‍ಆರ್‍ಟಿಸಿ ಶಿವಣ್ಣ ಇದ್ದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ತಾಲೂಕು ಕಚೇರಿ: ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತವು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್ ಹೆಚ್. ಶಿವಪ್ಪ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ರಾಮ ದಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ತಾಪಂ ಕಾರ್ಯನಿರ್ವ ಣಾಧಿಕಾರಿ ಚಂದ್ರ ಮೌಳಿ, ತಾಪಂ ಉಪಾಧ್ಯಕ್ಷ ಜಾನಕೀರಾಂ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ರಾಜಾ ನಾಯಕ್, ಗೌರವಾಧ್ಯಕ್ಷ ಪೂವನ ಹಳ್ಳಿ ರೇವಣ್ಣ, ಕಾರ್ಯದರ್ಶಿ ಜಿ.ಪಿ. ರಾಜು, ಮಾಜಿ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಮುಖಂಡರಾದ ಕೆ.ಕೆ.ಕೃಷ್ಣ, ಜವರಯ್ಯ, ಕೆ.ಜೆ.ಯತೀಶ್, ಉಪತಹಶೀಲ್ದಾರ್ ಲಕ್ಷ್ಮೀ ಕಾಂತ್, ಚಂದ್ರಕಲಾ ಪ್ರಕಾಶ್ ಹಾಜರಿದ್ದರು.

ಭಾರತೀನಗರ ವರದಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಾಲ್ಮಿಕಿ ಮಹರ್ಷಿ ಜಯಂತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ರಾಜೇಶ್ವರಿ ಉದ್ಘಾಟಿಸಿದರು. ಇದೇ ವೇಳೆ ಪಂಚಾಯಿತಿ ಸಿಬ್ಬಂದಿಗಳಾದ ಲೋಕೇಶ್, ನಿಂಗಯ್ಯ, ಅನಿತಾ, ಆಶಾ, ಪ್ರಸಾದ್, ಪುಟ್ಟೇಗೌಡ, ಕೃಷ್ಣ ಇತರರಿದ್ದರು.