ಜನರ ಆಶೋತ್ತರಗಳಿಗೆ ಧಕ್ಕೆಯಾಗದಂತೆ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತೇನೆ

ಮೈಸೂರು, ನ.21(ಎಸ್‍ಬಿಡಿ)- ಜನರ ಆಶೋತ್ತರಗಳಿಗೆ ಧಕ್ಕೆ ಆಗದಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಭರವಸೆ ನೀಡಿದರು.

ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ಗೆಲುವಲ್ಲ, ಮತ ದಾರರ ಗೆಲುವು. ನನ್ನ ಬೆನ್ನೆಲುವಾಗಿ ನಿಂತು ಸಹಕರಿ ಸಿದ ಎಲ್ಲಾ ಮುಖಂಡರ ಗೆಲುವು. ಅಧಿಕ ಮತಗಳನ್ನು ನೀಡಿ ಗೆಲುವು ನೀಡಿರುವ ಜನರ ಆಶೋತ್ತರಗಳಿಗೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ನಾಡು-ನುಡಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ಸಂಭ್ರಮಾಚರಣೆ: ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಡ್ಡೀಕೆರೆ ಗೋಪಾಲ್ ಅವರ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿ ದ್ದರು. ಮತ ಎಣಿಕೆ ನಡುವೆಯೇ ತಾಲೂಕುವಾರು ಮತಗಳ ವಿವರ ಪಡೆದು, ಗೆಲುವು ನಿಶ್ಚಿತ ಎನ್ನು ವುದು ಖಚಿತವಾಗುತ್ತಿದ್ದಂತೆ ಗೋಪಾಲ್ ಅವರಿಗೆ ಜೈಕಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅನಾರೋಗ್ಯದ ಕಾರಣ ತಡವಾಗಿ ಮತ ಎಣಿಕೆ ಕೇಂದ್ರದ ಬಳಿ ಆಗಮಿಸಿದ ಮಡ್ಡೀಕೆರೆ ಗೋಪಾಲ್ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ ಹಾಕಿ ಅಭಿನಂದಿಸಿದರು. ನಂತರ ಅವರನ್ನು ಭುಜದ ಮೇಲೆ ಹೊತ್ತು, ಕುಣಿದು ಕುಪ್ಪಳಿಸಿದರು.

ಜಿಲ್ಲಾ ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ವೈ.ಡಿ. ರಾಜಣ್ಣ, ಎಂ.ಚಂದ್ರಶೇಖರ್, ಮಾನಸ, ಮಾಜಿ ಕಾರ್ಯದರ್ಶಿ ಕೆ.ಎಸ್.ಶಿವರಾಮ್, ಅರವಿಂದ ಶರ್ಮ, ಮೂಗೂರು ನಂಜುಂಡ ಸ್ವಾಮಿ, ಡೈರಿ ವೆಂಕಟೇಶ್, ಅಶೋಕ್ ಮತ್ತಿತರರು ಹಾಜರಿದ್ದರು.

ಪಟಾಕಿ ಕಿಡಿ: ಮಡ್ಡೀಕೆರೆ ಗೋಪಾಲ್ ಆಗಮಿ ಸುವ ಮುನ್ನವೇ ಮತ ಎಣಿಕೆ ಕೇಂದ್ರದ ಗೇಟ್ ಬಳಿ ಸರ ಪಟಾಕಿಗೆ ಬೆಂಕಿ ಹೊತ್ತಿಸಲಾಯಿತು. ಅದು ಸಿಡಿಯಲು ಶುರುವಾಗುತ್ತಿದ್ದಂತೆ ಯಾರೋ ಒಬ್ಬರು ಅದನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗೆ ಬಂದರು. ಫುಟ್‍ಪಾತ್‍ನಲ್ಲಿ ನಿಂತಿದ್ದವರು, ವಾಹನಗಳ ನಡು ವೆಯೇ ನಡೆದು ಹೋದರು. ಆ ವೇಳೆ ಕಿಡಿ ತಗು ಲುವ ಭಯದಲ್ಲಿ ಜನ ದೂರ ಓಡಿಹೋಗಿದ್ದು ಕಂಡು ಬಂದಿತು. ಸಂಭ್ರಮಾಚರಣೆ ವೇಳೆ ಜೆಎಲ್‍ಬಿ ರಸ್ತೆ-ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿ ಸುವ ರಸ್ತೆ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾ ಗಿತ್ತು. ಮತಗಟ್ಟೆ ಕೇಂದ್ರದ ಆವರಣ, ಹಾದಿ ಬೀದಿಯಲ್ಲಿ ಅಭ್ಯರ್ಥಿಗಳ ಪ್ರಚಾರ ಭಿತ್ತಿಪತ್ರ, ಮಾದರಿ ಮತ ಪತ್ರಗಳು ಹರಡಿದ್ದರಿಂದ ಅದನ್ನು ತುಳಿದುಕೊಂಡೇ ಓಡಾಡುವಂತಾಗಿತ್ತು.