ಕಳಪೆ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಸಂತೆಮರಹಳ್ಳಿ: ಸಮೀಪದ ಕುದೇರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣವಾಗು ತ್ತಿರುವ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟ ದಿಂದ ಕೂಡಿದೆ ಎಂದು ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

2016-17ನೇ ಸಾಲಿನ ಗ್ರಾಮ ರಸ್ತೆ ಅಭಿ ವೃದ್ಧಿ ಯೋಜನೆಯಡಿಯಲ್ಲಿ 1.1. ಕಿ.ಮೀ ರಸ್ತೆ ಯನು 1.5 ಕೋಟಿ ರೂ. ವೆಚ್ಚದಲ್ಲಿ ಲೋಕೋ ಪಯೋಗಿ ಇಲಾಖೆಯ ವತಿಯಿಂದ ಕಾಮ ಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಮುಗಿ ಸಲು 6 ತಿಂಗಳ ಅವಧಿ ಇದೆ.

ಆದರೆ 9 ತಿಂಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಧೂಳಿ ನಿಂದ, ಹಳ್ಳಕೊಳ್ಳದಿಂದ ಪರಿತಪಿಸುವ ಸ್ಥಿತಿ ಇದೆ. ಆದರೆ ರಸ್ತೆಗೆ ಹಾಕಲಾಗುತ್ತಿ ರುವ ಟಾರು ಮತ್ತು ಜಲ್ಲಿಯ ಪ್ರಮಾಣ ಕಡಿಮೆ ಇದೆ. ಕೆಲವು ಕಡೆ ಹಾಕಿರುವ ಟಾರು ಈಗಾಗಲೇ ಕಿತ್ತು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗ ಳಿಗೆ ದೂರು ನೀಡಿದ್ದರೂ ಇದುವರೆವಿಗೂ ಕ್ರಮ ವಹಿಸಿಲ್ಲ. ಈ ರಸ್ತೆ ದುರಸ್ತಿ ಮಾಡ ಬೇಕು ಎಂಬ ಈ ಭಾಗದ ಜನರ ಮನವಿ ಯನ್ನು ಪರಿಗಣಿಸಿ ಕೆಲಸ ಆರಂಭಗೊಂಡಿ ದ್ದರೂ ಕಳಪೆ ಗುಣಮಟ್ಟದಿಂದ ಕೂಡಿರು ವುದು ಸರ್ಕಾರಿ ಹಣದ ದುರುಪಯೋಗ ವಾಗಿದೆ ಎಂದು ಆರೋಪಿಸಿ ಕುದೇರು ಗ್ರಾಮದ ಸರ್ಕಲ್‍ನಲ್ಲಿ ರಸ್ತೆ ತಡೆ ನಡೆಸಿ ಅಧಿಕಾರಿಗಳು ಹಾಗೂ ಇಲಾಖೆಯ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಇದರಿಂದ ಕೆಲ ಕಾಲ ನಂಜನಗೂಡು ಸಂತೆಮರಹಳ್ಳಿ ರಸ್ತೆ ಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಗ್ರಾಪಂ ಅಧ್ಯಕ್ಷೆ ನಾಗರಾಜಮ್ಮ, ಸದಸ್ಯರಾದ ಮಹದೇವೇಗೌಡ, ಸುಂದರಶೆಟ್ಟಿ, ಜಯ ಶಂಕರ್ ಗ್ರಾಮಸ್ಥರಾದ ಶಿವಕುಮಾರ, ರಾಜೇಂದ್ರಸ್ವಾಮಿ, ಕುದೇರು ಲಿಂಗಣ್ಣ, ಅಶೋಕ್ ಮಹಾದೇವಯ್ಯ, ಮಧು, ರಾಮಣ್ಣ, ಕೆ.ಬಿ. ಹರೀಶ್, ರೇವಣ್ಣ, ನೀಲಿಸಿದ್ದಶೆಟ್ಟಿ, ರಾಜು, ಸುಂದರ್ ಇತರರು ಇದ್ದರು.