ಲಾಕ್‍ಡೌನ್ ನಂತರ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು

ಜಿನೀವಾ,ಏ.26-ಲಾಕ್‍ಡೌನ್ ತೆರವು ಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ.

ಕೊರೊನಾ ವೈರಸ್‍ನ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂಶೋಧಕರು ನೀಡಿರುವ ಸಲಹೆಯನ್ನಾಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ಈ ಮಾರ್ಗಸೂಚಿ ಯನ್ನು ಕಳಿಸಿದೆ. ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಂತೆಲ್ಲಾ ಈ ಮಾರ್ಗ ಸೂಚಿಗಳು ಬದಲಾವಣೆಯಾಗಲಿವೆ ಎಂದು ವಿಶ್ವ ಸಂಸ್ಥೆ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ. ಕೊರೊನಾ ವೈರಸ್ ಸೋಂಕು ತಗುಲಿದರೆ ಅದು ಮರುಕಳಿ ಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ ಕಾರಣ ಕೊರೊನಾ ವೈರಸ್‍ನಿಂದ ಗುಣಮುಖರಾದವರಿಗೆ ಯಾವುದೇ ಕಾರ ಣಕ್ಕೂ ಇಮ್ಯುನಿಟಿ ಪಾಸ್ಪೋರ್ಟ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ನೀಡು ವುದು ಸದ್ಯದ ಪರಿಸ್ಥಿತಿಯಲ್ಲಿ ಅಪಾಯ ಕಾರಿ ಎಂದು ಎಲ್ಲಾ ದೇಶದ ಸರ್ಕಾರ ಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.