ವಿದ್ವತ್ ಮೇಲಿನ ಹಲ್ಲೆ ಪ್ರಕರಣ

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲ ಪಾಡ್ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ನ್ಯಾಯಾಲಯ ಬುಧವಾರ ಎರಡನೇ ಬಾರಿ ವಜಾಗೊಳಿಸಿದೆ. ಇದೊಂದು ಕೊಲೆ ಯತ್ನ ಪ್ರಕರಣವಾಗಿದ್ದು, ಬೆಂಗಳೂರಿನ ಲ್ಲಿಯೇ ಭೀತಿ ಹುಟ್ಟಿಸುವ ಘಟನೆಯಾ ಗಿತ್ತು. ಆರೋಪಿ ಪ್ರಭಾವಿ ವ್ಯಕ್ತಿಯಾಗಿರು ವುದರಿಂದ ಹೊರಬಂದರೆ ಸಾಕ್ಷಿಗಳನ್ನು ನಾಶಪಡಿಸುವ, ಸಾಕ್ಷಿಗಳಿಗೆ ಬೆದರಿಕೆಯೊ ಡ್ಡುವ ಸಾಧ್ಯತೆ ಇರುವುದರಿಂದ ಮತ್ತು ವೈದ್ಯಕೀಯ ವರದಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ನಲಪಾಡ್‍ಗೆ ಜಾಮೀನು ನೀಡಲು ನಿರಾಕರಿಸಿ ನ್ಯಾಯಾ ಧೀಶ ಬಿ.ಪರಮೇಶ್ವರ್ ಪ್ರಸನ್ನ ಆದೇಶ ನೀಡಿದ್ದಾರೆ. ಆರೋಪಿ ಪ್ರಭಾವಿಯಾ ಗಿದ್ದು, ಹೊರ ಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಾದ ಮಂಡನೆ ಮಾಡಲಾಗಿತ್ತು.