ಮಹಿಳಾ ಸಬಲೀಕರಣಕ್ಕೆ ವಾಕಥಾನ್ ನಡೆಸಿದ ಮಹಿಳಾ ಸಮೂಹ

ಮೈಸೂರು: ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿ ಸಲು ಧಾನ್ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ ನಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

ಮೈಸೂರು ಅರಮನೆಯ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರು ಹೆಚ್ಚು ವರಿ ಪೆÇಲೀಸ್ ವರಿಷ್ಠಾಧಿಕಾರಿ ಸ್ನೇಹಾ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಫೌಂಡೇಷನ್ ವತಿಯಿಂದಲೇ ಸಂಘಟಿಸಿ ರುವ ವಿವಿಧ ಮಹಿಳಾ ಸಂಘಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮಹಿಳಾ ಸಬಲೀಕರಣದ ಮಹತ್ವ ಸಾರಿದರು.

ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನ ಎದುರಿನಿಂದ ಪ್ರಾರಂಭಗೊಂಡ ವಾಕಥಾನ್ ಚಾಮರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ವೃತ್ತ, ಗಾಂಧಿಚೌಕ, ಸಯ್ಯಾಜಿರಾವ್ ರಸ್ತೆ, ಚಿಕ್ಕ ಗಡಿಯಾರ ವೃತ್ತ ಮೂಲಕ ದೇವರಾಜ ಅರಸು ರಸ್ತೆ ಯಲ್ಲಿ ಮುನ್ನಡೆಯಿತು. ಬಳಿಕ ಜಿ¯್ಲÁಧಿ ಕಾರಿ ಕಚೇರಿ ಮಾರ್ಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮೈಸೂರು ನಗರ, ನಂಜನ ಗೂಡು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಬನ್ನೂರು, ಕೊಳ್ಳೇಗಾಲ, ಮಳವಳ್ಳಿಯ ಸ್ವ-ಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮವನ್ನು ಸಿಂಡಿಕೇಟ್ ಬ್ಯಾಂಕಿನ ಮೈಸೂರು ವಲಯ ವ್ಯವಸ್ಥಾಪಕ ಸುರೇಶ್ ಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್ ಗಂಗಾ ಧರ್, ಭಾರತೀಯ ಜೀವ ವಿಮಾ ನಿಗಮ ಮೈಸೂರು ವಲಯದ ಬಾಲಾಜಿ ಸೇರಿ ದಂತೆ ಮತ್ತಿತರ ಗಣ್ಯರು ಉದ್ಘಾಟಿಸಿದರು.

ಧಾನ್ ಫೌಂಡೇಷನ್‍ನ ವಲಯಾಧಿಕಾರಿ ಶಂಕರ್ ಪ್ರಸಾದ್ ಮಾತನಾಡಿ, ಧಾನ್ ಫೌಂಡೇ ಷನ್ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ 14 ರಾಜ್ಯ ಗಳಲ್ಲಿ ಬಡತನ ನಿರ್ಮೂಲನೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸು ತ್ತಿದೆ. ಸಂಸ್ಥೆಯು ದೇಶದಾದ್ಯಂತ 1 ಲಕ್ಷ ಕ್ಕಿಂತ ಹೆಚ್ಚು ಮಹಿಳಾ ಸ್ವ-ಸಹಾಯಗಳನ್ನು ಸಂಘಟಿಸಿದೆ ಎಂದರು. ಧಾನ್ ಫೌಂಡೇ ಷನ್‍ನ ಸಿ.ಕೃಷ್ಣ, ನಾರಾಯಣ ಹೆಗ್ಡೆ, ಮಂಜು ನಾಥ ಹುಸೇನ್, ಪ್ರಭುಶಂಕರ, ಭಾಗ್ಯ, ಗೋವರ್ಧನ್ ಮತ್ತಿತರರು ಹಾಜರಿದ್ದರು.