ಇಂದಿನಿಂದ ಒಂಟಿಕೊಪ್ಪಲ್ ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

ಮೈಸೂರು, ಜೂ.7(ಎಂಟಿವೈ)- ಮೈಸೂರಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಒಂಟಿಕೊಪ್ಪ ಲಿನ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಾಳೆ (ಜೂ.8)ಯಿಂದ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದ್ದು, ಕೆಲವು ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾ.24ರಿಂದ ಮುಚ್ಚಲ್ಪ ಟ್ಟಿದ್ದ ದೇವಾಲಯ, ಚರ್ಚ್, ಪ್ರಾರ್ಥನಾ ಮಂದಿರ ಗಳನ್ನು ತೆರೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಯಲ್ಲಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ಒಂಟಿಕೊಪ್ಪಲಿನ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ದಲ್ಲಿ ಸುರಕ್ಷತಾ ಕ್ರಮಗಳ ಸಿದ್ಧತೆ ಪೂರ್ಣಗೊಳಿಸ ಲಾಯಿತು. ಭಕ್ತರು ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಬಾಕ್ಸ್ ಗುರುತು ಮಾಡಲಾಗಿದೆ. ಅಲ್ಲದೆ ದೇವಾಲಯದ ಟ್ರಸ್ಟ್‍ನ ಪದಾಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿರುವುದನ್ನು ಪರಿಶೀಲಿಸಿದರು.

ಇದೇ ವೇಳೆ ಶ್ರೀ ಲಕ್ಷ್ಮೀವೆಂಕಟೇಶ್ವರ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಮೋಹನ್‍ಕುಮಾರ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಸೋಮವಾರದಿಂದ ಶ್ರೀ ಲಕ್ಷ್ಮೀವೆಂಕ ಟೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಆಗಮಿಸಬಹು ದಾಗಿದೆ. ಭಕ್ತರು ದೇವರ ದರ್ಶನ ಪಡೆಯಲು ಕೋವಿಡ್ ಮಾರ್ಗಸೂಚಿಯಲ್ಲಿ ವಿಧಿಸಿರುವ ನಿಯಮವನ್ನು ಕಡ್ಡಾಯ ವಾಗಿ ಪಾಲಿಸಬೇಕು. ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12.30ರವರೆಗೆ ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ಭಕ್ತರು ದೇವಾಲಯಕ್ಕೆ ಆಗಮಿಸಬಹುದಾಗಿದೆ. ದೇವಾ ಲಯದ 45 ಸಿಬ್ಬಂದಿ ಸೇರಿದಂತೆ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ದೇವಾಲಯದ ಬಾಗಿಲಲ್ಲೇ ಪೆಡೆಲಿಂಗ್ ಸ್ಯಾನಿಟೈ ಸೇಷನ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವÀ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ದೇವಾ ಲಯದಲ್ಲಿ ಭಕ್ತರಿಗೆ ತೀರ್ಥ, ಪ್ರಸಾದ ನೀಡುವುದಿಲ್ಲ. ಅರ್ಚನೆ, ಉತ್ಸವಕ್ಕೂ ಅವಕಾಶವಿಲ್ಲ. ಆದರೆ ಅಷ್ಟೋತ್ತರ ಮಾಡಿಸಿಕೊಳ್ಳಬಹುದು. ದರ್ಶನ ಪಡೆದ ನಂತರ ದೇವಾ ಲಯದಲ್ಲಿ ಆವರಣದಲ್ಲಿ ಕೂರುವುದಕ್ಕೆ ಅವಕಾಶ ನೀಡು ವುದಿಲ್ಲ. ಭಕ್ತರು ತಮ್ಮ ವಾಹನದಲ್ಲೇ ಚಪ್ಪಲಿ ಬಿಟ್ಟು ಬರುವಂತೆ ಸೂಚಿಸಲಾಗುತ್ತದೆ. ವಾಹನವಿಲ್ಲದೆ ಕಾಲ್ನ ಡಿಗೆಯಲ್ಲಿ ಬರುವ ಭಕ್ತರು ದೇವಾಲಯದ ಹೊರ ಭಾಗದ ಮೂಲೆಯಲ್ಲಿ ಪಾದರಕ್ಷೆ ಬಿಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ದೇವಾ ಲಯದ ಟ್ರಸ್ಟ್ ಉಪಾಧ್ಯಕ್ಷ ಬಿ.ವಿ.ರಾಮಾನುಜ, ಟ್ರಸ್ಟಿ ಗಳಾದ ಪ್ರೊ. ಸತ್ಯನಾರಾಯಣ್, ರಾಮಕೃಷ್ಣ, ಪುಟ್ಟ ಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.