ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ

ಭಾರತೀನಗರ, ಅ.26(ಅ.ಸತೀಶ್)-ನವರಾತ್ರಿ ಹಿನ್ನಲೆಯಲ್ಲಿ ಇಲ್ಲಿನ ಚಾಂಷು ಗರ್ ಕಾರ್ಖಾನೆ ಆವರಣದಲ್ಲಿ ರುವ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು. ದೇವಿಗೆ ವಿಶೇಷ ಅಲಂಕಾರ ಮಾಡಿ ಮುಂಜಾನೆ ಯಿಂದ ರಾತ್ರಿವರೆಗೆ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು. ದೇವಾಲಯ ಮಂಟಪ ದಲ್ಲಿ ವಿವಿಧ ಬಗೆಯ ಬೊಂಬೆಗಳನ್ನು ಕೂರಿಸಿ ವಿಶೇಷ ಪೂಜೆ ನಡೆಸಲಾಯಿತು.

ಪ್ರತೀದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಅಭಿಷೇಕ, 9 ರೀತಿಯ ಅಲಂಕಾರ, ಸುಹಾಸಿನಿಯ ರಿಂದ ಪ್ರತೀದಿನ ಸಂಜೆ 6 ರಿಂದ 7 ರವರೆವಿಗೂ ಲಲಿತ ಸಹಸ್ರನಾಮ, ಹರಿದ್ರ ಕುಂಕುಮಾರ್ಚನೆ ನೆರ ವೇರಿತು. ಇದಲ್ಲದೆ ದೇವಾಲಯ ಆವರಣ ದಲ್ಲಿರುವ ಗಣಪ, ನವಗ್ರಹ, ಆಂಜನೇಯ, ಕಾಲ ಭೈರವೇಶ್ವರ, ವಾಸುಕಿ, ನಾಗರಾಜ ದೇವರು ಗಳಿಗೂ ಪೂಜೆ ಸಲ್ಲಿಸಲಾಯಿತು. ನಂತರ ಕಾರ್ಖಾ ನೆಯ ಉಪಾಧ್ಯಕ್ಷ ಮಣಿ ಮಾತನಾಡಿ, ನವರಾತ್ರಿ ಪ್ರತೀ ದಿನ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ತಾಯಿ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆಯದ ನ್ನುಂಟುಮಾಡಲಿ ಎಂದು ಹಾರೈಸಿದರು.