ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ

ಮೈಸೂರು: ಕಡ್ಡಾಯ ಮತದಾನ ಮಾಡುವ ಕುರಿತು ಯುವಕರು ಸ್ಕೇಟಿಂಗ್ ಮೂಲಕ ಮೈಸೂರಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. ಮತದಾನ ಜಾಗೃತಿ ಕುರಿತ ಟೀ ಶರ್ಟ್ ಹಾಗೂ ಸ್ಕೇಟಿಂಗ್ ತೊಟ್ಟ ಯುವಕರು, ಸಿದ್ದಾರ್ಥ ಬಡಾವಣೆ, ನಜರ್‍ಬಾದ್, ಪುರಭವನ, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಸ್ಕೂಲ್, ಜಿಲ್ಲಾಧಿಕಾರಿ ಕಚೇರಿ, ಶಿವರಾಂಪೇಟೆ, ಡೈರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಕೇಟಿಂಗ್ ನಡೆಸಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಮತದಾನ ನಮ್ಮ ಹಕ್ಕು. ಹಾಗಾಗಿ ನಮ್ಮ ತಂಡದಿಂದ ಪ್ರತಿಯೊಬ್ಬರೂ ತಪ್ಪದೇ ಮತ ದಾನ ಮಾಡುವಂತೆ ಮನವಿ ಮಾಡು ತ್ತಿದ್ದೇವೆ. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.

ಸ್ಕೇಟಿಂಗ್ ಮೂಲಕ ಪ್ರತಾಪ್, ಸಂದೇಶ್, ಅಂಜನ್, ಅರವಿಂದ್, ಸಂಜಯ್ ಮತ ದಾನ ಜಾಗೃತಿ ಮೂಡಿಸಿದರು.