ಈಗ ಚಳಿಗಾಲವೋ, ಮಳೆಗಾಲವೋ: ಹವಾಮಾನ ಇಲಾಖೆಗೇ ಡೌಟು..!

ಬೆಂಗಳೂರು: ಜನವರಿ ಅಂದರೆ ಚಳಿಗಾಲ ಅನ್ನೋದು ಜನರ ಅಭಿಪ್ರಾಯ. ಆದರೆ ರಾಜ್ಯದಲ್ಲಿ ನಿನ್ನೆ ಯಿಂದ ಧಾರಾಕಾರ ಮಳೆ ಬೀಳುತ್ತಿದೆ. ಹಾಗಾಗಿ ಇದು ಚಳಿಗಾಲನಾ, ಇಲ್ಲ ಮಳೆ ಗಾಲನಾ ಅನ್ನೋ ಅನುಮಾನ ಶುರುವಾ ಗಿದೆ. ಈ ಅನುಮಾನ ಜನರಿಗೆ ಮಾತ್ರವಲ್ಲ ಹವಾಮಾನ ಇಲಾಖೆಗೂ ಇದೆ. ನಿಖರವಾಗಿ ಈಗ ಮಳೆಗಾಲವೋ, ಚಳಿಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ತಿಳಿಯಲು ಸರ್ಕಾರ ತಜ್ಞರನ್ನು ನೇಮಿಸಿದೆಯಂತೆ. ಈ ಸಮಿತಿ ರಾಜ್ಯದೆಲ್ಲೆಡೆ ಸಂಚರಿಸಿ ಹವಾಮಾನ ವರದಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎನ್ನಲಾಗುತ್ತಿದೆ.

ಮಳೆ ಸಾಧ್ಯತೆ: ಪೂರ್ವ ಅಲೆಗಳ ಪರಿಣಾಮದಿಂದ ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗಲಿದೆ. ಜೊತೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕ ಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ಈಶಾನ್ಯ ಮುಂಗಾರಿನ ಮಾರುತಗಳು ಪ್ರಬಲವಾಗಿರುವು ದರಿಂದ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣ ವಿದೆ. ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ.