ಮೈಸೂರಿನ ವಿವಿಧೆಡೆ ಗಿಡ ನೆಟ್ಟು `ವಿಶ್ವ ಪರಿಸರ ದಿನ’ ಆಚರಣೆ

ಮೈಸೂರು, ಜೂ.5(ಎಂಟಿವೈ)- ವಿಶ್ವ ಪರಿಸರ ದಿನದಂಗವಾಗಿ ಮೈಸೂರಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಶನಿವಾರ ಪರಿಸರಕ್ಕೆ ಪೂರಕವಾದ ಗಿಡ ಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷ ಣೆಗೆ ಆದ್ಯತೆ ನೀಡುವ ವಾಗ್ದಾನ ಮಾಡಿದರು.

ಅರಣ್ಯ ಇಲಾಖೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ ಮೈಸೂರಿನ ಬಂಡೀಪಾಳ್ಯ ದಲ್ಲಿ ಅರಣ್ಯ ಇಲಾಖೆ ನಿರ್ವಹಿಸುವ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಜಾತಿಯ ಸಸಿಗಳನ್ನು ವೀಕ್ಷಿಸಿದರು. ಕೋವಿಡ್ ಸಾಂಕ್ರಾ ಮಿಕದ ಕಠಿಣ ಸಂದರ್ಭದಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಸಸಿ ಗಳನ್ನು ಬೆಳೆಸಿರುವುದನ್ನು ಶ್ಲಾಘಿಸಿದರು. ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು. ಮೈಸೂರು ನಗರ ಹಾಗೂ ಜಿಲ್ಲೆಯ ಹಸರೀ ಕರಣ ಕಾರ್ಯಕ್ಕೆ ವೇಗ ನೀಡಲು ಅಧಿಕಾರಿ ಗಳಿಗೆ ಸೂಚಿಸಿದರು. ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಡಿಸಿಎಫ್ ಕೆ.ಸಿ.ಪ್ರಶಾಂತ್ ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಶ್ರೀಧರ್, ಆರ್‍ಎಫ್‍ಓ ಅನಿತ್ ರಾಜ್ ಮತ್ತಿತರರಿದ್ದರು.

ಅಂತರಸಂತೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯ ದಲ್ಲಿ ರಸ್ತೆ ಬದಿ ಹಾಗೂ ಕಾಕನಕೋಟೆ ಸಫಾರಿ ಕೇಂದ್ರ ಆವರಣದಲ್ಲಿ 250ಕ್ಕೂ ಹೆಚ್ಚು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಅಂತರಸಂತೆ ವನ್ಯ ಜೀವಿ ವಲಯದಲ್ಲಿ ಗಿಡ ನೆಡುವ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮೇಟಿಕುಪ್ಪೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಎಸ್.ಪಿ.ಮಹಾದೇವ್, ಆರ್‍ಎಫ್‍ಓ ಎಸ್.ಎಸ್.ಸಿದ್ದರಾಜು, ಗೌರವ ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ, ಜೀವನ್ ಕೃಷ್ಣಪ್ಪ ಹಾಗೂ ಸಿಬ್ಬಂದಿ ಇದ್ದರು.

ಬಿಜೆಪಿ: ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಶ್ವ ಪರಿಸರ ದಿನ ಆಚರಿಸಿತು. ಡಿ.ದೇವರಾಜ ಅರಸು ಅಭಿ ವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ ಬಾದಾಮಿ ಗಿಡ ನೆಟ್ಟರು. ವಿ.ವಿ.ಪುರಂ ಪೆÇಲೀಸ್ ಠಾಣೆ ವೃತ್ತ ನಿರೀಕ್ಷಕ ದಿವಾಕರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಹಿಂದುಳಿದ ವರ್ಗಗಳ ಮೋರ್ಚಾ ನಗ ರಾಧ್ಯಕ್ಷ ಜೋಗಿಮಂಜು, ಪ್ರಧಾನ ಕಾರ್ಯದರ್ಶಿ ಗೋಪಾಲ್ ಇದ್ದರು.

ಮಹಾರಾಣಿ ಕಾಲೇಜು: ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಸಮಾನ ಮನಸ್ಕರ ವೇದಿಕೆ ಹಾಗೂ ಕ್ರೆಡಿಟ್-ಐ ಸಂಸ್ಥೆಯಿಂದ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಬಡಾವಣೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಕೊರೊನಾ ಸೋಂಕಿನಿಂದ ಗುಣ ಕಂಡಿರುವ ಡಾ. ಎಂ.ಪಿ.ವರ್ಷ, ರಚನಾ ವರ್ಷ ಗಿಡನೆಟ್ಟರು. ಈ ಸಂದರ್ಭ ಕ್ಲೀನ್ ಮೈಸೂರು ಫೌಂಡೇ ಷನ್ ಲೀಲಾ ಶಿವಕುಮಾರ್, ಶೈಲಜೇಷ್, ಎನ್‍ಎಸ್‍ಎಸ್ ಘಟಕ ಸಂಚಾಲಕ ಎಸ್.ಜಿ. ರಾಘವೇಂದ್ರ, ಪೆÇ್ರ.ಎಂ.ಎಸ್. ಮನೋ ನ್ಮಣಿ, ಸಮಾನ ಮನಸ್ಕರ ವೇದಿಕೆಯ ಮನು, ಸುಶೀಲ ಮತ್ತಿತರರಿದ್ದರು.

ಕಾಂಗ್ರೆಸ್: ಕಾಂಗ್ರೆಸ್‍ನ ಮೈಸೂರು ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಗಿಡ ನೆಡಲಾಯಿತು. ಮಾಜಿ ಶಾಸಕ ವಾಸು, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಮಾಜಿ ಮೇಯರ್ ಪುಷ್ಪ ಲತಾ ಟಿ.ಬಿ.ಚಿಕ್ಕಣ್ಣ, ಕೆಪಿಸಿಸಿ ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಮುಖಂಡರಾದ ಶ್ರೀನಾಥ್ ಬಾಬು, ಡೈರಿ ವೆಂಕಟೇಶ್, ಅಶೋಕ್, ರವಿಕುಮಾರ್ ಮತ್ತಿತರರಿದ್ದರು.

ಎಕ್ಸೆಲ್ ಪ್ಲಾಂಟ್: ವಿದ್ಯಾರಣ್ಯಪುರಂ ನಲ್ಲಿರುವ ಎಕ್ಸೆಲ್ ಪ್ಲಾಂಟ್‍ನಲ್ಲಿ ಶನಿವಾರ ಬೆಳಗ್ಗೆ ಪಾಲಿಕೆ ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳ ತಂಡ 20ಕ್ಕೂ ಅಧಿಕ ಗಿಡ ನೆಟ್ಟು, ನೀರುಣಿಸಿ ಪರಿಸರ ದಿನ ಆಚರಿಸಿದರು. ಈ ಸಂದರ್ಭ ಆರೋಗ್ಯಾಧಿಕಾರಿ ಡಾ.ಹೇಮಂತ್, ಎಇಇ ಮೋಹನ್, ಪರಿಸರ ಅಭಿಯಂತರರಾದ ಎಸ್.ಮೈತ್ರಿ, ಹರೀಶ್, ಶರತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.