ಹುತ್ತೂರು ಕೆರೆಗೆ ನೀರು ತುಂಬಿಸುವ ಕಾಮಗಾರಿ ಪರಶೀಲನೆ

ಗುಂಡ್ಲುಪೇಟೆ: ತಾಲೂಕಿನ ಹುತ್ತೂರು ಕೆರೆಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಭೇಟಿ ನೀಡಿ ಕೆರೆ ಗಳಿಗೆ ನದಿ ಮೂಲದಿಂದ ನೀರು ತುಂಬಿ ಸುವ ಕಾಮಗಾರಿಯನ್ನು ಪರಿಶೀಲಿಸಿದರು.

ತಾಲೂಕಿನ ಹುತ್ತೂರು ಕೆರೆಯಿಂದ ಸಮೀ ಪದ ವಡ್ಡಗೆರೆ ಕೆರೆಗೆ ನೀರೆತ್ತಲು ಪಂಪ್ ಹೌಸ್ ನಿರ್ಮಾಣ ಹಾಗೂ ಪೈಪ್ ಲೈನ್ ಕಾಮಗಾರಿಗಳ ಬಗ್ಗೆ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ರಾಜೇಂದ್ರಪ್ರಸಾದ್ ಅವರಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಿರಂಜನಕುಮಾರ್, ಹುತ್ತೂರು ಕೆರೆ ಯಿಂದ ವಡ್ಡಗೆರೆಕೆರೆಗೆ ಮಾತ್ರ ಪೈಪ್ ಲೈನ್ ಅಳವಡಿಸಿ ಅಲ್ಲಿಂದ ಮುಂದಿನ ಕೆರೆ ಗಳಿಗೆ ಜಲಮಾರ್ಗದಲ್ಲಿಯೇ ನೀರು ಹರಿ ಸಿದರೆ ಮಾತ್ರ ಅಂತರ್ಜಲ ವೃದ್ಧಿಗೆ ನೆರ ವಾಗಲಿದೆ. ಆದ್ದರಿಂದ ಮುಂದಿನ ಕೆರೆ ಗಳಿಗೆ ಪೈಪ್ ಲೈನ್ ಅಳವಡಿಸುವುದಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತ ನಾಡುವುದಾಗಿ ಹೇಳಿದರು. ವಡ್ಡಗೆರೆ ಸಮೀಪ ಕೇವಲ 300 ಮೀಟರ್ ಪೈಪ್ ಲೈನ್ ಅಳವಡಿಸಬೇಕಾಗಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದ್ದು, ಸಂಪರ್ಕವನ್ನೂ ಪಡೆಯಲಾಗಿದೆ. ಮೋಟಾರುಗಳನ್ನೂ ಸಹಾ ಸ್ಥಳಕ್ಕೆ ತರ ಲಾಗಿದೆ. ಹಗಲಿರುಳು ಕಾಮಗಾರಿ ನಡೆಸಲಾಗುತ್ತಿದ್ದು ಪಂಪ್ ಹೌಸ್ ಕಾಮ ಗಾರಿ ಮುಕ್ತಾಯದ ಹಂತದಲ್ಲಿದೆ. ಮುಂದಿನ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಣಯ್, ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಮುಖಂಡರಾದ ಎನ್.ಮಲ್ಲೇಶ್, ಕುಂದಕೆರೆ ನಾಗಮಲ್ಲಪ್ಪ, ನಾಗರಾಜಪ್ಪ, ಎಸ್.ಸಿ.ಮಂಜುನಾಥ್, ಜಗದೀಶ್ ಸೇರಿದಂತೆ ಹಲವರು ಇದ್ದರು.