ಬೆಳಗಾವಿ ಸುವರ್ಣಸೌಧದಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ

ಮತಾಂತರ ನಿಷೇಧ ಕಾಯ್ದೆ ಮಂಡನೆ ಸಾಧ್ಯತೆ ವಿಪಕ್ಷಗಳ ಅಸ್ತçಕ್ಕೆ ಪ್ರತಿ ಅಸ್ತç
ಕೃಷಿ ಕಾಯ್ದೆಯಲ್ಲಿ ಕೆಲವೊಂದು ಮಾರ್ಪಾಡು
ಬಿಟ್ ಕಾಯಿನ್ ವಿವಾದದ ಪ್ರತಿಧ್ವನಿ
ಮಳೆ ಹಾನಿಗೆ ಪರಿಹಾರ ಪ್ರಸ್ತಾಪ
ಕೋವಿಡ್‌ನಿಂದ ನಿಧನ: ಪರಿಹಾರ ವಿಳಂಬ

ಬೆAಗಳೂರು, ಡಿ. ೧೧(ಕೆಎಂಶಿ)- ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ, ಬಿಟ್ ಕಾಯಿನ್, ಮಳೆಯಿಂದ ಉಂಟಾದ ಬೆಳೆ ಹಾನಿ ಪರಿಹಾರದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜುಗೊಂಡಿವೆ. ಮತಾಂತರ ನಿಷೇಧ ಕಾಯ್ದೆ ಜಾರಿ ಗೊಳಿಸಲು ನಿರ್ಧರಿಸಿರುವ ಸರ್ಕಾರ ಪ್ರತಿಪಕ್ಷಗಳ ಅಸ್ತçಗಳನ್ನು ಎದುರಿಸಲು ಪ್ರತಿತಂತ್ರ ರೂಪಿಸಿದೆ.

ಅಧಿವೇಶನಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕಳೆದ ಎರಡು ದಿನ ಗಳಿಂದ ಅಧಿವೇಶನ ಪೂರ್ವ ಸಿದ್ಧತೆಗೆ ಸಂಬAಧಿಸಿದAತೆ ಅಧಿಕಾರಿಗಳೊಟ್ಟಿಗೆ ಚರ್ಚೆ ಮಾಡಿ, ಪ್ರತಿಪಕ್ಷಗಳ ಅಸ್ತçಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡಿಸಲು ಕರಡು ಪ್ರತಿ ಸಿದ್ಧಪಡಿಸಿದೆ. ಮತಾಂತರ ನಿಷೇಧ ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಲವಂತದ ಮತಾಂತರ
ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣ ಸಿದೆ. ಇದಲ್ಲದೆ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಾ ಅಂಗೀಕೃತವಾಗಿರುವ ತಿದ್ದುಪಡಿ ವಿಧೇಯಕದಲ್ಲಿ ಕೆಲವು ಮಾರ್ಪಾಟು ಮಾಡಲು ಸಜ್ಜಾಗಿದೆ. ಬಿಟ್ ಕಾಯಿನ್ ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ನಾಯಕರ ಪಾಲಿಗೆ ತಲೆನೋವಾಗಿ ಕಾಡುವ ಸಾಧ್ಯತೆ ಗಳು ದಟ್ಟವಾಗಿವೆ. ರೈತರು, ಕೋವಿಡ್ ಸಂತ್ರಸ್ತರು, ಬಡ-ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಸಂಕಟಗಳು ಮಿತಿ ಮೀರಿದ್ದು ಈ ಅಂಶವೇ ಸರ್ಕಾರಕ್ಕೆ ದೊಡ್ಡ ಮಟ್ಟದ ತಲೆನೋವಾಗಿ ಕಾಡುವುದು ಖಚಿತ.
ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬೆಳೆ ಮತ್ತು ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದು ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ.

ಕೋವಿಡ್ ಕಂಟಕ ಎದುರಾದ ನಂತರ ರಾಜ್ಯ ಸರ್ಕಾರದ ಬೊಕ್ಕಸ ಕ್ಷೀಣ ಸಿದ್ದು ಅದರ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ವರ್ಷ ಬಂಪರ್ ಆದಾಯ ತಂದುಕೊಡುತ್ತಿದ್ದ ಅಬಕಾರಿ ಬಾಬ್ತಿನಲ್ಲೂ ಈ ಬಾರಿ ನಿರೀಕ್ಷಿತ ಪ್ರಮಾಣದ ಆದಾಯ ಲಭ್ಯವಾಗದೇ ಇರುವುದು ಸರ್ಕಾರದ ಪಾಲಿಗೆ ತಲೆನೋವಾಗಿದೆ.
ಕೇಂದ್ರ ಸರ್ಕಾರದ ಜಿ.ಎಸ್.ಟಿ. ನೀತಿಯಿಂದ ಗಣನೀಯ ಪ್ರಮಾಣದ ಆದಾಯವನ್ನು ಕಳೆದುಕೊಂಡಿರುವ ಸರ್ಕಾರ,ಹೀಗೆ ತನಗಾಗುತ್ತಿರುವ ಕೊರತೆಗೆ ಪ್ರತಿಯಾಗಿ ಕೇಂದ್ರದಿAದ ನಿರೀಕ್ಷಿಸಿದಷ್ಟು ಹಣ ಬರುತ್ತಿಲ್ಲ.ಇದೇ ಕಾರಣಕ್ಕಾಗಿ ಕಳೆದ ಬಜೆಟ್‌ನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಬಜೆಟ್ ಗಾತ್ರವನ್ನು ಕಡಿತಗೊಳಿಸಲಾ ಗಿತ್ತಾದರೂ ಈ ಬಾರಿ ನಿಗದಿಗೊಳಿಸಿದ ಹಣವನ್ನೂ ಇಲಾಖಾವಾರು ಬಿಡುಗಡೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಕೆಲಸ ಕಾರ್ಯಗಳಾಗದೆ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಕುಪಿತಗೊಂಡಿದ್ದಾರೆ. ಈ ಮಧ್ಯೆ ಕೋವಿಡ್‌ನಿಂದ ನಿಧನರಾದವರ ಕುಟುಂಬಗಳಿಗೆ ತಲಾ ಲಕ್ಷ ರೂ ಪರಿಹಾರ ನೀಡುವುದಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಘೋಷಿಸಲಾಗಿತ್ತಾದರೂ ಇದುವರೆಗೆ ಸದರಿ ಪರಿಹಾರದ ಮೊತ್ತ ಸಂಬAಧಿಸಿದವರಿಗೆ ತಲುಪಿಲ್ಲ ಈ ಬಗ್ಗೆಯು ಚರ್ಚೆಯಾಗಲಿದೆ.

ರಾಜ್ಯದ ಎಲ್ಲೆಡೆಯಿಂದ ಸಂತ್ರಸ್ತ ಕುಟುಂಬಗಳ ಕೂಗು ಕೇಳಿ ಬರುತ್ತಿದ್ದು ಈ ಅಂಶವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತ. ಆದರೆ ರೈತರು ಅನುಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ರೂಪದಲ್ಲಿ ಕಿಂಚಿತ್ತಾದರೂ ನೆರವು ನೀಡಬೇಕಾದ ಸರ್ಕಾರ ಮೌನವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಲಿವೆ.
ಈ ಮಧ್ಯೆ ರಾಜ್ಯದ ಕೈಗಾರಿಕಾ ಬೆಳವಣ ಗೆ ಕುಂಠಿತವಾಗಿದ್ದು ಅಸಂಖ್ಯಾತ ಉದ್ಯೋಗಗಳು ನಷ್ಟವಾಗಿವೆ. ಆದರೆ ಇಂತಹ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ ಸರ್ಕಾರ ಯಾವ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ಮಾಡಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪ. ಕೋವಿಡ್ ಕಾಲಘಟ್ಟದಲ್ಲಿ ಸರ್ಕಾರ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗದೆ ಕೊರತೆ ಎದುರಿಸುತ್ತಿರುವುದು ಸಹಜ. ಆದರೆ ಲಭ್ಯವಿರುವ ಹಣಕಾಸನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡುವ ಪ್ರಾಮಾಣ ಕತೆ ಸರ್ಕಾರದಿಂದ ಆಗುತ್ತಿಲ್ಲ ಎಂಬುದು ಪ್ರತಿಪಕ್ಷಗಳ ದೂರು. ಹೀಗೆ ಹತ್ತು ಹಲವು ವಿಷಯಗಳು ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿ ಸರ್ಕಾರಕ್ಕೆ ತಲೆನೋವಾಗುವುದು ಖಚಿತವಾಗಿದ್ದು ಇದನ್ನು ಸರ್ಕಾರ ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.