ಪೆÇನ್ನಂಪೇಟೆ ಠಾಣೆಯಲ್ಲಿ ವರ್ತಕರ ಸಭೆ

ಪೊನ್ನಂಪೇಟೆ, ಆ.19- ಪೆÇನ್ನಂಪೇಟೆ ಠಾಣಾ ಆವರಣದಲ್ಲಿ ಪೆÇನ್ನಂಪೇಟೆ ನಗರದ ವರ್ತಕರ ಸಭೆಯನ್ನು ಪೆÇನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್ ಮಾತನಾಡಿ, ಎಲ್ಲಾ ವರ್ತಕರು ತಮ್ಮ ಅಂಗಡಿ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸು ವಂತೆ ತಿಳಿಸಿದರು. ಮಳೆಗಾಲದ ಸಮಯ ವಾಗಿದ್ದು, ನಗರದ ಕೆಲವು ಭಾಗದಲ್ಲಿ ರಾತ್ರಿ ಕಳ್ಳತನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವರ್ತಕರು ತಮ್ಮ ಅಂಗಡಿ ಮಳಿಗೆಯ ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದಲ್ಲಿ ಅಂಗಡಿಯ ಭದ್ರತೆಗೆ ಹಾಗೂ ಇಲಾಖೆಗೆ ಸಹಕಾರಿ ಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು 3 ತಿಂಗಳ ಸಮಯಾವಕಾಶ ನೀಡಬೇಕಾಗಿ ವರ್ತಕ ರಾದ ಅಸೀಸ್ ಕೋರಿಕೊಂಡರು. ಪಾರ್ಕಿಂಗ್ ಗಾಗಿ ಸೂಕ್ತ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಲು ಸಲಹೆ ನೀಡಿದರು.

ಪೆÇನ್ನಂಪೇಟೆ ತಾಲೂಕು ಕೇಂದ್ರವಾಗಿದ್ದು, ಪೆÇೀಲೀಸ್ ಇಲಾಖೆಯ ವತಿಯಿಂದ ಪೆÇನ್ನಂ ಪೇಟೆ ನಗರದ ಆಯ್ದ ಭಾಗಗಳಲ್ಲಿ ಇಲಾಖಾ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸುವಂತೆ ಪೆÇನ್ನಂಪೇಟೆ ನಗರ ಪೆÇಲೀಸ್ ಠಾಣೆಯಿಂದ ಜಿಲ್ಲಾ ಎಸ್‍ಪಿಯವರಿಗೆ ಕೋರಿಕೆ ಸಲ್ಲಿಸುವಂತೆ ಉತ್ತಪ್ಪನವರು ಸಲಹೆ ನೀಡಿದರು.