ಜ.1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ

ಮೈಸೂರು,ಡಿ.30(ಪಿಎಂ)- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಸಮಿತಿ ಸಂಯು ಕ್ತಾಶ್ರಯದಲ್ಲಿ 2021ರ ಜ.1ರಂದು ಮೈಸೂ ರಿನ ಕಲಾಮಂದಿರದಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಸಮಿತಿ ಸದಸ್ಯ ವೆಂಕಟೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಿನಾಚರಣೆ ಉದ್ಘಾಟಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಡಾ. ಯತೀಂದ್ರ ಸಿದ್ದರಾಮಯ್ಯ, ಮೇಯರ್ ತಸ್ನೀಂ ಸೇರಿ ದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಅಮರಶಿಲ್ಪಿ ವೇದಿಕೆಯ ನಾಗ ರಾಜ್ ಮಾತನಾಡಿ, ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ಬಂಗಾರ ಆಚಾರ್, ಚನ್ನಪ್ಪಚಾರ್, ಯೋಗಿರಾಜ್, ಶ್ರೀಕಂಠಚಾರ್, ಜನಾರ್ಧನಚಾರ್ ಅವರನ್ನು ಸನ್ಮಾನಿಸಲಾಗುವುದು. ಸರ್ಕಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದೇ ಪ್ರಥಮ ಬಾರಿಗೆ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಯವರ ಸಂಸ್ಮರಣಾ ದಿನಾಚರಣೆ ಆಚರಿ ಸಲು ಅವಕಾಶ ಕಲ್ಪಿಸಿದೆ. ಮೈಸೂರಿನ ದಿನಾಚರಣೆ ಸಂಬಂಧ ಸರ್ಕಾರದಿಂದ 3 ಸಾವಿರ ರೂ. ಅನುದಾನ ಬಿಡುಗಡೆ ಆಗಿ ರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿ ದ್ದಾರೆ. ಉಳಿದ ವೆಚ್ಚವನ್ನು ಸಮುದಾಯದ ಮುಖಂಡರು ಭರಿಸುತ್ತಿದ್ದೇವೆ ಎಂದರು. ಸಮುದಾಯದ ಮುಖಂಡರಾದ ಹೆಚ್. ಎಸ್.ರಾಚಪ್ಪಾಚಾರಿ, ಆರ್.ಸಿದ್ದಪ್ಪಾಜಿ, ಶಾಂತಮ್ಮ, ಸುರೇಶ್ ಗೋಲ್ಡ್ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.