ಸಿಎನ್‍ಸಿಯಿಂದ ಸಂಭ್ರಮದ ಪುತ್ತರಿ ನಮ್ಮೆ

ಮಡಿಕೇರಿ, ಡಿ.9- ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ಪುತ್ತರಿ ನಮ್ಮೆಯನ್ನು ದಕ್ಷಿಣ ಕೊಡಗಿನ ಬಿರುನಾಣಿಯ ತೆರಾಲು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಬೊಟ್ಟಂಗಡ ಗಿರೀಶ್ ಹಾಗೂ ಸವಿತಾ ಗಿರೀಶ್ ದಂಪತಿ ಭತ್ತದ ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ದು ಮನೆಗೆ ತರಲಾಯಿತು.

ಗುರು, ಹಿರಿಯರು ಹಾಗೂ ಪ್ರಕೃತಿಗೆ ಪ್ರಾರ್ಥನೆ ಸಲ್ಲಿಸಿದ ನಾಚಪ್ಪ ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಸಾಂಪ್ರದಾಯಿಕ ಹಬ್ಬ, ಆಚಾರ, ವಿಚಾರಗಳನ್ನು ಇಡೀ ವಿಶ್ವಕ್ಕೆ ತಿಳಿಸಬೇಕೆನ್ನುವ ಉದ್ದೇಶದಿಂದ ಸಿಎನ್‍ಸಿ ಸಂಘಟನೆ ಕಳೆದ ಮೂರು ದಶಕ ಗಳಿಂದ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ ಎಂದರು.

ಬುಡಕಟ್ಟು ಜನಾಂಗ ಕೊಡವರ ಹಬ್ಬಗಳು ಸೂರ್ಯ, ಚಂದ್ರನ ಮೂಲಕ ವಿಕಸನಗೊಂಡಿವೆ. ಇಲ್ಲಿ ಮೂಡ ನಂಬಿಕೆ ಗಳಿಗೆ ಅವಕಾಶವಿಲ್ಲ, ನಮ್ಮ ಪೂರ್ವಜರು ಅಲಿಖಿತ ಮೌಖಿಕ ಕೊಡವ ಜಾನಪದ-ಕಾನೂನು ವ್ಯವಸ್ಥೆಗಳು ಮತ್ತು ಆಚರಣೆ ಗಳನ್ನು ಬಹಳ ಹಿಂದೆಯೇ ರೂಪಿಸಿದ್ದರು. ಅದನ್ನು ಇಲ್ಲಿಯವರೆಗೆ ಅನುಸರಿಸಿ ಕೊಂಡು ಬರಲಾಗಿದೆ. ಅದರಂತೆ ನಮ್ಮ ಹಿರಿಯರು ಹುಣ್ಣಿಮೆಯ ಚಕ್ರದಂತೆ ಹಬ್ಬಗಳನ್ನು ನಿರ್ಧರಿಸುತ್ತಿದ್ದಾರೆ. ಕೊಡವರಿಗೆ ಯಾವುದೇ ಧಾರ್ಮಿಕ ಕ್ರಿಯೆಯ ಏಜೆಂಟರುಗಳ ಅಗತ್ಯವಿಲ್ಲ. ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಕೊಡವರೇ ಕೊಡವರ ಜನಪದ ಆಚರಣೆಗಳನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು.

ನಮ್ಮ ನೆಲ, ಭಾಷೆÉ, ಜಾನಪದ, ಸಾಂಸ್ಕøತಿಕ, ಐತಿಹಾಸಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಂವಿಧಾನ ದಡಿಯಲ್ಲಿ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಬೊಟ್ಟಂಗಡ ಗಿರೀಶ್, ಸವಿತಾ ಗಿರೀಶ್, ಬೊಟ್ಟಂಗಡ ಸುಮನ್ ಸೀತಮ್ಮ, ಬೊಟ್ಟಂಗಡ ವಿಲೀನಾ, ಬೊಟ್ಟಂಗಡ ಮಾನಸ, ಬೊಟ್ಟಂಗಡ ಪುಷ್ಪ, ಕುಮಾರಿ ಬೊಟ್ಟಂಗಡ ವಂಶಿಕ, ಬೊಟ್ಟಂಗಡ ವಂಶಿಕ, ಬೊಜ್ಜಂಗಡ ಚಂಪಾ, ಅರೆಯಡ ಸವಿ, ಬೊಟ್ಟಂಗಡ ದೀಪಿಕಾ, ಕುಮಾರಿ ಬೊಜ್ಜಂಗಡ ಆಂಚಲ್, ಬಲ್ಯಮೀದೇರಿರ ಆಶಾ, ಕಲಿಯಂಡ ಪ್ರಕಾಶ್, ಬೊಟ್ಟಂಗಡ ಪೆಮ್ಮಯ್ಯ, ಬೊಟ್ಟಂಗಡ ಎಂ.ರಾಜು, ಅರೆಯಡ ಗಿರೀಶ್ ಕೊಡವ, ಕಂಡೇರ ಸುರೇಶ್, ಕಿರಿಯಮಾಡ ಶೆರಿನ್, ಅರೆಯಡ ಸಾವನ್ ಕೊಡವ, ಕಿರಿಯಮಾಡ ಶಾನ್ ಕೊಡವ, ಬೊಟ್ಟಂಗಡ ಜಯತ್ ಬೋಪಣ್ಣ, ಬೊಟ್ಟಂಗಡ ತಿಮ್ಮಣ್ಣ, ಬೊಟ್ಟಂ ಗಡ ರವಿ ಕರಿಯಪ್ಪ, ಬೊಟ್ಟಂಗಡ ರವಿ ಕರಿಯಪ್ಪ, ಬೊಟ್ಟಂಗಡ ತಿಮ್ಮಣ್ಣ, ಬೊಟ್ಟಂಗಡ ರವಿ ಕರಿಯಪ್ಪ, ಸೋಮಣ್ಣ, ಬಲ್ಯಮೀದೇರಿರ ಸುರೇಶ್ ಪೆಮ್ಮಯ್ಯ, ಬೊಟ್ಟಂಗಡ ಅಣ್ಣಯ್ಯ, ಬೊಜ್ಜಂಗಡ ನಂದ, ಬೊಟ್ಟಂಗಡ ಮೋಟಯ್ಯ, ಬೊಟ್ಟಂ ಗಡ ಪೂವಣ್ಣ, ಬೊಟ್ಟಂಗಡ ಪ್ರಣಮ್, ತನ್ವಿಶ್ ದೇವಯ್ಯ, ಬೊಟ್ಟಂಗಡ ಹರೀಶ್, ಬೊಳ್ಳೇರ ಟಿ.ಮುತ್ತಣ್ಣ ಮತ್ತಿತರರು ಪುತ್ತರಿ ನಮ್ಮೆಯಲ್ಲಿ ಪಾಲ್ಗೊಂಡಿದ್ದರು.